ದೆಹಲಿ ಗಲಭೆ: ಎಎಪಿ ಮುಖಂಡ, ಮಾಜಿ ಪಾಲಿಕೆ ಸದಸ್ಯ ತಾಹಿರ್ ಹುಸೇನ್ ವಿರುದ್ಧ ಆರೋಪ ನಿಗದಿಪಡಿಸಿದ ಸ್ಥಳೀಯ ನ್ಯಾಯಾಲಯ

"ಹಿಂದೂ ಸಮುದಾಯದ ವ್ಯಕ್ತಿಗಳಿಗೆ ಸೇರಿದ ಆಸ್ತಿಗೆ ಗರಿಷ್ಠ ಹಾನಿ ಉಂಟುಮಾಡುವುದು ಮತ್ತು ಹಿಂದೂ ಸಮುದಾಯದ ವ್ಯಕ್ತಿಗಳನ್ನು ಕೊಲ್ಲುವುದು ಆರೋಪಿಗಳ ಉದ್ದೇಶವಾಗಿತ್ತು" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ದೆಹಲಿ ಗಲಭೆ: ಎಎಪಿ ಮುಖಂಡ, ಮಾಜಿ ಪಾಲಿಕೆ ಸದಸ್ಯ ತಾಹಿರ್ ಹುಸೇನ್ ವಿರುದ್ಧ ಆರೋಪ ನಿಗದಿಪಡಿಸಿದ ಸ್ಥಳೀಯ ನ್ಯಾಯಾಲಯ
A1
Published on

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಮಾಜಿ ಪಾಲಿಕೆ ಸದಸ್ಯ, ಆಮ್‌ ಆದ್ಮಿ ಪಕ್ಷದ (ಎಎಪಿ) ತಾಹಿರ್‌ ಹುಸೇನ್‌ ಮತ್ತಿತರರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೊಲೆ ಯತ್ನ, ಕ್ರಿಮಿನಲ್ ಪಿತೂರಿ ಇನ್ನಿತರ ಆರೋಪಗಳನ್ನು ದೆಹಲಿಯ ನ್ಯಾಯಾಲಯವೊಂದು ಶನಿವಾರ ನಿಗದಿಪಡಿಸಿದೆ. [ಸರ್ಕಾರದ ವಿರುದ್ಧ ತನ್ವೀರ್‌ ಮಲೀಕ್‌ ಮತ್ತಿತರರ ನಡುವಣ ಪ್ರಕರಣ].

ಆರೋಪಿಗಳಿಗೆ ಹಿಂದೂಗಳನ್ನು ಕೊಲ್ಲುವ, ಅವರ ಆಸ್ತಿಗೆ ಹಾನಿ ಎಸಗುವ ಹಾಗೂ ಅವರಿಗೆ ಗರಿಷ್ಠ ಘಾಸಿ ಉಂಟು ಮಾಡುವ ಉದ್ದೇಶ ಇತ್ತು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು  ತಿಳಿಸಿದರು.

Also Read
ದೆಹಲಿ ಗಲಭೆ: ಸಾಕ್ಷಿಗಳು, ಕೋರ್ಟಿನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಪ್ರಾಸಿಕ್ಯೂಷನ್‌ಗೆ ದಂಡ ವಿಧಿಸಿದ ನ್ಯಾಯಾಲಯ

ʼಬಲಪ್ರಯೋಗʼಮತ್ತು ʼಹಿಂಸಾಚಾರʼ ದಮೂಲಕ ʼವಿಧ್ವಂಸಕ ಕೃತ್ಯʼ ಮತ್ತು ʼಗಲಭೆʼ  ಎಸಗುವುದುಅವರ ಉದ್ದೇಶವಾಗಿತ್ತು ಎಂದು ತಿಳಿಸಿದ ನ್ಯಾಯಾಲಯ ಘಟನೆಯಲ್ಲಿ ಗಾಯಗೊಂಡ ಅಜಯ್‌ ಗೋಸ್ವಾಮಿ ಎಂಬುವವರನ್ನು ಉದಾಹರಣೆಯಾಗಿ ಉಲ್ಲೇಖಿಸಿತು.

ಹೀಗಾಗಿ ನ್ಯಾಯಾಲಯಐಪಿಸಿಸೆಕ್ಷನ್ 307 (ಕೊಲೆ ಯತ್ನ), 120 ಬಿ (ಅಪರಾಧ ಪಿತೂರಿ) ಮತ್ತು 149 (ಕಾನೂನುಬಾಹಿರ ಸಭೆ) ಅಡಿಯಲ್ಲಿಆರೋಪ ನಿಗದಿಪಡಿಸಿತು.

Kannada Bar & Bench
kannada.barandbench.com