ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಎಫ್‌ಐಆರ್‌ ದಾಖಲು ಕುರಿತ ಮೇಲ್ಮನವಿ ವಿಚಾರಣೆಯನ್ನೂ ವಿಡಿಯೋ ರೆಕಾರ್ಡ್‌ ಮಾಡಬೇಕು

ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಯಾವುದೇ ವಿಚಾರಣೆ ನಡೆದರೂ ಅದರ ವಿಡಿಯೋ ರೆಕಾರ್ಡ್‌ ಮಾಡಬೇಕು ಎಂದು ಹಿಂದಿನ ಆದೇಶ ಹೇಳಿದೆ. ಎಫ್‌ಐಆರ್‌ ದಾಖಲಿಗೆ ಸಂಬಂಧಿಸಿದ ಮೇಲ್ಮನವಿ ಈ ʼಯಾವುದೇ ವಿಚಾರಣೆʼ ವ್ಯಾಪ್ತಿಗೆ ಒಳಪಡಲಿದೆ ಎಂದ ಬಾಂಬೆ ಹೈಕೋರ್ಟ್‌.
Bombay High Court
Bombay High Court
Published on

ಪರಿಶಿಷ್ಟ ಜಾತಿ ಮತ್ತ ಪಂಗಡಗಳ (ದೌರ್ಜನ್ಯ ನಿಷೇಧ) ಕಾಯಿದೆ ಅಡಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವುದಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ಸೇರಿದಂತೆ ಎಲ್ಲಾ ವಿಚಾರಣೆಗಳನ್ನು ವಿಡಿಯೋ ರೆಕಾರ್ಡ್‌ ಮಾಡಬೇಕು ಎಂದು ಬಾಂಬೆ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಮೇಲ್ಮನವಿ ವಿಚಾರಣೆಯನ್ನು ವಿಡಿಯೋ ರೆಕಾರ್ಡ್‌ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಸಂದೀಪ್‌ ಮರ್ನೆ ಪುರಸ್ಕರಿಸಿದ್ದಾರೆ.

ಡಾ. ಹೇಮಾ ಸುರೇಶ್‌ ಅಹುಜಾ ಮತ್ತು ಇತರರು ವರ್ಸಸ್‌ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಯಾವುದೇ ವಿಚಾರಣೆಯನ್ನು ವಿಡಿಯೋ ರೆಕಾರ್ಡ್‌ ಮಾಡಬೇಕು ಎಂದಿದೆ. ಎಫ್‌ಐಆರ್‌ ದಾಖಲಿಸುವುದಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆಯೂ ʼಯಾವುದೇ ವಿಚಾರಣೆʼಯ ವ್ಯಾಪ್ತಿಗೆ ಒಳಪಡುವುದರಿಂದ ಅದನ್ನೂ ವಿಡಿಯೋ ರೆಕಾರ್ಡ್‌ ಮಾಡಬೇಕು ಎಂದಿದೆ. ಸಂತ್ರಸ್ತರು ಮತ್ತು ಸಾಕ್ಷಿಗಳನ್ನು ರಕ್ಷಿಸುವ ಉದ್ದೇಶದಿಂದ ಹೀಗೆ ಮಾಡಬೇಕು ಎಂದು ಹೇಳಲಾಗಿದೆ.

Also Read
ಎಸ್‌ಸಿ, ಎಸ್‌ಟಿ ಉಪ ವರ್ಗೀಕರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: ಇ ವಿ ಚಿನ್ನಯ್ಯ ಪ್ರಕರಣದ ತೀರ್ಪು ರದ್ದು

ನಿಯಮದ ಅನುಪಾಲನೆಗೆ ವಿಡಿಯೋ ರೆಕಾರ್ಡ್‌ ಮಾಡುವುದು ಅಗತ್ಯ. ಅಹುಜಾ ಪ್ರಕರಣದಲ್ಲಿನ ಯಾವುದೇ ವಿಚಾರಣೆಯು ಮೇಲ್ಮನವಿ ಸೇರಿದಂತೆ ಎಲ್ಲಾ ಹಂತದ ಕಾನೂನು ಪ್ರಕ್ರಿಯೆ ಒಳಗೊಂಡಿರುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಪ್ರತಿವಾದಿಗಳ ಪರ ವಕೀಲರು ಕಾಯಿದೆ ಅಡಿ ಔಪಚಾರಿಕವಾಗಿ ಯಾವುದೇ ಅಪರಾಧ ದಾಖಲಾಗದೇ ಇರುವುದರಿಂದ ಈ ಹಂತದಲ್ಲಿ ವಿಡಿಯೋ ರೆಕಾರ್ಡಿಂಗ್‌ ಅಗತ್ಯವಿಲ್ಲ. ಅಲ್ಲದೇ, ಮೇಲ್ಮನವಿಯು ಕಾಯಿದೆಯ ಅಡಿ ಅಪರಾಧಕ್ಕೆ ನೇರ ಸಂಪರ್ಕ ಹೊಂದಿಲ್ಲ ಎಂದಿದ್ದರು. ಈ ವಾದವನ್ನು ಪೀಠ ಒಪ್ಪಿಲ್ಲ.

Kannada Bar & Bench
kannada.barandbench.com