ಗೌಪ್ಯತೆ ಕುರಿತ ಪ್ರಕರಣಗಳಲ್ಲಿ ನ್ಯಾಯಾಧೀಶರ ಮನವೊಲಿಸುವುದು ಕಷ್ಟಕರ; ಹಿರಿಯ ವಕೀಲ ಶ್ಯಾಮ್ ದಿವಾನ್

ಸಿಎಎನ್ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ನ್ಯಾ. ಎಚ್ ಆರ್ ಖನ್ನಾ ಸ್ಮಾರಕ 3ನೇ ರಾಷ್ಟ್ರೀಯ ವಿಚಾರ ಸಂಕಿರಣದ ವೇಳೆ ಅವರು ʼಪ್ರಭುತ್ವದ ಕಣ್ಗಾವಲು ಮತ್ತು ಗೌಪ್ಯತೆ - ನಡುವಿನ ಲಕ್ಷ್ಮಣ ರೇಖೆʼ ಎಂಬ ವಿಷಯದ ಕುರಿತು ಮಾತನಾಡಿದರು.
Shyam Divan
Shyam Divan
Published on

ಕಣ್ಗಾವಲು ಮತ್ತು ಗೌಪ್ಯತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾದ ಮಂಡಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದ್ದು, ಅಂತಹ ವಿಷಯಗಳನ್ನು ವಾದಿಸುವಾಗ ನ್ಯಾಯಾಧೀಶರ ಮನವೊಲಿಸುವುದನ್ನು ವಕೀಲರು ಕಲಿಯಬೇಕು ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ಹೇಳಿದರು.

ಸಿಎಎನ್‌ ಪ್ರತಿಷ್ಠಾನ ಶನಿವಾರ ವರ್ಚುವಲ್‌ ವಿಧಾನದಲ್ಲಿ ಆಯೋಜಿಸಿದ್ದ ನ್ಯಾ. ಎಚ್‌ ಆರ್ ಖನ್ನಾ ಸ್ಮಾರಕ 3ನೇ ರಾಷ್ಟ್ರೀಯ ವಿಚಾರ ಸಂಕಿರಣದ ವೇಳೆ ಅವರು ʼಪ್ರಭುತ್ವದ ಕಣ್ಗಾವಲು ಮತ್ತು ಗೌಪ್ಯತೆ - ನಡುವಿನ ಲಕ್ಷ್ಮಣ ರೇಖೆʼ ಎಂಬ ವಿಷಯದ ಕುರಿತು ಮಾತನಾಡಿದರು.

ಸುಪ್ರೀಂ ಕೋರ್ಟ್‌ನಲ್ಲಿ ಆಧಾರ್ ವಿರುದ್ಧ ವಾದ ಮಂಡಿಸಿದ ವಕೀಲನಾಗಿ, ನ್ಯಾಯಮೂರ್ತಿಗಳ ಮನವೊಲಿಸುವಲ್ಲಿ ನಾನು ವಿಫಲರಾಗಿದ್ದೆ. ಆ ವೈಫಲ್ಯದ ಹೊಣೆ ಹೊರುವುದಾಗಿ ಅವರು ವಿಷಾದಿಸಿದರು.

Also Read
ತನಿಖಾ ಸಂಸ್ಥೆಗಳು ಕಣ್ಗಾವಲು ನಡೆಸಲು ಕಾನೂನು ಬೇಕು, ಆದರೆ ಅವು ಮೂಲಭೂತ ಹಕ್ಕಿಗೆ ಬದ್ಧವಾಗಿರಬೇಕು: ನ್ಯಾ. ಸುಂದರೇಶ್

ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುವ ವಿಧಾನಗಳ ಬಗ್ಗೆಯೂ ಅವರು ಇದೇ ಸಂದರ್ಭದಲ್ಲಿ ಧ್ವನಿ ಎತ್ತಿದರು. ಇದು ಅಂಕುಶ ಪ್ರಧಾನ ಸಮಾಜಕ್ಕೆ ಎಡೆಮಾಡಿಕೊಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

"ನಮ್ಮ ಮೊಬೈಲ್‌ಗಳು ಟೆಕ್ ಕಂಪನಿಗಳಿಗೆ ಅತಿಯಾಗಿ ಮಾಹಿತಿ ರವಾನಿಸುತ್ತಿವೆ" ಎಂದು ಅವರು ದಿ ಟ್ರೂಮನ್ ಶೋ ಚಲನಚಿತ್ರವನ್ನು ಉಲ್ಲೇಖಿಸಿ ಹೇಳಿದರು.

ಪ್ರಭುತ್ವಕ್ಕೆ ಮಿತಿಮೀರಿದ ಅಧಿಕಾರ ನೀಡಿದರೆ ನಾಗರಿಕ ಸ್ವಾತಂತ್ರ್ಯ ಮೊಟಕುಗೊಳ್ಳುತ್ತದೆ ಎಂದು ಅವರು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ನ್ಯಾ. ಎಂ ಎಂ ಸುಂದರೇಶ್‌, ಮತ್ತೊಬ್ಬ  ಹಿರಿಯ ವಕೀಲ ಗುರು ಕೃಷ್ಣಕುಮಾರ್‌ ಮಾತನಾಡಿದರು.

Kannada Bar & Bench
kannada.barandbench.com