ಇಂದಿನಿಂದ ಭಾರತೀಯ ನ್ಯಾಯ ಸಂಹಿತೆ ಅಡಿ ಎಫ್‌ಐಆರ್‌ ದಾಖಲು

“ರಾಜ್ಯದ 7 ವಲಯ, 6 ಕಮಿಷನರೇಟ್‌ ಘಟಕಗಳು & 1,063 ಪೊಲೀಸ್‌ ಠಾಣೆಗಳ ಎಲ್ಲಾ ಪೊಲೀಸರು, ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತರಬೇತಿ ಪ್ರಕ್ರಿಯೆ ಮುಂದುವರಿಯುತ್ತಿದೆ” ಎಂದು ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಟ್ವೀಟ್‌ ಮಾಡಿದ್ದಾರೆ.
ಭಾರತೀಯ ನ್ಯಾಯ (ಎರಡನೇ) ಸಂಹಿತಾ,
ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ,
ಭಾರತೀಯ ಸಾಕ್ಷರತಾ (ಎರಡನೇ) ಮಸೂದೆ.
ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ, ಭಾರತೀಯ ಸಾಕ್ಷರತಾ (ಎರಡನೇ) ಮಸೂದೆ.
Published on

ಮೂರು ಹೊಸ ಕ್ರಿಮಿನಲ್‌ ಅಪರಾಧ ಕಾಯಿದೆಗಳು ಇಂದಿನಿಂದ ಜಾರಿಗೆ ಬರಲಿವೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ -2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌)-2023, ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ)-2023 ಇಂದಿನಿಂದ ಜಾರಿಗೆ ಬರಲಿರುವ ಕಾಯಿದೆಗಳಾಗಿವೆ.

“ರಾಜ್ಯದ ಏಳು ವಲಯಗಳು, ಆರು ಕಮಿಷನರೇಟ್‌ ಘಟಕಗಳು ಮತ್ತು 1,063 ಪೊಲೀಸ್‌ ಠಾಣೆಗಳ ಎಲ್ಲಾ ಪೊಲೀಸರು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತರಬೇತಿ ಪ್ರಕ್ರಿಯೆ ಮುಂದುವರಿಯುತ್ತಿದೆ” ಎಂದು ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರು ಟ್ವೀಟ್‌ ಮಾಡಿದ್ದಾರೆ.

Also Read
ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ, ಸಾಕ್ಷ್ಯ ಮಸೂದೆಗಳ ಅಧ್ಯಯನ ಸಮಿತಿಯಿಂದ ಸಿಎಂಗೆ ವರದಿ ಸಲ್ಲಿಕೆ

ಮೈಸೂರು ಪೊಲೀಸ್‌ ಅಕಾಡೆಮಿಯಿಂದ ಕನ್ನಡದಲ್ಲೇ ಹೊಸ ಕಾಯಿದೆಗಳ ಕನ್ನಡ ಕೈಪಿಡಿ ಸಿದ್ಧಪಡಿಸಿ ವಿತರಿಸಲಾಗಿದೆ. ಹೀಗಾಗಿ, ಇಂದಿನಿಂದ ಬಿಎನ್‌ಎಸ್‌ ಕಾಯಿದೆ ಉಲ್ಲೇಖಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಲಿದ್ದಾರೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಬಿ ದಯಾನಂದ್‌ ತಿಳಿಸಿದ್ದಾರೆ.

ಹೊಸ ಕಾಯಿದೆ ಹಾಗೂ ಸೆಕ್ಷನ್‌ಗಳು ಎಫ್‌ಐಆರ್‌ನಲ್ಲಿ ಮಾತ್ರವಲ್ಲದೇ, ಪೊಲೀಸ್‌ ಐಟಿಯಲ್ಲೂ (ವೆಬ್‌ಸೈಟ್‌) ಬದಲಾವಣೆ ಆಗಿದೆ. ಎಫ್‌ಐಆರ್‌ ಜೊತೆಗೆ ಇಲ್ಲಿಯೂ ಬಿಎನ್‌ಎಸ್‌, ಬಿಎನ್‌ಎಸ್‌ಎಸ್‌ ಮತ್ತು ಬಿಎಸ್‌ಎ ಕಾಯಿದೆಗಳ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಸಿದ್ಧಪಡಿಸಲಾಗಿದೆ. ಪೊಲೀಸ್‌ ಐಟಿ ಸಂಪೂರ್ಣವಾಗಿ ಬದಲಾಗಿ ಹೊಸ ಸ್ವರೂಪದಲ್ಲಿ ಲಭ್ಯವಾಲಿದೆ ಎನ್ನಲಾಗಿದೆ.

Kannada Bar & Bench
kannada.barandbench.com