ತಲೆಗೂದಲು ಕಸಿಯಿಂದ ವ್ಯಕ್ತಿ ಸಾವು: ರಾಷ್ಟ್ರ ರಾಜಧಾನಿಯ ಅಕ್ರಮ ಸಲೂನ್‌ಗಳ ಬಗ್ಗೆ ವರದಿ ಕೇಳಿದ ದೆಹಲಿ ಹೈಕೋರ್ಟ್

ಸೌಂದರ್ಯ ಶಸ್ತ್ರಚಿಕಿತ್ಸೆ ಮತ್ತು ಕೂದಲು ಕಸಿ ಮಾಡಲು ವೈದ್ಯಕೀಯ ಮಾರ್ಗಸೂಚಿಗಳು ಇಲ್ಲದಿದ್ದರೆ ಅಂತಹವುಗಳನ್ನು ರೂಪಿಸಬೇಕು ಎಂದಿದೆ ನ್ಯಾಯಾಲಯ.
ತಲೆಗೂದಲು ಕಸಿಯಿಂದ ವ್ಯಕ್ತಿ ಸಾವು: 
ರಾಷ್ಟ್ರ ರಾಜಧಾನಿಯ ಅಕ್ರಮ ಸಲೂನ್‌ಗಳ ಬಗ್ಗೆ ವರದಿ ಕೇಳಿದ ದೆಹಲಿ ಹೈಕೋರ್ಟ್

ರಾಷ್ಟ್ರ ರಾಜಧಾನಿಯಲ್ಲಿ ತರಬೇತಿ ಇಲ್ಲದೆ ತಲೆಗೂದಲು ಕಸಿ ಮತ್ತು ಸೌಂದರ್ಯ ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ [ಅಬ್ದುಲ್‌ ರಶೀದ್‌ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಇಂತಹ ಸಲೂನ್‌ಗಳು ನಗರದೆಲ್ಲೆಡೆ ನಾಯಿಕೊಡೆಗಳಂತೆ ಹುಟ್ಟುಕೊಳ್ಳುತ್ತಿದ್ದು ಸ್ವಘೋಷಿತ ತಂತ್ರಜ್ಞರು ವೈದ್ಯಕೀಯ ನೈತಿಕತೆಯನ್ನು ಬದಿಗತ್ತಿ ತಲೆಗೂದಲು ಕಸಿ ಮತ್ತು ಸೌಂದರ್ಯ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ನ್ಯಾ. ಅನೂಪ್ ಕುಮಾರ್ ಮೆಂಡಿರಟ್ಟ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯಪಟ್ಟರು.

ಕೂದಲು ಶಸ್ತ್ರಚಿಕಿತ್ಸೆ ನಂತರ ವ್ರಣವಾಗಿ ಮೃತಪಟ್ಟ ಅಥರ್‌ ರಶೀದ್‌ ಸಾವಿನ ತನಿಖೆ ನಡೆಸುವಂತೆ ಕೋರಿಸ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Also Read
[ಜಹಾಂಗೀರ್‌ಪುರಿ ತೆರವು] ಯಾವ ಸಮುದಾಯವನ್ನೂ ಗುರಿಯಾಗಿಸಿಲ್ಲ, ಮನೆ ಅಂಗಡಿ ಕೆಡವಿಲ್ಲ: ಸುಪ್ರೀಂಗೆ ಎನ್‌ಎಂಡಿಸಿ ಮಾಹಿತಿ

ಇಂತಹ ಸಲೂನ್‌ಗಳು ತಲೆ ಎತ್ತುತ್ತಿರುವ ಬಗ್ಗೆ ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ದೆಹಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸೌಂದರ್ಯ ಶಸ್ತ್ರಚಿಕಿತ್ಸೆ ಮತ್ತು ಕೂದಲು ಕಸಿ ಮಾಡಲು ವೈದ್ಯಕೀಯ ಮಾರ್ಗಸೂಚಿಗಳು ಇಲ್ಲದಿದ್ದರೆ ಅಂತಹವುಗಳನ್ನು ರೂಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಮತ್ತು ದೆಹಲಿ ಸರ್ಕಾರಗಳು, ದೆಹಲಿ ಪೊಲೀಸ್ ಕಮಿಷನರ್, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ದೆಹಲಿ ವೈದ್ಯಕೀಯ ಮಂಡಳಿಗೆ ಸಮಸ್ಯೆ ನಿಭಾಯಿಸಲು ಮತ್ತು ಸ್ಥಿತಿಗತಿ ವರದಿ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೀಠ ಸೂಚಿಸಿದೆ.

Related Stories

No stories found.