ಜೆಮ್ಸ್ ಜೊತೆ ಬೆಸೆದಿದೆ ಬಹುತೇಕರ ಬಾಲ್ಯ: ಕ್ಯಾಡ್‌ಬರಿಗೆ ಪರಿಹಾರ ನೀಡುವಂತೆ ಕಂಪೆನಿಯೊಂದಕ್ಕೆ ದೆಹಲಿ ಹೈಕೋರ್ಟ್ ಆದೇಶ

ಜೆಮ್ಸ್‌ನ ಪ್ಯಾಕೇಜಿಂಗ್ ವಿಶಿಷ್ಟವಾಗಿದ್ದು ಕ್ಯಾಡ್‌ಬರಿ ಸಂಸ್ಥೆಯು ಕ್ಯಾಡ್‌ಬರಿ ಜೆಮ್ಸ್ ಮತ್ತು ಜೆಮ್ಸ್ ಬಾಂಡ್ ಪಾತ್ರದ ಮಾಲೀಕನಾಗಿದೆ ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಅಭಿಪ್ರಾಯಪಟ್ಟರು.
Cabury gems
Cabury gems

ಕ್ಯಾಡ್‌ಬರಿ ಜೆಮ್ಸ್‌ನ ವಾಣಿಜ್ಯ ಚಿಹ್ನೆ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬ್ರಿಟಿಷ್‌ ಸಂಸ್ಥೆ ಕ್ಯಾಡ್‌ಬರಿಗೆ ₹ 16 ಲಕ್ಷ ಪರಿಹಾರ ನೀಡುವಂತೆ ನೀರಜ್ ಫುಡ್ ಪ್ರಾಡಕ್ಟ್ಸ್ ಹೆಸರಿನ ಭಾರತೀಯ ಕಂಪನಿಗೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ [ಮೊಂಡೆಲೆಜ್‌ ಇಂಡಿಯಾ ಫುಡ್ಸ್‌ ಪ್ರೈ ಲಿಮಿಟೆಡ್‌ ಮತ್ತಿತರು ಹಾಗೂ ನೀರಜ್‌ ಫುಡ್‌ ಪ್ರಾಡಕ್ಟ್ಸ್‌ ನಡುವಣ ಪ್ರಕರಣ].

ಜೆಮ್ಸ್‌ ಜೊತೆ ಬಹುತೇಕರ ಬಾಲ್ಯ ಬೆಸೆದುಕೊಂಡಿದೆ. ಅದು ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಗೊತ್ತಿದೆ ಎಂದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ “ಜೆಮ್ಸ್‌ನ ಪ್ಯಾಕೇಜಿಂಗ್‌ ವಿಶಿಷ್ಟವಾಗಿದ್ದು ಕ್ಯಾಡ್‌ಬರಿಯು ಕ್ಯಾಡ್‌ಬರಿ ಜೆಮ್ಸ್‌ ಮತ್ತು ಜೆಮ್ಸ್‌ ಬಾಂಡ್‌ ಎಂ ಕಲಾತ್ಮಕ ಪಾತ್ರದ ಒಡೆಯನಾಗಿದೆ” ಎಂದು ತಿಳಿಸಿದರು.

Also Read
ಇಸ್ಕಾನ್ ವಿರುದ್ಧ ಇಸ್ಕಾನ್: ವಾಣಿಜ್ಯ ಚಿಹ್ನೆ ಹಕ್ಕು ಸಾಧಿಸಲು ಬೆಂಗಳೂರು ಸಂಸ್ಥೆ ಮುಕ್ತ ಎಂದ ಬಾಂಬೆ ಹೈಕೋರ್ಟ್

ಕ್ಯಾಡ್‌ಬರಿಯ ಹಕ್ಕುಗಳನ್ನು ಪ್ರತಿವಾದಿ ಕಂಪೆನಿ ಉಲ್ಲಂಘಿಸಿರುವುದರಲ್ಲಿ ಅನುಮಾನವಿಲ್ಲ. ಚಾಕೊಲೇಟ್‌ಗಳನ್ನು ದೊಡ್ಡ ಮಳಿಗೆಗಳಲ್ಲಿ ಮಾತ್ರವಲ್ಲದೆ ಕಿರಾಣಿ ಅಂಗಡಿ, ರಸ್ತೆ ಬದಿಯಂತಹ ಕಡೆ ಕೂಡ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಮಕ್ಕಳನ್ನೇ ಗ್ರಾಹಕರನ್ನಾಗಿ ಮಾಡಿಕೊಂಡಿರುವ ಉತ್ಪನ್ನ ಕುರಿತಂತೆ ಗೊಂದಲ ಮೂಡುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Also Read
'ಸಿಎನ್ಎನ್' ಚಿಹ್ನೆ ಬಳಸದಂತೆ ಇಬ್ಬರು ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್ [ಚುಟುಕು]

ವಾಣಿಜ್ಯ ಚಿಹ್ನೆ ಉಲ್ಲಂಘಿಸಿದ ನೀರಜ್ ಫುಡ್ ಪ್ರಾಡಕ್ಟ್ಸ್ ವಿರುದ್ಧ ಶಾಶ್ವತ ನಿರ್ಬಂಧಕಾಜ್ಞೆ ಮತ್ತು ಹಾನಿಗೆ ಪರಿಹಾರ ಕೋರಿ ಕ್ಯಾಡ್‌ಬರಿ (ಈಗ ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ) 2005ರಲ್ಲಿ ಹೂಡಿದ್ದ ದಾವೆ ಇದಾಗಿದೆ.

ಆರೋಪಿ ಕಂಪೆನಿ ತನ್ನ ಉತ್ಪನ್ನ ಮಾರಾಟ ಮಾಡಲು ಅದರ ಪ್ಯಾಕೇಜಿಂಗ್‌ನಲ್ಲಿ ಕ್ಯಾಡ್‌ಬರಿಯ ಬಣ್ಣದಂತೆಯೇ ಇರುವ ಚಾಕೊಲೇಟ್ ಬಟನ್‌ಗಳ ಚಿತ್ರದೊಂದಿಗೆ 'ಜೆಮ್ಸ್ ಬಾಂಡ್' ಮತ್ತು 'ಜೇಮಿ ಬಾಂಡ್' ಗುರುತು ಬಳಸುತ್ತಿತ್ತು ಇದು ಗೊಂದಲ ಮತ್ತು ಮೋಸ ಸೃಷ್ಟಿಸುವಂತಿತ್ತು ಎಂದು ಅದು ದೂರಿತ್ತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Mondelez_India_Foods_Pvt_Ltd_and_Anr_v_Neeraj_Food_Products.pdf
Preview

Related Stories

No stories found.
Kannada Bar & Bench
kannada.barandbench.com