NEET UG 2022 and Delhi HC
ಸುದ್ದಿಗಳು
ನೀಟ್ ಯುಜಿ 2022 ಮುಂದೂಡಿಕೆ ಕೋರಿಕೆ: ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
"ಇದು ಸಂಪೂರ್ಣವಾಗಿ ತಪ್ಪು ಗ್ರಹಿಕೆಯ ಅರ್ಜಿ," ಎಂದ ನ್ಯಾಯಾಲಯ.
ಪದವಿ ಪೂರ್ವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET UG -2022) ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ನೀಟ್ ಮತ್ತು ಇತರ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಪರೀಕ್ಷಾ ದಿನಾಂಕಗಳಲ್ಲಿ ಘರ್ಷಣೆ ಇದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಏಕಸದಸ್ಯ ಪೀಠ ತಳ್ಳಿ ಹಾಕಿತು.
ಇದು ಸಂಪೂರ್ಣವಾಗಿ ತಪ್ಪು ಗ್ರಹಿಕೆಯ ಅರ್ಜಿ. ಅದಕ್ಕೆ ಯಾವುದೇ ಅರ್ಹತೆ ಇಲ್ಲ. ವಿದ್ಯಾರ್ಥಿಗಳಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಅರ್ಜಿಗಳನ್ನು ಸಲ್ಲಿಸಿದರೆ ನ್ಯಾಯಾಲಯ ದಂಡ ವಿಧಿಸಲು ಹಿಂಜರಿಯುವುದಿಲ್ಲ ಎಂದು ಪೀಠ ಎಚ್ಚರಿಸಿ ಅರ್ಜಿಯನ್ನು ವಜಾಗೊಳಿಸಿತು. ಪರೀಕ್ಷೆ ಜುಲೈ 17ರಂದು ನಡೆಯಲಿದೆ.
ನೀಟ್ ಯುಜಿ, ಜೆಇಇ, ಸಿಯುಇಟಿ ಪರೀಕ್ಷಾ ದಿನಗಳ ನಡುವಿನ ಅಂತರ ಕೇವಲ ಒಂದು ಅಥವಾ ಎರಡು ದಿನಗಳಷ್ಟು ಕಡಿಮೆ ಇದ್ದು ವೇಳಾಪಟ್ಟಿ ಘರ್ಷಣೆಯಾಗುತ್ತದೆ ಎಂದು ವಿದ್ಯಾರ್ಥಿಗಳ ಗುಂಪೊಂದು ಅರ್ಜಿ ಸಲ್ಲಿಸಿತ್ತು.