ಪ್ರಧಾನಿ ಮೋದಿ ಚೇಳು ಎಂಬ ಹೇಳಿಕೆ: ಶಶಿ ತರೂರ್ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದತಿಗೆ ದೆಹಲಿ ಹೈಕೋರ್ಟ್ ನಕಾರ

2018ರ ನವೆಂಬರ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್ ನಾಯಕ ತರೂರ್ ಈ ಹೇಳಿಕೆ ನೀಡಿದ್ದರು.
Shashi Tharoor, Delhi High Court
Shashi Tharoor, Delhi High Court
Published on

ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ನ್ಯಾಯಮೂರ್ತಿ ಪ್ರಕರಣ ರದ್ದುಗೊಳಿಸುವಂತೆ ತರೂರ್ ಸಲ್ಲಿಸಿದ್ದ ಮನವಿ ತಿರಸ್ಕರಿಸಿ ನ್ಯಾಯಮೂರ್ತಿ ಅನುಪ್ ಕುಮಾರ್ ಮೆಂಡಿರಟ್ಟ ಅವರು ಆದೇಶ ಹೊರಡಿಸಿದ್ದಾರೆ.

Also Read
ರೈತರ ಪ್ರತಿಭಟನೆಗಳ ತಪ್ಪು ವರದಿಗಾರಿಕೆ ಆರೋಪ: ಎಫ್‌ಐಆರ್‌ ವಜಾ ಕೋರಿ ಸುಪ್ರೀಂ ಮೆಟ್ಟಿಲೇರಿದ ತರೂರ್‌, ರಾಜ್‌ದೀಪ್

2018ರ ನವೆಂಬರ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದರು.‘ಶ್ರೀ ಮೋದಿ ಅವರು ಶಿವಲಿಂಗದ ಮೇಲೆ ಕುಳಿತಿರುವ ಚೇಳು’ ಎಂದು ಅವರು ಬಣ್ಣಿಸಿದ್ದರು.

ವಿಚಾರಣೆಗೆ ತಡೆ ನೀಡಿ ತಾನು ಈ ಹಿಂದೆ ಪ್ರಕಟಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿದ ನ್ಯಾಯಾಲಯ ಸೆಪ್ಟೆಂಬರ್ 10 ರಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಕಕ್ಷಿದಾರರಿಗೆ ಆದೇಶಿಸಿದೆ.

"ಈ ಹಂತದಲ್ಲಿ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ಯಾವುದೇ ಆಧಾರಗಳಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ತರೂರ್‌ ವಿರುದ್ಧ ಬಿಜೆಪಿ ನಾಯಕ ರಾಜೀವ್ ಬಬ್ಬರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಳಿಕ  ವಿಚಾರಣಾ ನ್ಯಾಯಾಲಯ ತರೂರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

Also Read
[ಸುನಂದಾ ಪುಷ್ಕರ್‌ ಪ್ರಕರಣ] ಶಶಿ ತರೂರ್‌ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಕಲ್ಪಿತ ಮನೋಭ್ರಾಂತಿ: ವಿಕಾಸ್‌ ಪಹ್ವಾ

ತಾನು ಗೋರ್ಧನ್‌ ಜಡಾಫಿಯಾ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದೆ.  ಕೃತಿಯೊಂದರಲ್ಲಿ ಉಲ್ಲೇಖಿಸಿರುವುದನ್ನು ನಾನು ಹೇಳಿದ್ದು, ಆ ಹೇಳಿಕೆ ಸಾರ್ವಜನಿಕವಾಗಿ ಲಭ್ಯ ಇದೆ. ಪತ್ರಿಕೋದ್ಯಮದ ಕೃತಿಯೊಂದರಲ್ಲಿ ಉಲ್ಲೇಖಿಸಿದ್ದ ಹೇಳಿಕೆ ಇದು. ಅಲ್ಲದೆ ದೂರುದಾರ ಬಬ್ಬರ್‌ ಅವರು ಐಪಿಸಿ ಸೆಕ್ಷನ್ 499ರ ಪ್ರಕಾರ ಬಾಧಿತ ವ್ಯಕ್ತಿಯಲ್ಲ. ಅವರು ಹೇಳಿಕೆಯ ಉದ್ದೇಶವನ್ನು ಮರೆಮಾಚಿದ್ದಾರೆ ಎಂದು ತರೂರ್‌ ಪರ ವಕೀಲರು ವಾದಿಸಿದ್ದರು.

ತರೂರ್‌ ಅವರನ್ನು ಹಿರಿಯ ವಕೀಲ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ತಂಡ ಪ್ರತಿನಿಧಿಸಿತ್ತು. ರಾಜೀವ್ ಬಬ್ಬರ್ ಅವರ ಪರವಾಗಿ ಹಿರಿಯ ವಕೀಲೆ ಪಿಂಕಿ ಆನಂದ್ ಹಾಗೂ ತಂಡ ವಾದ ಮಂಡಿಸಿತ್ತು.

Kannada Bar & Bench
kannada.barandbench.com