ತಾನು ಮೊಘಲರ ಉತ್ತರಾಧಿಕಾರಿ, ಕೆಂಪುಕೋಟೆ ತನಗೆ ಸೇರಬೇಕೆಂದು ಕೋರಿದ್ದ ಮಹಿಳೆಯ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ತಮ್ಮ ಕುಟುಂಬದ ಸ್ವಾಧೀನದಲ್ಲಿದ್ದ ಕೆಂಪುಕೋಟೆ 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರ ವಶವಾಯಿತು. ಬಳಿಕ ಬಹದ್ದೂರ್ ಶಾ ಜಾಫರ್ ಅವರನ್ನು ದೇಶದಿಂದ ಗಡಿಪಾರು ಮಾಡಲಾಯಿತು ಎಂದು ಅರ್ಜಿದಾರರು ವಾದಿಸಿದ್ದರು.
Bahadur Shah Zafar, Red Fort

Bahadur Shah Zafar, Red Fort

ತಾನು ಮೊಘಲ್ ಸಾಮ್ರಾಜ್ಯದ ಕೊನೆಯ ಮೊಘಲ್ ಚಕ್ರವರ್ತಿಎರಡನೇ ಬಹದ್ದೂರ್ ಶಾ ಜಫರ್ ಅವರ ಉತ್ತರಾಧಿಕಾರಿಯಾಗಿದ್ದು ಈ ಕಾರಣಕ್ಕೆ ದೆಹಲಿಯ ಕೆಂಪುಕೋಟೆಯನ್ನು ತಮ್ಮ ಸ್ವಾಧೀನಕ್ಕೆ ಒಪ್ಪಿಸಬೇಕು ಎಂದು ಕೋರಿ ಸುಲ್ತಾನಾ ಬೇಗಂ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

ತಾನು ಎರಡನೇ ಬಹದ್ದೂರ್‌ ಶಾ ಜಫರ್‌ ಅವರ ಮೊಮ್ಮಗನ ವಿಧವಾ ಪತ್ನಿ ಎಂದು ಸುಲ್ತಾನಾ ಬೇಗಂ ಹೇಳಿಕೊಂಡಿದ್ದರು. ತಮ್ಮ ಕುಟುಂಬದ ಸ್ವಾಧೀನದಲ್ಲಿದ್ದ ಕೆಂಪುಕೋಟೆ 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರ ವಶವಾಯಿತು. ಬಳಿಕ ಬಹದ್ದೂರ್ ಶಾ ಜಫರ್ ಅವರನ್ನು ದೇಶದಿಂದ ಗಡಿಪಾರು ಮಾಡಲಾಯಿತು. ಕೆಂಪುಕೋಟೆಯ ಸ್ವಾಮ್ಯ ಮೊಘಲರ ಕೈತಪ್ಪಿತು ಎಂದು ಅರ್ಜಿದಾರರು ವಾದಿಸಿದ್ದರು.

Also Read
[ಸಂವಿಧಾನ ದಿನದ ವಿಶೇಷ] ಮೂಲ ಸಂವಿಧಾನದಲ್ಲಿನ ಭಾರತದ ಶ್ರೀಮಂತ, ಸಾಂಸ್ಕೃತಿಕ ಇತಿಹಾಸ ಬಿಂಬಿಸುವ ಚಿತ್ರಗಳ ನೋಟ

ನ್ಯಾಯಾಲಯದ ಮೆಟ್ಟಿಲೇರಲು ಕುಟುಂಬ 150 ವರ್ಷಕ್ಕೂ ಹೆಚ್ಚು ಕಾಲ ವಿಳಂಬ ಮಾಡಿದ್ದೇಕೆ ಎಂದು ನ್ಯಾ. ರೇಖಾ ಪಲ್ಲಿ ಅವರಿದ್ದ ಪೀಠ ಪ್ರಶ್ನಿಸಿತು. ಅಲ್ಲದೆ ಅರ್ಜಿದಾರೆ ಕೊನೆಯ ಮೊಘಲ್‌ ಚಕ್ರವರ್ತಿಯ ಸಂಬಂಧಿ ಎಂಬ ಹೇಳಿಕೆ ಬಂಬಲಿಸುವ ಯಾವುದೇ ದಾಖಲೆಗಳಿಲ್ಲ ಎಂದ ಪೀಠ ಅವರ ಉಳಿದ ಉತ್ತರಾಧಿಕಾರಿಗಳು ಮನವಿ ಸಲ್ಲಿಸದೇ ಇರುವಾಗ ಅರ್ಜಿದಾರೆ ಅದನ್ನು ಮಾಡಬಹುದೇ ಎಂದು ಪ್ರಶ್ನಿಸಿತು. ಅಲ್ಲದೆ ತಾನು ಅನಕ್ಷರಸ್ಥೆ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಲು ವಿಳಂಬವಾಯಿತು ಎಂಬ ಬೇಗಂ ಅವರ ವಾದವನ್ನು ನ್ಯಾಯಾಲಯ ಒಪ್ಪದೆ ಅತಿಯಾದ ವಿಳಂಬದ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಿತು.

ನ್ಯಾಯಾಲಯ ಆದೇಶವನ್ನು ಓದುತ್ತಿದ್ದಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಕೆಂಪುಕೋಟೆ ಸರ್ಕಾರದ ಕೈತಪ್ಪದಂತೆ ನೋಡಿಕೊಂಡದ್ದಕ್ಕೆ ತಾನು ಕೃತಜ್ಞನಾಗಿರಬೇಕು ಎಂದರು. ವಕೀಲ ವಿವೇಕ್‌ ಮೋರೆ ಅರ್ಜಿದಾರರನ್ನು ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com