ಅಕಾಲಿಕ ನಿವೃತ್ತಿ ಆದೇಶ ನೀಡುವ ಮೊದಲು ಸಂಪೂರ್ಣ ಸೇವಾ ದಾಖಲೆ ಪರಿಗಣಿಸಬೇಕು: ಸುಪ್ರೀಂ ಕೋರ್ಟ್

ಅಕಾಲಿಕ ನಿವೃತ್ತಿಯ ಬಗ್ಗೆ ಪರಿಗಣಿಸಬೇಕಾದ ಸಂಪೂರ್ಣ ಸೇವಾ ದಾಖಲೆಯು ವಾರ್ಷಿಕ ಗೌಪ್ಯತಾ ವರದಿಗಳನ್ನೂ (ಎಸಿಆರ್‌ಗಳು) ಒಳಗೊಂಡಿರುತ್ತದೆ ಎಂದು ಪೀಠ ತಿಳಿಸಿದೆ.
ಅಕಾಲಿಕ ನಿವೃತ್ತಿ ಆದೇಶ ನೀಡುವ ಮೊದಲು ಸಂಪೂರ್ಣ ಸೇವಾ ದಾಖಲೆ ಪರಿಗಣಿಸಬೇಕು: ಸುಪ್ರೀಂ ಕೋರ್ಟ್

Supreme Court, Judicial appointments

ನೌಕರರ ಕುರಿತಂತೆ ನೀಡಲಾದ ಇತ್ತೀಚಿನ ವರದಿಗಳಿಗೆ ತನ್ನದೇ ಆದ ತೂಕ ಇದ್ದರೂ ಕೂಡ ಅಂತಹ ನೌಕರರಿಗೆ ಅಕಾಲಿಕ ನಿವೃತ್ತಿಯ ಆದೇಶ ರವಾನಿಸುವ ಮೊದಲು ಅವರ ಒಟ್ಟಾರೆ ಸೇವಾ ದಾಖಲೆಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ, [ಕೇಂದ್ರ ಕೈಗಾರಿಕಾ ಭದ್ರತಾ ಪಡೆ- ಸಿಐಎಸ್‌ಎಫ್‌ ಮತ್ತು ಎಚ್‌ ಸಿ ಓಂ ಪ್ರಕಾಶ್ ನಡುವಣ ಪ್ರಕರಣ].

ಅಕಾಲಿಕ ನಿವೃತ್ತಿಯ ಬಗ್ಗೆ ಪರಿಗಣಿಸಬೇಕಾದ ಸಂಪೂರ್ಣ ಸೇವಾ ದಾಖಲೆಯು ವಾರ್ಷಿಕ ಗೌಪ್ಯತಾ ವರದಿಗಳನ್ನೂ (ಎಸಿಆರ್‌ಗಳು) ಒಳಗೊಂಡಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ತಿಳಿಸಿದೆ.

"ಇತ್ತೀಚಿನ ವರದಿಗಳು ತಮ್ಮದೇ ಆದ ಮಹತ್ವ ಹೊಂದಿದ್ದರೂ, ಸಂಪೂರ್ಣ ಸೇವಾ ದಾಖಲೆಗಳ ಆಧಾರದ ಮೇಲೆ ಅಕಾಲಿಕ ನಿವೃತ್ತಿಯ ಆದೇಶವನ್ನು ರವಾನಿಸುವ ಅಗತ್ಯವಿದೆ" ಎಂದು ನ್ಯಾಯಾಲಯ ಹೇಳಿತು. ಇದರೊಂದಿಗೆ, ʼತಮ್ಮ ಬಡ್ತಿಗೆ ಮುಂಚಿತವಾಗಿ ಹಲವು ಶಿಕ್ಷೆಗೆ ಒಳಪಟ್ಟಿದ್ದ ಸಿಐಎಸ್‌ಎಫ್‌ ಸಿಬ್ಬಂದಿಯೊಬ್ಬರ ಸೇವಾ ದಾಖಲೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲʼ ಎಂಬ ದೆಹಲಿ ಹೈಕೋರ್ಟ್ ಆದೇಶವನ್ನು ಅದು ರದ್ದುಗೊಳಿಸಿತು.

Also Read
[ಎಸ್‌ಸಿ/ಎಸ್‌ಟಿ ಉದ್ಯೋಗಿಗಳಿಗೆ ಬಡ್ತಿ] ಸಮರ್ಪಕ ಪ್ರಾತಿನಿಧ್ಯದ ಮಾನದಂಡವನ್ನು ನ್ಯಾಯಾಲಯ ನಿಗದಿಪಡಿಸಲಾಗದು: ಸುಪ್ರೀಂ

"ರಿಟ್ ಅರ್ಜಿದಾರರ ಅಕಾಲಿಕ ನಿವೃತ್ತಿಯ ಆದೇಶವನ್ನು ರದ್ದುಗೊಳಿಸುವಾಗ ಹೈಕೋರ್ಟ್ ಸಂಪೂರ್ಣವಾಗಿ ದಿಕ್ಕು ತಪ್ಪಿದೆ ಎಂದು ನಾವು ಕಂಡುಕೊಂಡಿದ್ದೇವೆ. ರಿಟ್ ಅರ್ಜಿದಾರರಿಗೆ ಬಡ್ತಿಗೆ ಮುಂಚಿತವಾಗಿ ಅಕ್ರಮ ಲಾಭ ಸೇರಿದಂತೆ ಹಲವಾರು ಶಿಕ್ಷೆಗಳನ್ನು ನೀಡಲಾಗಿದೆ" ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಆದರೆ ಹೈಕೋರ್ಟ್‌ನ ವಿಭಾಗೀಯ ಪೀಠ “ಸೇವೆಯಲ್ಲಿ ಉಳಿಸಿಕೊಳ್ಳಲು ರಿಟ್ ಅರ್ಜಿದಾರರ ಅರ್ಹತೆಯನ್ನು ನಿರ್ಧರಿಸುವಾಗ ಅವರ ಕೊನೆಯ ಬಡ್ತಿಗೆ ಮೊದಲು ವಿಧಿಸಲಾದ ದಂಡವನ್ನು ನಿರ್ಲಕ್ಷಿಸಬೇಕು ಎಂದು ಅಭಿಪ್ರಾಯಪಟ್ಟಿತ್ತು.

ಕರ್ತವ್ಯದಲ್ಲಿದ್ದಾಗ ನಿದ್ರಿಸುವುದು ಮತ್ತು ಅನುಮತಿ ಇಲ್ಲದೆ ಎರಡು ದಿನಗಳ ಕಾಲ ಹೆಚ್ಚುವರಿಯಾಗಿ ರಜೆ ತೆಗೆದುಕೊಂಡದ್ದಕ್ಕೆ (ವಿಶೇಷವಾಗಿ ಸೇನೆಯಲ್ಲಿ ವಿಧಿಸಲಾಗುವ ದಂಡ) ಸಂಬಂಧಿಸಿದ ಎರಡು ದಂಡಗಳನ್ನು ಹೈಕೋರ್ಟ್ ಲಘುವಾಗಿ ಪರಿಗಣಿಸಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ “ಎಲ್ಲಾ ಪ್ರತಿಕೂಲ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು” ಎಂದು ಹೇಳಿತು.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠ ಪ್ರತಿವಾದಿ ನೌಕರ ಅನೇಕ ವರ್ಷಗಳ ಕಾಲ ಲಂಚ ಸ್ವೀಕರಿಸಿರುವುದನ್ನು ಮತ್ತು ಒಟ್ಟಾರೆ ಸೇವೆಯಲ್ಲಿನ ಸರಾಸರಿ ಆರೋಪಗಳನ್ನು ಗಮನಿಸಿತು. ಆ ಮೂಲಕ ಸಿಐಎಸ್‌ಎಫ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ದೆಹಲಿಹೈಕೋರ್ಟ್ ನೀಡಿದ್ದಆದೇಶವನ್ನುತಳ್ಳಿಹಾಕಿತು.

ಆದೇಶವನ್ನು ಇಲ್ಲಿ ಓದಿ:

Attachment
PDF
CISF_vs_HC_Om_Prakash.pdf
Preview

Related Stories

No stories found.