ಕೊಲಿಜಿಯಂ ಶಿಫಾರಸಿಗೆ ಬಾಹ್ಯ ಶಕ್ತಿಗಳಿಂದ ಅಡ್ಡಿ: ನ್ಯಾ. ದೀಪಂಕರ್ ದತ್ತ ಅಸಮಾಧಾನ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರಿಗೆ ಬಾಂಬೆ ಹೈಕೋರ್ಟ್ ನಾಗಪುರ ಪೀಠದ ವಕೀಲರ ಸಂಘ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ನ್ಯಾ. ದತ್ತ ಮಾತನಾಡಿದರು.
ಕೊಲಿಜಿಯಂ ಶಿಫಾರಸಿಗೆ ಬಾಹ್ಯ ಶಕ್ತಿಗಳಿಂದ ಅಡ್ಡಿ: ನ್ಯಾ. ದೀಪಂಕರ್ ದತ್ತ ಅಸಮಾಧಾನ
Published on

ಕೊಲಿಜಿಯಂನ ಶಿಫಾರಸುಗಳನ್ನು ಜಾರಿಗೆ ತರದಂತೆ ತಡೆಯುವ ಬಾಹ್ಯ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತ ಶನಿವಾರ ಹೇಳಿದ್ದಾರೆ.

ಆದರೂ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ನ್ಯಾಯಯುತ ಮತ್ತು ಪಾರ್ದರ್ಶಕವಾಗಿರಬೇಕು ಎಂದು ಅವರು ತಿಳಿಸಿದರು.

ಬಾಂಬೆ ಹೈಕೋರ್ಟ್ ನಾಗಪುರ ಪೀಠದ ವಕೀಲರ ಸಂಘ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್‌ ಗವಾಯಿ ಅವರ ಸನ್ಮಾನ ಸಮಾರಂಭದಲ್ಲಿ ನ್ಯಾ. ದತ್ತ ಮಾತನಾಡಿದರು.

 ನ್ಯಾ. ದತ್ತ ಅವರ ಭಾಷಣದ ಪ್ರಮುಖಾಂಶಗಳು

  • ನೇಮಕಾತಿ ಮಾಡುವುದನ್ನು ನ್ಯಾಯಮೂರ್ತಿಗಳು ಮುಂದುವರೆಸಬೇಕಾದರೆ ಕೊಲಿಜಿಯಂ ಮಾಡಿದ ಎಲ್ಲಾ ಶಿಫಾರಸುಗಳು ಜಾರಿಗೆ ಬರುವಂತಾಗಬೇಕು.

  • ಕೊಲಿಜಿಯಂನ ಶಿಫಾರಸುಗಳು ಜಾರಿಯಾಗದಂತೆ ತಡೆಯುವ ಬಾಹ್ಯ ಶಕ್ತಿಗಳನ್ನು ಕಟ್ಟುನಿಟ್ಟಾಗಿ ಎದುರಿಸಬೇಕು.

  • ಅರ್ಹತೆಯನ್ನಷ್ಟೇ ಪರಿಗಣಿಸಲಾಗುವುದು ಬಾಹ್ಯ ವಿಚಾರಗಳನ್ನಲ್ಲ ಎಂಬುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

  • ನ್ಯಾಯಮೂರ್ತಿಗಳೇ ನ್ಯಾಯಮೂರ್ತಿಗಳನ್ನು ನೇಮಿಸಿಕೊಳ್ಳುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ. ಹಿರಿಯ ನ್ಯಾಯಮೂರ್ತಿಗಳು ಮಾಡಿದ ಶಿಫಾರಸುಗಳನ್ನು ಸರ್ಕಾರ ರದ್ದುಗೊಳಿಸಿದ ಉದಾಹರಣೆಗಳಿವೆ.

  • ನಾವು 1974ರಲ್ಲಿ ನ್ಯಾಯಮೂರ್ತಿಗಳು ಮೂವರು ನ್ಯಾಯಮೂರ್ತಿಗಳ ನೇಮಕಾತಿ ರದ್ದುಗೊಳಿಸಿದ್ದನ್ನು ಮಾತ್ರ ಉಲ್ಲೇಖಿಸುತ್ತೇವೆ. ಆದರೆ ಬಾಂಬೆ ಹೈಕೋರ್ಟ್‌ನ ಮೂವರು ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್. ಚಂದೂರ್ಕರ್, ಚಿತ್ತತೋಷ್ ಮುಖರ್ಜಿ ಹಾಗೂ ಪಿ.ಡಿ. ದೇಸಾಯಿ ಏಕೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯಲಿಲ್ಲ ಎಂದು ಯಾರೂ ಏಕೆ ಪ್ರಶ್ನಿಸುವುದಿಲ್ಲ?

Kannada Bar & Bench
kannada.barandbench.com