
CJI NV Ramana, Justice AS Bopanna and Justice Hima kohli
ಕ್ಷುಲ್ಲಕ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು (ಪಿಐಎಲ್) ತೆಗೆದುಹಾಕಲು ಸಾಂವಿಧಾನಿಕ ನ್ಯಾಯಾಲಯಗಳು ಅರ್ಜಿದಾರರ ನೈಜ ಹಿತಾಸಕ್ತಿ (Locus Standi) ಪರಿಶೀಲಿಸುವಾಗ ಜಾಗರೂಕರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅರ್ಜಿದಾರರ [ಎಸ್ಟೀಮ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಚೇತನ್ ಕಾಂಬ್ಳೆ ನಡುವಣ ಪ್ರಕರಣ].
ಪಿಐಎಲ್‌ಗಳು ಕ್ಷಿಪ್ರ ವಿಚಾರಣಾಧಿಕಾರದ ವ್ಯಾಪ್ತಿಗೆ ಬರುವುದರಿಂದ ಕಕ್ಷಿದಾರರ ನೈಜತೆಯನ್ನು ಪರಿಶೀಲಿಸಲು ನ್ಯಾಯಾಲಯಗಳು ಸೀಮಿತ ಅಧಿಕಾರ ಹೊಂದಿವೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ.
ಆದರೆ ನ್ಯಾಯಾಲಯಗಳು ಮನವಿಗಳನ್ನು ಆಧರಿಸಿ ಪಕ್ಷಕಾರರ ನೈಜತೆಯ ಬಗ್ಗೆ ಪ್ರಾಥಮಿಕ ನಿಲುವು ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿದೆ. ನೈಜತೆಯ ಛಾಯೆಯಡಿ ಖಾಸಗಿ ಹಿತಾಸಕ್ತಿಗಳಿಂದ ದಾವೆ ಹೂಡಲಾಗಿದೆ ಎಂದು ಸಕಾರಣ ಶಂಕೆಯೊಂದಿಗೆ ನ್ಯಾಯಾಲಯ ತೀರ್ಮಾನಿಸಿದರೆ ನಂತರ ನ್ಯಾಯಾಲಯ ಪ್ರಕರಣದ ಅರ್ಹತೆಯ ಆಧಾರದಲ್ಲಿ ವಿಚಾರಣಾ ಹಕ್ಕುಗಳನ್ನು ನಿರಾಕರಿಸಬಹುದು ಎಂದು ಅದು ಸಲಹೆ ನೀಡಿದೆ. ಪಿಐಎಲ್ ಹೊಸ ಪರಿಕಲ್ಪನೆಯಲ್ಲ. ಈ ನಿಟ್ಟಿನಲ್ಲಿ ನ್ಯಾಯಶಾಸ್ತ್ರವು ಪ್ರಬುದ್ಧವಾಗಿದ್ದರೂ, ನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಅನೇಕ ಹಕ್ಕುಗಳು ಕೆಲವೊಮ್ಮೆ ಅಪಕ್ವವಾಗಿರುತ್ತವೆ ಎಂದು ಪೀಠ ಹೇಳಿತು.