[ಚುಟುಕು] ಲುಲು ಮಾಲ್: ಪಾರ್ಕಿಂಗ್‌ ಶುಲ್ಕ ಮೇಲ್ನೋಟಕ್ಕೇ ಅಕ್ರಮ; ಲಿಫ್ಟ್‌ಗೂ ಶುಲ್ಕ ನೀಡಬೇಕೆ?: ಕೇರಳ ಹೈಕೋರ್ಟ್‌

Indoor parking and Kerala High Court

Indoor parking and Kerala High Court

Published on

ಲುಲು ಅಂತಾರಾಷ್ಟ್ರೀಯ ಶಾಪಿಂಗ್‌ ಮಾಲ್‌ನಂತಹ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ವಿಧಿಸುವುದು ಮೇಲ್ನೋಟಕ್ಕೇ ಅಕ್ರಮವಾಗಿದೆ ಎಂದು ಶುಕ್ರವಾರ ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕೇರಳದ ಎರ್ನಾಕುಲಂನ ಲುಲು ಇಂಟರ್ನ್ಯಾಷನಲ್‌ ಶಾಪಿಂಗ್ ಮಾಲ್‌ ಪಾರ್ಕಿಂಗ್‌ ಶುಲ್ಕ ವಿಧಿಸಿದ್ದರ ವಿರುದ್ಧ ಅರ್ಜಿದಾರ ಪೌಲಿ ವಡಕ್ಕನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ. ಪಿ ವಿ ಕುನ್ಹಿಕೃಷ್ಣನ್‌ ನೇತೃತ್ವದ ಪೀಠ ನಡೆಸಿತು.

ಕೇರಳ ಮುನಿಸಿಪಾಲಿಟಿ ಕಟ್ಟಡ ನಿಯಮಾವಳಿ - 1994ರ ಅನ್ವಯ ಪಾರ್ಕಿಂಗ್‌ ಜಾಗವನ್ನು ನೀಡುವುದು ಕಡ್ಡಾಯವಾಗಿದ್ದು ಅಂತಹ ಕಡೆ ಪಾರ್ಕಿಂಗ್ ಶುಲ್ಕ ನೀಡುವುದು ಮೇಲ್ನೋಟಕ್ಕೆ ಅಕ್ರಮ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಇದೇ ವೇಳೆ, ನಾಳೆ ದಿನ ನೀವು ಲಿಫ್ಟ್‌ ಬಳಕೆಗೂ ಸೇವೆಯನ್ನು ಒದಗಿಸುತ್ತಿರುವ ಕಾರಣ ನೀಡಿ ಶುಲ್ಕ ಪಡೆಯುತ್ತೀರಾ? ಎಂದು ನ್ಯಾಯಾಲಯವು ಪ್ರತಿವಾದಿಗಳನ್ನು ಪ್ರಶ್ನಿಸಿತು.

ಹೆಚ್ಚಿನ ವಿವರಗಳಿಗೆ ಬಾರ್‌ ಅಂಡ್‌ ಬೆಂಚ್ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ

Kannada Bar & Bench
kannada.barandbench.com