ಲೈಂಗಿಕ ದೌರ್ಜನ್ಯ ದೂರು ನೀಡಲು ಸಿನಿಮಾ ನಿರ್ಮಾಣ ಸಂಸ್ಥೆಗಳು ಆಂತರಿಕ ದೂರು ಸಮಿತಿ ರಚಿಸಬೇಕು: ಕೇರಳ ಹೈಕೋರ್ಟ್‌

ಲೈಂಗಿಕ ದೌರ್ಜನ್ಯದ ಕುರಿತು ದೂರು ನೀಡಲು ಸಿನಿಮಾ ಕ್ಷೇತ್ರವಾದ 'ಎಎಂಎಂಎ' ಮತ್ತು ಇತರೆ ರಾಜಕೀಯ ಪಕ್ಷಗಳಲ್ಲಿ ದೂರು ಪರಿಹಾರಕ್ಕೆ ಸಮಿತಿ ರಚಿಸುವಂತೆ ಕೋರಿದ್ದ ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಹಲವು ನಿರ್ದೇಶನಗಳನ್ನು ನೀಡಿದೆ.
Kerala high court
Kerala high court

ಸಿನಿಮಾ ನಿರ್ಮಾಣ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳಲ್ಲಿ ಆಂತರಿಕ ದೂರುಗಳ ಸಮಿತಿ (ಐಸಿಸಿ) ರಚಿಸುವ ಅಗತ್ಯದ ಕುರಿತು ಈಚೆಗೆ ಕೇರಳ ಹೈಕೋರ್ಟ್‌ ಕೆಲವು ನಿರ್ದೇಶನಗಳನ್ನು ನೀಡಿದೆ (ವುಮೆನ್‌ ಇನ್‌ ಸಿನಿಮಾ ಕಲೆಕ್ಟಿವ್ ವರ್ಸಸ್‌ ಕೇರಳ ರಾಜ್ಯ ಮತ್ತು ಇತರರು).

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಲೈಂಗಿಕ ದೌರ್ಜನ್ಯ ದೂರು ಪರಿಹಾರ ಸಮಿತಿಗಳನ್ನು ರಚಿಸಲು ನಿರ್ದೇಶಿಸಬೇಕು ಎಂದು ಕೋರಿ ವಿವಿಧ ಸಂಘ-ಸಂಸ್ಥೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್‌ ಮಣಿಕುಮಾರ್‌ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ನೇತೃತ್ವದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ.

ಕಲಾವಿದರನ್ನು ನೇರವಾಗಿ ಸಿನಿಮಾಗೆ ನಿಯೋಜಿಸಿಕೊಳ್ಳುವ ನಿರ್ಮಾಣ ಸಂಸ್ಥೆಗಳಲ್ಲದೇ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳು ಐಸಿಸಿ ರಚಿಸಬೇಕು. 10 ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಹೊಂದಿರುವ, ಮಹಿಳೆಯರನ್ನು ಒಳಗೊಂಡಿರುವ ಸಂಸ್ಥೆಗಳು ಐಸಿಸಿ ರಚಿಸಬೇಕು ಎಂದು ಪೀಠವು ಹೇಳಿದೆ.

ತನ್ನ ಸದಸ್ಯರ ಜೊತೆ ಉದ್ಯೋಗದಾತರು ಅಥವಾ ಉದ್ಯೋಗಿ ಸಂಬಂಧವನ್ನು ಹೊಂದಿರದ, ಖಾಸಗಿ ಉದ್ಯಮ, ಸಂಸ್ಥೆ ಇತ್ಯಾದಿಯನ್ನು ನಡೆಸದ ʼಕೆಲಸದ ಸ್ಥಳʼದ ವ್ಯಾಖ್ಯಾನ ಹೊಂದಿರದ ರಾಜಕೀಯ ಪಕ್ಷಗಳು ಐಸಿಸಿ ಹೊಂದುವ ಅವಶ್ಯಕತೆ ಇಲ್ಲ ಎಂದು ಪೀಠವು ಹೇಳಿದೆ.

Also Read
ದೇಶದ ಕಾಯಿದೆ- ಕಟ್ಟಳೆಗಳ ಬಗ್ಗೆ ಅರಿವು ಮೂಡಿಸುತ್ತ ವಿಶಿಷ್ಟ ಪ್ರಚಾರದಲ್ಲಿ ತೊಡಗಿರುವ ಸಿನಿಮಾ ತಂಡ!

“ಸಿನಿಮಾ ನಿರ್ಮಾಣ ಘಟಕಗಳಲ್ಲಿ ಕೆಲಸ ಮಾಡುವ ನಟಿಯರು, ಕಲಾವಿದರು ಮತ್ತು ಇತರೆ ಉದ್ಯೋಗಿಗಳಿಗೆ ಇದರಿಂದ ಸಾಕಷ್ಟು ವಿಶ್ವಾಸ ಮೂಡಲಿದೆ. ಇದರಿಂದ ಸಿನಿಮಾ ಕ್ಷೇತ್ರದಲ್ಲಿನ ಮಹಿಳೆಯರ ಘನತೆ ಮತ್ತು ಅವರ ಜೀವಿಸುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಅರ್ಥ ಬರಲಿದೆ” ಎಂದು ಪೀಠವು ಹೇಳಿದೆ.

ವಿಶಾಖ ವರ್ಸಸ್‌ ರಾಜಸ್ಥಾನ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ ಅಡಿ ಕ್ರಮಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com