ತಾಜ್‌ಮಹಲ್‌ ಷಹಜಹಾನ್ ನಿರ್ಮಿತಿಯಲ್ಲ: ಹಿಂದೂ ಸೇನೆಯ ಅರ್ಜಿ ಪರಿಶೀಲಿಸುವಂತೆ ಎಎಸ್ಐಗೆ ಸೂಚಿಸಿದ ದೆಹಲಿ ಹೈಕೋರ್ಟ್

ಹಿಂದೂ ಸೇನೆ ಈ ಸಂಬಂಧ ಎಎಸ್ಐಗೆ ಈ ಹಿಂದೆಯೇ ಪತ್ರ ಬರೆದಿದ್ದರೂ ಅದು ಇನ್ನೂ ಯಾವುದೇ ನಿರ್ಧಾರ ತೆಗೆದಕೊಂಡಿಲ್ಲ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.
Taj Mahal
Taj Mahal

ತಾಜ್ ಮಹಲ್‌ನ ಸರಿಯಾದ ಇತಿಹಾಸ ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹಿಂದೂ ಸೇನೆ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್‌ ಶುಕ್ರವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸೂಚಿಸಿದೆ.

ತಾಜ್ ಮಹಲ್ ಮೂಲತಃ ರಾಜಾ ಮಾನ್ ಸಿಂಗ್ ಅವರ ಅರಮನೆಯಾಗಿದ್ದು, ಅದನ್ನು ಮೊಘಲ್ ಚಕ್ರವರ್ತಿ ಷಹಜಹಾನ್‌ ನಿರ್ಮಿಸಲಿಲ್ಲ ಎಂದು ಹೇಳಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಆಲಿಸಿತು.

ಸಂಘ ಇದೇ ರೀತಿಯ ಅರ್ಜಿಯನ್ನು ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿತ್ತು. ಆಗ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಎಎಸ್‌ಐಗೆ ಮನವಿ ಸಲ್ಲಿಸಲು ಸಂಘಟನೆಗೆ ಸೂಚಿಸಿತ್ತು. ಆದರೆ ಎಎಸ್‌ಐ ತಮ್ಮ ಮನವಿಯ ಕುರಿತು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಇಂದು ಹೈಕೋರ್ಟ್‌ಗೆ ಹಿಂದೂ ಸೇನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮನವಿಯನ್ನು ಪರಿಶೀಲಿಸುವಂತೆ ಎಎಸ್‌ಐಗೆ ಪೀಠ ಸೂಚಿಸಿತು.

Also Read
ತಾಜ್ ಮಹಲ್ ನಿರ್ಮಿಸಿದ್ದು ಷಹಜಹಾನ್ ಅಲ್ಲ: ದೆಹಲಿ ಹೈಕೋರ್ಟ್‌ಗೆ ಪಿಐಎಲ್; ಇತಿಹಾಸ ಪುಸ್ತಕಗಳ ತಿದ್ದುಪಡಿಗೆ ಒತ್ತಾಯ

ತಾಜ್ ಮಹಲ್ ಮೂಲತಃ ರಾಜಾ ಮಾನ್ ಸಿಂಗ್ ಅವರ ಅರಮನೆಯಾಗಿತ್ತು. ನಂತರ ಅದನ್ನು ಷಹಜಹಾನ್ ನವೀಕರಿಸಿದರು ಎಂದು ಹಿಂದೂ ಸೇನೆ ಅಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅರ್ಜಿಯಲ್ಲಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ತಾಜ್ ಮಹಲ್ ನಿರ್ಮಾಣಕ್ಕೆ ಸಂಬಂಧಿಸಿದ ಐತಿಹಾಸಿಕ ತಪ್ಪು ಸಂಗತಿಗಳನ್ನು ಇತಿಹಾಸದ ಪುಸ್ತಕಗಳಿಂದ ತೆಗೆದುಹಾಕಬೇಕು ಮತ್ತು ರಾಜ ಮಾನ್ ಸಿಂಗ್ ಅರಮನೆಯ ಅಸ್ತಿತ್ವ ಮತ್ತು ಅದರ ಕಾಲಮಾನ ಕುರಿತು ತನಿಖೆ ನಡೆಸಲು ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ತನಿಖೆ ನಡೆಸಲು ನಿರ್ದೇಶನ ನೀಡಬೇಕು. ಈ ಕುರಿತು ಎಎಸ್‌ಐ, ಕೇಂದ್ರ ಸರ್ಕಾರ, ಭಾರತದ ರಾಷ್ಟ್ರೀಯ ದಾಖಲೆಗಳು ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದರು. ಅರ್ಜಿದಾರರ ಪರ ವಕೀಲರಾದ ಶಶಿರಂಜನ್ ಕುಮಾರ್ ಸಿಂಗ್ ಮತ್ತು ಮಹೇಶ್ ಕುಮಾರ್ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com