ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರಾಗಿ ನ್ಯಾ. ಹೇಮಂತ್ ಗುಪ್ತಾ ನೇಮಕ

ವಕೀಲರಾದ ಗಣೇಶ್ ಚಂದ್ರು ಮತ್ತು ಅನಂತ್ ವಿಜಯ್ ಪಲ್ಲಿ ಅವರನ್ನು ಎನ್‌ಡಿಐಎಸಿ ಅರೆಕಾಲಿಕ ಸದಸ್ಯರನ್ನಾಗಿ ನೇಮಿಸಲಾಗಿದೆ.
Justice Hemant Gupta
Justice Hemant Gupta

ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ (ಎನ್‌ಡಿಐಎಸಿ) ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಈ ಕುರಿತಾದ ಮಾಹಿತಿಯನ್ನು ಸಂಪುಟ ನೇಮಕಾತಿ ಸಮಿತಿಯು ಕಾನೂನು ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿದೆ. ವಕೀಲರಾದ ಗಣೇಶ್ ಚಂದ್ರು ಮತ್ತು ಅನಂತ್ ವಿಜಯ್ ಪಲ್ಲಿ ಅವರನ್ನು ಎನ್‌ಡಿಐಎಸಿಯ ಅರೆಕಾಲಿಕ ಸದಸ್ಯರನ್ನಾಗಿ ನೇಮಿಸಲಾಗಿದೆ.

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಕಾನೂನು ವೃತ್ತಿಪರರ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ 1991 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದರು. ನ್ಯಾ. ಗುಪ್ತಾ ಅವರು 1980ರಲ್ಲಿ ವಕೀಲರಾಗಿ ಕಾರ್ಯಾರಂಭ ಮಾಡಿದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ ಅವರು ಅದೇ ಹೈಕೋರ್ಟ್‌ನಲ್ಲಿ 1997 ರಿಂದ 1999 ರ ನಡುವೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದರು.

Also Read
ಜೀತದಾಳುಗಳು ಬಂಧಿತರಲ್ಲ, ಅವರದು ಹಣ ಮಾಡುವ ದಂಧೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೇಮಂತ್ ಗುಪ್ತಾ

ಜುಲೈ 2002 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಅವರನ್ನು ಫೆಬ್ರವರಿ 2016ರಲ್ಲಿ ಪಾಟ್ನಾ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಆ ವರ್ಷದ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಮಾರ್ಚ್ 2017 ರಲ್ಲಿ ನೇಮಕಗೊಂಡರು. ಮುಂದೆ ನವೆಂಬರ್ 2018 ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು.

Related Stories

No stories found.
Kannada Bar & Bench
kannada.barandbench.com