ಮೊಘಲರು ದೇಗುಲಗಳಿಗೆ ನೀಡಿದ ದಾನ, ದತ್ತಿ ಕುರಿತ ಪಠ್ಯ ಕೈಬಿಡಲು ಕೋರಿದ್ದ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್ ನಕಾರ

"ಕೇಂದ್ರ ಮತ್ತು ರಾಜ್ಯದ ಈಗಿನ ನೀತಿಗಳನ್ನೇ ತೀರ್ಮಾನ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಇನ್ನು ನೀವು ಷಹಜಹಾನ್ ಮಾಡಿದ ಕೆಲ ತಪ್ಪುಗಳ ಬಗ್ಗೆ ಮಾತನಾಡುತ್ತಿದ್ದೀರಿ" ಎಂದು ಕುಟುಕಿದ ಪೀಠ.
Delhi High Court and Class XII history textbook

Delhi High Court and Class XII history textbook

ಔರಂಗಜೇಬ್ ಮತ್ತು ಷಹಜಹಾನ್ ರಂತಹ ಮೊಘಲ್ ದೊರೆಗಳು ದೇವಾಲಯಗಳ ದುರಸ್ತಿಗೆ ಅನುದಾನ ನೀಡಿದ್ದರು ಎಂದು ತಿಳಿಸುವ ಹನ್ನೆರಡನೇ ತರಗತಿ ಎನ್‌ಸಿಇಆರ್‌ಟಿ ಇತಿಹಾಸ ಪಠ್ಯದ ಅಂಶಗಳನಬ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿದೆ. [ಸಂಜೀವ್‌ ವಿಕಲ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇಂದಿನ ಸರ್ಕಾರಗಳ ನೀತಿಗಳ ಸರಿತಪ್ಪುಗಳನ್ನೇ ನಿರ್ಧರಿಸಲು ನ್ಯಾಯಾಲಯಕ್ಕೆ ಸಮಯವಿಲ್ಲ. ಇನ್ನು 400 ವರ್ಷಗಳ ಹಿಂದೆ ಬದುಕಿದ್ದ ರಾಜರ ನೀತಿಗಳನ್ನು ನಿರ್ಧರಿಸಲು ಕೋರಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಟೀಕಿಸಿತು.

Also Read
[ಸಂವಿಧಾನ ದಿನದ ವಿಶೇಷ] ಮೂಲ ಸಂವಿಧಾನದಲ್ಲಿನ ಭಾರತದ ಶ್ರೀಮಂತ, ಸಾಂಸ್ಕೃತಿಕ ಇತಿಹಾಸ ಬಿಂಬಿಸುವ ಚಿತ್ರಗಳ ನೋಟ

“…ಇದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ. ಈ ರೀತಿಯ ಪಿಐಎಲ್‌ಗಳನ್ನು ದೆಹಲಿ ಹೈಕೋರ್ಟ್‌ನಲ್ಲಿ ಮಾತ್ರ ಸಲ್ಲಿಸಲಾಗುತ್ತದೆ. ಹೈಕೋರ್ಟ್‌ಗೆ ಅಷ್ಟು ಮುಕ್ತ ಸಮಯ ಇದೆ ಎಂದು ಜನ ಭಾವಿಸುವಂತಾಗಿದೆ” ಎಂದು ಕೂಡ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಇದೇ ವೇಳೆ ದಂಡ ವಿಧಿಸುವುದಾಗಿ ನ್ಯಾಯಾಲಯ ಎಚ್ಚರಿಸಿತಾದರೂ ಅರ್ಜಿದಾರರು ವಿದ್ಯಾರ್ಥಿಗಳೆಂದು ತಿಳಿದು ಆ ನಿರ್ಧಾರದಿಂದ ಹಿಂದೆ ಸರಿಯಿತು

ಪಿಐಎಲ್‌ಗಳ ಚಾಂಪಿಯನ್ ಆಗಿರುವ ಜನರು ತೆರಿಗೆ ವಂಚನೆ ನಡೆದಿರುವ ಪ್ರಕರಣಗಳೊಂದಿಗೆ ನ್ಯಾಯಾಲಯಕ್ಕೆ ಬರಬೇಕು ಎಂದು ಕಿವಿಮಾತು ಹೇಳಿದ ನ್ಯಾಯಾಲಯ ಕಡೆಗೆ ಅರ್ಜಿ ಹಿಂಪಡೆಯಲು ಮನವಿದಾರರಿಗೆ ಅನುಮತಿ ನೀಡಿತು.

Related Stories

No stories found.
Kannada Bar & Bench
kannada.barandbench.com