ಬೇರೆ ಧರ್ಮಗಳನ್ನು ಕೀಳಾಗಿ ಕಾಣಲು ಯಾವುದೇ ಧರ್ಮದ ವ್ಯಕ್ತಿಗಳಿಗೆ ಮೂಲಭೂತ ಹಕ್ಕು ಇಲ್ಲ: ಕರ್ನಾಟಕ ಹೈಕೋರ್ಟ್

ಆರೋಪಿಗಳು ತನ್ನ ಮನೆಗೆ ಬಂದು ಯೇಸು ಒಬ್ಬನೇ ಮನಸ್ಸಿಗೆ ಶಾಂತಿಕೊಡಬಲ್ಲ ಇತರೆ ಧರ್ಮಗಳಿಂದ ಅದು ಸಾಧ್ಯವಿಲ್ಲ ಎಂದಿದ್ದರು ಎಂದು ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
Karnataka High Court
Karnataka High Court

ಒಂದು ನಿರ್ದಿಷ್ಟ ಧರ್ಮದ ಮೇಲೆ ನಂಬಿಕೆ ಇರಿಸಿರುವ ವ್ಯಕ್ತಿಗೆ ಬೇರೊಂದು ಧರ್ಮವನ್ನು ಕೀಳಾಗಿ ಕಾಣಲು ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ. ತಮ್ಮ ಧರ್ಮವನ್ನು ಪ್ರತಿಪಾದಿಸುವಾಗ ಆ ಧರ್ಮದ ವ್ಯಕ್ತಿಗಳು ಅಥವಾ ಮುಖಂಡರು ಇಲ್ಲವೇ ಪ್ರವಚನಕಾರರು ಇತರ ಧರ್ಮಗಳನ್ನು ಹೀಗಳೆಯಬಾರದು ಎಂದು ನ್ಯಾ. ಎಚ್‌ ಪಿ ಸಂದೇಶ್‌ ತಿಳಿಸಿದರು. ಆ ಮೂಲಕ ಬೇರೆ ಧರ್ಮಗಳನ್ನು ಅವಮಾನಿಸಿದ ಇಬ್ಬರು ಕ್ರೈಸ್ತ ಧರ್ಮೀಯರ ವಿರುದ್ಧದ ಕ್ರಿಮಿನಲ್‌ ಆಪಾದನೆ ರದ್ದುಗೊಳಿಸಲು ನಿರಾಕರಿಸಿದರು.

“ಆರೋಪಿಗಳು ನನ್ನ ಮನೆಗೆ ಬಂದು ಬೈಬಲ್‌ ಮಾತ್ರ ಭವಿಷ್ಯ ಹೇಳಬಲ್ಲದು. ಇತರೆ ಯಾವುದೇ ಧಾರ್ಮಿಕ ಗ್ರಂಥಗಳಿಗೆ ಇದು ಸಾಧ್ಯವಿಲ್ಲ. ಭವಿಷ್ಯದಲ್ಲಿ ಸುನಾಮಿ ಬರಲಿದೆ, ಯೇಸುಕ್ರಿಸ್ತ ಒಬ್ಬನೇ ಮನಸ್ಸಿಗೆ ಶಾಂತಿಕೊಡಬಲ್ಲ ಇತರೆ ಧರ್ಮಗಳಿಂದ ಅದು ಸಾಧ್ಯವಿಲ್ಲ ಭಗವದ್ಗೀತೆಯಾಗಲೀ ಅಥವಾ ಕುರಾನ್ ಆಗಲೀ ಮನಸ್ಸಿಗೆ ಶಾಂತಿ ನೀಡುವುದಿಲ್ಲ ಅಥವಾ ವ್ಯಕ್ತಿಗಳನ್ನು ರಕ್ಷಿಸುವುದಿಲ್ಲ ಎಂದಿದ್ದರು” ಎಂಬುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದರು.

ಮಹಿಳೆಯ ದೂರನ್ನು ಆಧರಿಸಿ ಪೊಲೀಸರು ಐಪಿಸಿಯ ಸೆಕ್ಷನ್ 34 ಅನುಸರಣೆ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪದಗಳ ಉಚ್ಚರಣೆ) ಅಡಿಯಲ್ಲಿ ಆರೋಪಿಗಳು ಅಪರಾಧ ಎಸಗಿರುವುದಾಗಿ ಆರೋಪಪಟ್ಟಿ ಸಲ್ಲಿಸಿದ್ದರು. ಜೂನ್ 8, 2020ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಇದನ್ನು ಅಪರಾಧ ಎಂದು ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಕ್ರಮ ಸಂವಿಧಾನದ 14, 21 ಮತ್ತು 25 ನೇ ವಿಧಿಯಡಿ ದೊರೆತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಗಳು ವಾದಿಸಿದ್ದರು. ಘಟನೆ ನಡೆದ ಮೂರೂವರೆ ವರ್ಷಗಳ ನಂತರ ದೂರು ದಾಖಲಿಸಲಾಗಿದೆ ಎಂದು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.

Also Read
ಮಹಿಳೆಯ ವಿರುದ್ಧದ ಅಪರಾಧಗಳಲ್ಲಿ ಕೋರ್ಟುಗಳು ಮೂಕಪ್ರೇಕ್ಷಕರಾಗದೆ ಕೃಷ್ಣನಂತೆ ಧರ್ಮ ರಕ್ಷಿಸಬೇಕು: ಕರ್ನಾಟಕ ಹೈಕೋರ್ಟ್

ವಿಳಂಬಕ್ಕೆ ಆಕ್ಷೇಪ ವ್ಯಕ್ತಪಡಿಸಲು ಸಿಆರ್‌ಪಿಸಿ ಸೆಕ್ಷನ್‌ 473 ರ ಅಡಿ ಯಾವುದೇ ಅರ್ಜಿ ಸಲ್ಲಿಸಿಲ್ಲ. ಅಲ್ಲದೆ ಇತರೆ ಧರ್ಮಗಳನ್ನು ಕೀಳಾಗಿ ಕಾಣಲು ಯಾವುದೇ ಧರ್ಮಕ್ಕೆ ಮೂಲಭೂತ ಹಕ್ಕು ನೀಡಿಲ್ಲ ಎಂದು ಮಹಿಳೆ ಪರ ವಕೀಲರು ಪ್ರತಿಪಾದಿಸಿದ್ದರು. ಎರಡೂ ಕಡೆಯವರು ತಮ್ಮ ವಾದ ಸಮರ್ಥಿಸಲು ವಿವಿಧ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ್ದರು. ಕ

ಆರೋಪದ ಗಹನತೆಯನ್ನು ಪರಿಗಣಿಸಿದ ನ್ಯಾಯಾಲಯ ದೂರುದಾರರ ವಾದವನ್ನು ಪುರಸ್ಕರಿಸಿತು. ಸಾರಾ ಮ್ಯಾಥ್ಯೂ ಇನ್ನಿತರರು ಮತ್ತು ಐಸಿವಿಡಿ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ದೂರು ದಾಖಲಿಸಲು ವಿಳಂಬವಾಗಿದೆ ಎಂಬ ಆರೋಪಿಗಳ ವಾದವನ್ನು ಒಪ್ಪಲಾಗದು ಎಂದಿತು. ಸೆಕ್ಷನ್‌ 468ರ ಅಡಿ ದೂರು ದಾಖಲಾದ ದಿನದಿಂದ ಕಾಲಾವಧಿಯ ಮಿತಿ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪನ್ನು ಪುನರುಚ್ಚರಿಸಿತು.

ಆರೋಪಿಗಳು ಯೇಸು ಮಾತ್ರ ರಕ್ಷಕ, ಇನ್ನಾವುದೇ ಧರ್ಮ ಅಲ್ಲ. ಸುನಾಮಿ ಬರಲಿದೆ ಎಂದಿರುವುದು ಐಪಿಸಿ ಸೆಕ್ಷನ್ 298ರ ಅಡಿ ಅಪರಾಧ. ತನಿಖಾಧಿಕಾರಿ ಈ ಸೆಕ್ಷನ್‌ನಡಿ ದೂರು ದಾಖಲಿಸಿರುವುದರಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ ಮತ್ತು ಸರ್ಕಾರದ ಕ್ರಮ ಸಂವಿಧಾನದ 14, 21 ಮತ್ತು 25 ನೇ ವಿಧಿಯಡಿ ದೊರೆತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಆರೋಪಿಗಳ ವಾದವನ್ನು ಮನ್ನಿಸಲಾಗದು ಎಂದಿತು.

Related Stories

No stories found.
Kannada Bar & Bench
kannada.barandbench.com