ಸುಪ್ರೀಂ ಕೋರ್ಟ್‌ನಿಂದ ನಾಲ್ಕನೆಯ ಸಾಂವಿಧಾನಿಕ ಪೀಠದ ರಚನೆ: 5 ಪ್ರಕರಣಗಳನ್ನು ಆಲಿಸಲಿರುವ ನ್ಯಾಯಾಲಯ

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಹಾಗೂ ಬಿ ವಿ ನಾಗರತ್ನ ಅವರನ್ನು ಒಳಗೊಂಡಿರುವ ಪೀಠ.
Justices Ramasubramanian, BR Gavai, Abdul Nazeer,  AS Bopanna, BV Nagarathna
Justices Ramasubramanian, BR Gavai, Abdul Nazeer, AS Bopanna, BV Nagarathna
Published on

ನೋಟು ಅಮಾನ್ಯೀಕರಣ, ಸರ್ಕಾರಿ ಅಧಿಕಾರಿಗಳ ವಾಕ್‌ ಸ್ವಾತಂತ್ರ್ಯ ಸೇರಿದಂತೆ ಸಾಂವಿಧಾನಿಕ ಪ್ರಶ್ನೆಗಳ ಇತ್ಯರ್ಥ ಬಯಸಿರುವ ಐದು ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಾಲ್ಕನೇ ಸಾಂವಿಧಾನಿಕ ಪೀಠ ರಚಿಸಿದೆ.

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಹಾಗೂ ಬಿ ವಿ ನಾಗರತ್ನ ಅವರನ್ನು ಒಳಗೊಂಡ ಪೀಠ ಈ ಕೆಳಗಿನ ಪ್ರಕರಣಗಳನ್ನು ಆಲಿಸಲಿದೆ:

- ನೋಟು ಅಮಾನ್ಯೀಕರಣದ ವಿರುದ್ಧ ಸಲ್ಲಿಸಿರುವ ಮನವಿ [ವಿವೇಕ್ ನಾರಾಯಣ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

- ಸಾರ್ವಜನಿಕ/ಸರ್ಕಾರಿ ಅಧಿಕಾರಿಗಳ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣ [ಕೌಶಲ್ ಕಿಶೋರ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

- ಶಾಸಕಾಂಗ ಸಭೆಯ ಸದಸ್ಯರು (ಸಂವಿಧಾನದ 194(2)ನೇ ವಿಧಿ ಅಡಿಯಲ್ಲಿ) ಶಾಸನಸಭೆಯಲ್ಲಿ ನೀಡಿದ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಅವರಿಗೆ ಒದಗಿಸಲಾದ ರಕ್ಷಣೆ ಲಂಚ ತೆಗೆದುಕೊಂಡಾಗ ಕಾನೂನು ಕ್ರಮ ಕೈಗೊಳ್ಳುವುದರ ವಿರುದ್ಧವೂ ರಕ್ಷಣೆ ನೀಡುತ್ತದೆಯೇ ಎಂದು ಪ್ರಶ್ನಿಸಿರುವ ಅರ್ಜಿ [ಸೀತಾ ಸೊರೆನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

Also Read
ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಕಲಾಪಗಳ ನೇರಪ್ರಸಾರ ಆರಂಭ

- ಸಿಆರ್‌ಪಿಸಿ ಸೆಕ್ಷನ್‌ 319ಕ್ಕೆ ಸಂಬಂಧಿಸಿದ ಪ್ರಕರಣ [ಸುಖಪಾಲ್ ಸಿಂಗ್ ಖೈರಾ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣ].

- ಲಂಚದ ಬಗ್ಗೆ ದೂರುದಾರರ ನೇರ ಅಥವಾ ಪ್ರಾಥಮಿಕ ಪುರಾವೆಗಳು ಇಲ್ಲದಿದ್ದಾಗ ಭ್ರಷ್ಟಾಚಾರ ತಡೆ ಕಾಯಿದೆ, 1988ರ ಸೆಕ್ಷನ್ 13(2) ಸಹವಾಚನ ಸೆಕ್ಷನ್ 7 ಮತ್ತು ಸೆಕ್ಷನ್ 13(1)(ಡಿ) ತಪ್ಪಿತಸ್ಥರ ಕುರಿತು ತರ್ಕಾತ್ಮಕ ತೀರ್ಮಾನ ಕೈಗೊಳ್ಳಲು ಅನುಮತಿ ಇಲ್ಲವೇ ಎಂದು ಪ್ರಶ್ನಿಸಿರುವ ಅರ್ಜಿ [ನೀರಜ್‌ ದತ್ತಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಸಾಂವಿಧಾನಿಕ ಪೀಠದ ಕಲಾಪಗಳ ನೇರ ಪ್ರಸಾರವನ್ನು ಸುಪ್ರೀಂ ಕೋರ್ಟ್ ಇಂದಿನಿಂದ (ಮಂಗಳವಾರ) ಆರಂಭಿಸಿದೆ.

Kannada Bar & Bench
kannada.barandbench.com