ಖಾಸಗಿ ವಲಯದ ಮಹಿಳಾ ಉದ್ಯೋಗಿಗಳೂ 180 ದಿನಗಳ ಹೆರಿಗೆ ರಜೆಗೆ ಅರ್ಹರು: ರಾಜಸ್ಥಾನ ಹೈಕೋರ್ಟ್

ಮಾತೃತ್ವ ಸವಲತ್ತು ಕಾಯಿದೆಗೆ 2017ರಲ್ಲಿ ಮಾಡಲಾದ ತಿದ್ದುಪಡಿಯ ಪ್ರಕಾರ ಖಾಸಗಿ ಮತ್ತು ಅಸಂಘಟಿತ ವಲಯಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡುವಂತೆ ಕಾರ್ಮಿಕ ನಿಯಮಾವಳಿಗೆ ತಿದ್ದುಪಡಿ ಮಾಡಲು ನ್ಯಾಯಾಲಯ ತಿಳಿಸಿದೆ.
Rajasthan HC and pregnant woman
Rajasthan HC and pregnant woman
Published on

ಹೆರಿಗೆ ಸವಲತ್ತು (ತಿದ್ದುಪಡಿ) ಕಾಯಿದೆ, 2017ರ ನಿಯಮಾವಳಿಯಂತೆ, ಕೆಲಸ ಮಾಡುವ ಮಹಿಳೆಯರಿಗೆ ಅವರು ಕೆಲಸ ಮಾಡುವ ಸಂಸ್ಥೆ ಲೆಕ್ಕಿಸದೆ ಹೆರಿಗೆ ಸವಲತ್ತುಗಳನ್ನು ಒದಗಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ ಮಿನಾಕ್ಷಿ ಚೌಧರಿ ಮತ್ತು  ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇನ್ನಿತರರ ನಡುವಣ ಪ್ರಕರಣ ].

ಇದನ್ನು ಗಮನದಲ್ಲಿಟ್ಟುಕೊಂಡು, ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ಸೌಲಭ್ಯ ಒದಗಿಸುವುದಕ್ಕಾಗಿ ತಮ್ಮ ನೀತಿಯಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಅನುವಾಗುವಂತೆ ಎಲ್ಲಾ ಮಾನ್ಯತೆ ರಹಿತ ಮತ್ತು ಖಾಸಗಿ ವಲಯದ ಉದ್ಯಮಗಳು ಸಂಸ್ಥೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಕೇಂದ್ರ ಮತ್ತು ರಾಜಸ್ಥಾನ ಸರ್ಕಾರಗಳಿಗೆ ನ್ಯಾಯಮೂರ್ತಿ ಅನುಪ್ ಕುಮಾರ್ ಡಂಡ್ ಆದೇಶಿಸಿದರು.

Also Read
ಹೆರಿಗೆ ರಜೆ ನೀಡಿ ಗುತ್ತಿಗೆ ಉದ್ಯೋಗಿ ಸೇವೆ ವಜಾ ಮಾಡಿದ ಸರ್ಕಾರದ ನಡೆಗೆ ಹೈಕೋರ್ಟ್‌ ಕೆಂಡ; ಮರು ನಿಯುಕ್ತಿಗೆ ಆದೇಶ

ಮಾನ್ಯತೆ ಪಡೆಯದ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡಲು ನಿಬಂಧನೆಗಳಿಗೆ ತಿದ್ದುಪಡಿ ಮಾಡುವ ಸಲುವಾಗಿ ಭಾರತ ಸರ್ಕಾರದ ವೈಯಕ್ತಿಕ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಕ್ಕೆ ಅದರ ಕಾರ್ಯದರ್ಶಿ ಮೂಲಕ ಮತ್ತು ರಾಜಸ್ಥಾನ ಸರ್ಕಾರಕ್ಕೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮೂಲಕ ಆದೇಶವನ್ನು ನೀಡಲಾಗುತ್ತಿದೆ ಎಂದು ನ್ಯಾಯಾಲಯದ ಸೆಪ್ಟೆಂಬರ್ 5 ರ ತೀರ್ಪು ಹೇಳಿದೆ.

ಮಾತೃತ್ವ ಸವಲತ್ತು ಕಾಯಿದೆಗೆ 2017ರಲ್ಲಿ ಮಾಡಲಾದ ತಿದ್ದುಪಡಿಯ ಪ್ರಕಾರ ಖಾಸಗಿ ಮತ್ತು ಅಸಂಘಟಿತ ವಲಯಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡುವಂತೆ ಕಾರ್ಮಿಕ ನಿಯಮಾವಳಿಗೆ ತಿದ್ದುಪಡಿ ಮಾಡಲು ನ್ಯಾಯಾಲಯ ತಿಳಿಸಿದೆ.

ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಆರ್‌ಎಸ್‌ಆರ್‌ಟಿಸಿ) ಮಹಿಳಾ ಉದ್ಯೋಗಿಯೊಬ್ಬರಿಗೆ (ಅರ್ಜಿದಾರರು) ಕೇವಲ 90 ದಿನಗಳ ಹೆರಿಗೆ ರಜೆ ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ತನಗೆ 180 ದಿನಗಳ ರಜೆ ಬೇಕೆಂದು ಗರ್ಭಿಣಿ ಉದ್ಯೋಗಿ ಕೇಳಿದ್ದರೆ ತನಗೆ 90 ದಿನಗಳವರೆಗೆ ಮಾತ್ರ ರಜೆ ನೀಡಲು ಸಾಧ್ಯ ಎಂದು ಆರ್‌ಎಸ್‌ಆರ್‌ಟಿಸಿ ವಾದಿಸಿತ್ತು. ಇದನ್ನು ತಾರತಮ್ಯ ಎಂದು ಪರಿಗಣಿಸಿದ ನ್ಯಾಯಾಲಯ ಅರ್ಜಿದಾರರಿಗೆ 180 ದಿನಗಳ ರಜೆ ನೀಡುವಂತೆ ಆದೇಶಿಸಿತು.

ಸಮಯದ ಕೊರತೆಯಿಂದಾಗಿ ಹೆಚ್ಚುವರಿಯಾಗಿ ಇನ್ನೂ 90 ದಿನಗಳ ರಜೆ ನೀಡಲು ಸಾಧ್ಯವಾಗದಿದ್ದರೆ ಆ ದಿನಗಳಿಗೆ ಸಂಬಂಧಿಸಿದಂತೆ ವೇತನ ನೀಡುವಂತೆ ನ್ಯಾಯಾಲಯ ಸೂಚಿಸಿತು.

Also Read
ಕಾನೂನು ನೆರವು ವಕೀಲರಿಗೆ ಹೆರಿಗೆ ಸವಲತ್ತಿನ ನಿರಾಕರಣೆ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಆರ್‌ಎಸ್‌ಆರ್‌ಟಿಸಿ ಉದ್ಯೋಗಿಗಳ ಸೇವಾ ನಿಯಮಾವಳಿ 1965ರ ನಿಯಮ 74ರ ಅಡಿಯಲ್ಲಿ ಆರ್‌ಎಸ್‌ಆರ್‌ಟಿಸಿ ಯ ಮಹಿಳಾ ಉದ್ಯೋಗಿಗಳಿಗೆ ಕೇವಲ 90 ದಿನಗಳ ಹೆರಿಗೆ ರಜೆ  ನೀಡುವುದು ಸಂವಿಧಾನದ 14 ಮತ್ತು 21ನೇ ವಿಧಿಗಳ ಅಡಿಯಲ್ಲಿ ಮಹಿಳೆಯ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕೂಡ ನ್ಯಾಯಾಲಯ ಹೇಳಿದೆ.

ಈ ನಿಟ್ಟಿನಲ್ಲಿ ಹೆರಿಗೆ ಸವಲತ್ತು ಕಾಯಿದೆಯ 1965 ರ ನಿಯಮಾವಳಿಗಳು ಹಳೆಯದಾಗಿವೆ ಎಂದ ನ್ಯಾಯಾಲಯ ಹೆರಿಗೆ ರಜೆಯನ್ನು 180 ದಿನಗಳು ಅಥವಾ 26 ವಾರಗಳಿಗೆ ಹೆಚ್ಚಿಸಿತು.

Kannada Bar & Bench
kannada.barandbench.com