ಪಿಎಂಎಲ್ಎ ಅಡಿ ವರದಿ ಮಾಡುವ ಘಟಕಗಳಾಗಿ ಸಿಎ, ಸಿಎಸ್‌ಗಳು: ಕೇಂದ್ರದ ನಿಲುವು ಕೇಳಿದ ದೆಹಲಿ ಹೈಕೋರ್ಟ್

ನಿಯಮಾವಳಿ ಪಾಲಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆಯಾದ್ದರಿಂದ ಸರ್ಕಾರದ ನಿರ್ಧಾರ ನಮ್ಮದೇ ಕಕ್ಷಿದಾರರನ್ನು ನಾವೇ ತನಿಖೆಗೆ ಒಳಪಡಿಸುವಂತೆ ಮಾಡುತ್ತದೆ ಎಂದು ಮನವಿಯಲ್ಲಿ ಅಳಲು ತೋಡಿಕೊಳ್ಳಲಾಗಿದೆ.
Delhi high court, Prevention of Money Laundering Act, 2002
Delhi high court, Prevention of Money Laundering Act, 2002

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ಚಾರ್ಟರ್ಡ್ ಅಕೌಂಟೆಂಟ್‌ಗಳು (ಸಿಎ), ಕಂಪನಿ ಕಾರ್ಯದರ್ಶಿಗಳು (ಸಿಎಸ್) ಮತ್ತು ಕಾಸ್ಟ್ ಅಕೌಂಟೆಂಟ್‌ಗಳನ್ನು ʼವರದಿ ಮಾಡುವ ಘಟಕʼದ ವ್ಯಾಪ್ತಿಗೆ ಸೇರಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದೆ.

ಪ್ರಕರಣದ ಕುರಿತು  ಕೇಂದ್ರದಿಂದ ಸೂಚನೆಗಳನ್ನು ಪಡೆಯಲು ಇಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರಿಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ವಿಭಾಗೀಯ ಪೀಠ ಕಾಲಾವಕಾಶ ನೀಡಿದ್ದು ಅಕ್ಟೋಬರ್ 4ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Also Read
ಪಿಎಂಎಲ್‌ಎ: ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೇಶ್‌ ಆರೋಪ ಮುಕ್ತಗೊಳಿಲು ವಿಶೇಷ ನ್ಯಾಯಾಲಯ ನಕಾರ

ಪಿಎಂಎಲ್‌ಎ ಸೆಕ್ಷನ್ 2(1)(ಎಸ್‌ಎ)(vi) ನಲ್ಲಿ ಬಳಸಿದ 'ವ್ಯಕ್ತಿ' ಪದದ ವ್ಯಾಖ್ಯಾನವನ್ನು ವಿಸ್ತರಿಸಿ ಮೇ 3, 2023ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಿಎ ರಜತ್ ಮೋಹನ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ನಿಯಮಾವಳಿ ಪಾಲಿಸದಿದ್ದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುತ್ತದೆಯಾದ್ದರಿಂದ ಸರ್ಕಾರದ ನಿರ್ಧಾರ ನಮ್ಮದೇ ಕಕ್ಷಿದಾರರನ್ನು ನಾವೇ ತನಿಖೆಗೆ ಒಳಪಡಿಸುವಂತೆ ಮಾಡುತ್ತದೆ ಎಂದು ಮನವಿ ಅಳಲು ತೋಡಿಕೊಂಡಿದೆ.

ಸಿಎಯಂತಹ ವೃತ್ತಿಪರರನ್ನು ವರದಿ ಮಾಡುವ ಘಟಕದ ವ್ಯಾಖ್ಯಾನದ ವ್ಯಾಪ್ತಿಗೆ ತರುವ ಮೂಲಕ ಅವರ ಮೇಲೆ ಗುರುತರ ಹೊಣೆ ಹೊರಿಸಲಾಗಿದೆ ಎಂದು ಮೋಹನ್‌ ವಾದಿಸಿದ್ದರು.

Kannada Bar & Bench
kannada.barandbench.com