ಬೆಂಗಳೂರಿನಲ್ಲಿ ತಮ್ಮ ಮನೆಗಳಿಂದ ಅಕ್ರಮವಾಗಿ ಹೊರಹಾಕಲ್ಪಟ್ಟ ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಕಳಪೆಯಾಗಿ ರೂಪಿಸಲಾಗಿದೆ ಎಂಬ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಉತ್ತಮ ಯೋಜನೆ ರೂಪಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿತು.
"ರಾಜ್ಯ ಸರ್ಕಾರ ಉತ್ತಮ ಯೋಜನೆ ರೂಪಿಸುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ" ಎಂಬುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಾಲಯ ಮುಂದುವರೆದು,
ಪುನರ್ವಸತಿ ಯೋಜನೆಯ ಮೊದಲನೇ ಷರತ್ತಿನ ವಿವರ ಹೀಗಿದೆ: ಪುನರ್ವಸತಿ ಯೋಜನೆಗಾಗಿ ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಗುಟ್ಟಹಳ್ಳಿ ಗ್ರಾಮದ ಸರ್ವೇ ನಂ, 23ರಲ್ಲಿ ಎರಡು ಎಕರೆ ವಿಸ್ತೀರ್ಣದ ಭೂಮಿ ಗುರುತಿಸಲಾಗಿದೆ. ಒಂದು ವೇಳೆ ಮೇಲ್ಕಂಡ ತಾಲೂಕಿನಲ್ಲಿ ಬೇರಾವುದೇ ಕಾರಣ/ ವ್ಯಾಜ್ಯದಿಂದಾಗಿ ಸ್ಥಳ ದೊರೆಯದಿದ್ದರೆ ಪರ್ಯಾಯ ಸೂಕ್ತ ಭೂಮಿಯನ್ನು ನಗರದಲ್ಲಿ ಗುರುತಿಸಲಾಗುವುದು".
ಇದನ್ನು ಕೇಳಿದ ನ್ಯಾಯಾಲಯ,
"ಪುನರ್ವಸತಿ ಯೋಜನೆ ಒಂದು ವರ್ಷಕ್ಕೆ ಮಾತ್ರ ಏಕೆ? ... ಪುನರ್ವಸತಿ ಯೋಜನೆಯನ್ನು ಜಾರಿಗೆ ತರಲು ಬಳಸುವ ಭೂಮಿ ವ್ಯಾಜ್ಯಗಳಿಂದ ಮುಕ್ತವಾಗಿದೆಯೆ ಅಥವಾ ಇಲ್ಲವೇ ಎಂಬುದು ನಿಮಗೆ ಖಚಿತವಿಲ್ಲವೇ?" ಎಂದು ಸರ್ಕಾರವನ್ನು ಮೊಟಕಿತು.
ಈ ಹಂತದಲ್ಲಿ ಹೊರಹಾಕಲ್ಪಟ್ಟ ವಲಸಿಗರ ಪರ ಹಾಜರಿದ್ದ ವಕೀಲ ಕ್ಲಿಫ್ಟನ್ ಡಿ ರೊಜಾರಿಯೋ, ‘ಈ ಕ್ರಮ ಒಪ್ಪತಕ್ಕದ್ದಲ್ಲ’ ಎಂದರು.
"Large number of people are residing in shelters and shelters were demolished. State is not able to tell us who has demolished it. This is failure of the State machinery. On top of that, you come out with a scheme for regularizing illegal constructions for one year."
ಈ ರೀತಿಯಾದರೆ, ಅರ್ಜಿದಾರರಿಗೆ ಉಂಟಾದ ನಷ್ಟ ನಿರ್ಣಯಿಸಲು ಮೌಲ್ಯಮಾಪಕರನ್ನು ನೇಮಕ ಮಾಡಿ ಹಣದ ರೂಪದಲ್ಲಿ ಪರಿಹಾರ ಒದಗಿಸುವಂತೆ ಸೂಚಿಸಬೇಕಾಗುತ್ತದೆ’ ಎಂದು ಕೋರ್ಟ್ ಎಚ್ಚರಿಕೆ ನೀಡಿತು.
ಹೊರಹಾಕುವಿಕೆಗೆ ಯಾರು ಕಾರಣ ಎಂದು ನ್ಯಾಯಾಲಯ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.
ಇದೊಂದು ಗಂಭೀರ ಸಂಗತಿ ಅಲ್ಲವೇ? ಯಾರನ್ನು ಕೇಳಿದರೂ ತಾವು ಈ ಕೃತ್ಯ ಎಸಗಿಲ್ಲ ಎನ್ನುತ್ತಾರೆ. ಹಾಗಾದರೆ ಮಾಡಿದ್ದು ಯಾರು? ಕಾಣದ ಕೈಗಳು ಮಾಡಿದವೇ? ಎಂದು ಕೋರ್ಟ್ ಪ್ರಶ್ನಿಸಿತು.
ಸರ್ಕಾರ ಘಟನೆಯ ತನಿಖೆ ಮಾಡುವುದಿಲ್ಲ ಎಂದರೆ, ಆಗ ಇದರಲ್ಲೆಲ್ಲಾ ಸರ್ಕಾರ ಕೂಡ ಭಾಗಿ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಇದನ್ನು (ಹೊರಹಾಕುವಿಕೆ) ಪೊಲೀಸರು ಪ್ರಾರಂಭಿಸಿದರು” ಎಂದು ನ್ಯಾಯಾಲಯ ಅಸಮಾಧಾನ ಸೂಚಿಸಿತು.
ಬಾಂಗ್ಲಾದೇಶಿಯರು ಎಂಬ ಹಣೆಪಟ್ಟಿ ಹಚ್ಚಿ ಕೆಲ ಸಮಯದ ಹಿಂದೆ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರನ್ನು ಅಕ್ರಮವಾಗಿ ಅವರ ಮನೆಗಳಿಂದ ಹೊರದಬ್ಬಲಾಗಿತ್ತು.
ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 9 ರಂದು ನಡೆಯಲಿದೆ.