ʼಲುಲುʼ ಸಂಸ್ಥಾಪಕ ಅಲಿ ವಿರುದ್ಧದ ಮಾನಹಾನಿಕರ ವಸ್ತುವಿಷಯ ತೆಗೆದುಹಾಕಲು ಸುದ್ದಿ ಪೋರ್ಟಲ್‌ಗೆ ದೆಹಲಿ ಹೈಕೋರ್ಟ್ ಆದೇಶ

ತಮ್ಮ ವಿರುದ್ಧ ಶಾಜನ್ ಸ್ಕಾರಿಯಾ ಹಾಗೂ ಅವರ ಸುದ್ದಿ ಪೋರ್ಟಲ್ ʼಮರುನಾದನ್ ಮಲಯಾಳಿʼ ಮಾನಹಾನಿಕರ ಮತ್ತು ದುರುದ್ದೇಶಪೂರಿತ ಪ್ರಚಾರ ನಡೆಸುತ್ತಿದೆ ಎಂದು ಎಂ ಎ ಯೂಸುಫ್ ಅಲಿ ದೂರಿದ್ದರು.
Lulu Group founder MA Yusuff Ali and Marunadan Malyali
Lulu Group founder MA Yusuff Ali and Marunadan Malyali

ಲುಲು ಗ್ರೂಪ್ ಇಂಟರ್‌ನ್ಯಾಶನಲ್ ಸಂಸ್ಥಾಪಕ ಎಂ ಎ ಯೂಸುಫ್ ವಿರುದ್ಧ ತನ್ನ ಜಾಲತಾಣ, ಯೂಟ್ಯೂಬ್ ವಾಹಿನಿ ಹಾಗೂ ಇತರೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟವಾದ ಎಲ್ಲಾ ವಸ್ತುವಿಷಯವನ್ನು ತಕ್ಷಣವೇ ತೆಗೆದುಹಾಕುವಂತೆ ಮಲಯಾಳಂ ಸುದ್ದಿ ಪೋರ್ಟಲ್‌ ʼಮರುನಾದನ್‌ ಮಲಯಾಳಿʼ ಮತ್ತದರ ಸಂಪಾದಕ ಶಾಜನ್‌ ಸ್ಕರಿಯಾ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ಆದೇಶ ನೀಡಿದೆ.

ಸ್ಕಾರಿಯಾ ಅವರು ತಮ್ಮ ವಿರುದ್ಧ 2013ರಿಂದ ಮಾನಹಾನಿಕರ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಯೂಸುಫ್‌ ಅಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾ. ಚಂದ್ರಧಾರಿ ಸಿಂಗ್‌ ಈ ಆದೇಶ ನೀಡಿದ್ದಾರೆ.

Also Read
[ಚುಟುಕು] ಲುಲು ಮಾಲ್: ಪಾರ್ಕಿಂಗ್‌ ಶುಲ್ಕ ಮೇಲ್ನೋಟಕ್ಕೇ ಅಕ್ರಮ; ಲಿಫ್ಟ್‌ಗೂ ಶುಲ್ಕ ನೀಡಬೇಕೆ?: ಕೇರಳ ಹೈಕೋರ್ಟ್‌

ಆದೇಶ ಪಾಲಿಸಲು ವಿಫಲವಾದರೆ ಗೂಗಲ್ ಮತ್ತು ಯೂಟ್ಯೂಬ್ ಸಂಸ್ಥೆಗಳೇ ಆ ಮಾನಹಾನಿಕರ ವಸ್ತುವಿಷಯವನ್ನು ಅಂತರ್ಜಾಲದಿಂದ ತೆಗೆದುಹಾಕಬೇಕು. ಜೊತೆಗೆ ಪ್ರಕರಣದ ಮುಂದಿನ ವಿಚಾರಣೆಯವರೆಗೂ ಸುದ್ದಿವಾಹಿನಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಸ್ಕಾರಿಯಾ ಅವರು ಮಾಡಿದ ಆರೋಪಗಳು ಅಸಹ್ಯಕರವಾಗಿದ್ದು ತಮ್ಮ ಖ್ಯಾತಿ ಮತ್ತು ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಅಪಪ್ರಚಾರ ಮಾಡಲಾಗಿದೆ. , ಸ್ಕಾರಿಯಾ ಅವರ ವಿರುದ್ಧ ಕೇರಳದ ನ್ಯಾಯಾಲಯವೊಂದು ಈಗಾಗಲೇ ತಡೆಯಾಜ್ಞೆ ಆದೇಶ ನೀಡಿದ್ದರೂ ತಮ್ಮ ವಿರುದ್ಧ ಸುಳ್ಳು, ಸಂಚಿನಿಂದ ಕೂಡಿದ ಹಾಗೂ ಪ್ರಚೋದನಕಾರಿ ವಸ್ತುವಿಷಯಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಯೂಸುಫ್‌ ಅಲಿ ಪರ ವಕೀಲರು ವಾದಿಸಿದ್ದರು.

ವಾದಗಳನ್ನು ಆಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ ಮೇಲ್ನೋಟಕ್ಕೆ ಸ್ಕಾರಿಯಾ ಅವರ ಹೇಳಿಕೆಗಳು ವಾಕ್‌ ಸ್ವಾತಂತ್ರ್ಯದ ದುರುಪಯೋಗ ಎಂದು ಅಭಿಪ್ರಾಯಪಟ್ಟಿತು. ಈ ಬಗೆಯ ಆರೋಪ ಮಾಡದಂತೆ ತಡೆ ನೀಡಿತು. ಅಲ್ಲದೆ ಮೊಕದ್ದಮೆಗೆ ಸಂಬಂಧಿಸಿದಂತೆ ಸಮನ್ಸ್‌ ಜಾರಿಗೊಳಿಸಿ ಆಗಸ್ಟ್ 22ಕ್ಕೆ ಪ್ರಕರಣವನ್ನು ಮುಂದೂಡಿತು.

Related Stories

No stories found.
Kannada Bar & Bench
kannada.barandbench.com