ಗೃಹ ಬಂಧನ ವಿಚಾರ: ಸುಪ್ರೀಂ ಕೋರ್ಟ್‌ನಲ್ಲಿ ಭೀಮಾ ಕೋರೆಗಾಂವ್‌ ಆರೋಪಿ ನವಲಾಖಾ ಹಾಗೂ ಎನ್ಐಎ ಆರೋಪ- ಪ್ರತ್ಯಾರೋಪ

"ಅವರು ಮಾವೋವಾದಿ ಮತ್ತು ನಾವು ಅದನ್ನು ವಿರೋಧಿಸಿದ್ದೆವು. ಆದರೆ ಈಗ (ಗೃಹಬಂಧನದಲ್ಲಿರಲು) ತಮ್ಮ ಮನೆಯ ಬದಲಿಗೆ ವಾಸಸ್ಥಳವೂ ಆಗಿರುವ ಕಮ್ಯುನಿಸ್ಟ್ ಪಕ್ಷದ ಗ್ರಂಥಾಲಯದ ವಿಳಾಸ ನೀಡಿದ್ದಾರೆ" ಎಂದು ಎಸ್‌ಜಿ ಹೇಳಿದರು.
Gautam Navlakha, Supreme Court
Gautam Navlakha, Supreme Court

ತಮ್ಮನ್ನು ಗೃಹಬಂಧನದಲ್ಲಿ ಇರಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು  2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಗೌತಮ್ ನವಲಾಖಾ ಅವರು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ವಿಷಯವನ್ನು ನವಲಾಖಾ ಅವರ ಪರ  ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ನಿತ್ಯಾ ರಾಮಕೃಷ್ಣನ್ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರೆದುರು ಪ್ರಸ್ತಾಪಿಸಿದರು.

ಆದರೆ ಈ ವಾದವನ್ನು ಒಪ್ಪದ ರಾಷ್ಟ್ರೀಯ ತನಿಖಾ ಸಂಸ್ಥೆ ಯನ್ನು(ಎನ್‌ಐಎ) ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಳ್ಳಿಹಾಕಿದರು. ಗೃಹಬಂಧನದಲ್ಲಿ ಇರಿಸಲು ಬಯಸುವ ಮನೆಯ ವಿವರ ನೀಡುವ ಬದಲು ನವಲಾಖಾ ಅವರು  ಕಮ್ಯುನಿಸ್ಟ್‌ ಪಕ್ಷಕ್ಕೆ ಸೇರಿದ ಗ್ರಂಥಾಲಯವೂ ಆಗಿರುವ ವಸತಿ ಸ್ಥಳದ ವಿಳಾಸ ನೀಡಿದ್ದಾರೆ ಎಂದು ದೂರಿದರು.

Also Read
[ಭೀಮಾ ಕೋರೆಗಾಂವ್] ಗೌತಮ್ ನವಲಾಖಾ ಗೃಹ ಬಂಧನದ ಕೋರಿಕೆ ಪುರಸ್ಕರಿಸಿದ ಸುಪ್ರೀಂ; ಒಂದು ತಿಂಗಳ ಅವಧಿಗೆ ಸಮ್ಮತಿ

"ಅವರು ಮಾವೋವಾದಿ ಮತ್ತು ನಾವು ಅದನ್ನು (ಗೃಹಬಂಧನವನ್ನು) ವಿರೋಧಿಸಿದ್ದೆವು. ಆದರೆ ಈಗ ಅವರು ಮನೆಯ ಬದಲಿಗೆ ಕಮ್ಯುನಿಸ್ಟ್ ಪಕ್ಷದ ಗ್ರಂಥಾಲಯವೂ ಆಗಿರುವ ವಾಸಸ್ಥಳದ ವಿಳಾಸ ನೀಡಿದ್ದಾರೆ" ಎಂದು ಎಸ್‌ಜಿ ಹೇಳಿದರು.

ಆದರೆ ಇದಕ್ಕೆ ಆಕ್ಷೇಪಿಸಿದ ನಿತ್ಯಾ ಅವರು ಗ್ರಂಥಾಲಯ ಎಂದೇ ವಿಳಾಸ ನೀಡಲಾಗಿತ್ತು ಎಂದರು. ಎನ್‌ಐಎ ಕೂಡ ಕೆಲ ನಿರ್ದೇಶನಗಳನ್ನು ಬಯಸುತ್ತಿದ್ದು ಪ್ರಕರಣವನ್ನು ಸೋಮವಾರಕ್ಕೆ ಮುಂದೂಡುವಂತೆ ಎಸ್‌ಜಿ ಕೋರಿದರು. ಅಂತಿಮವಾಗಿ ಗೃಹಬಂಧನ ಆದೇಶ ಹೊರಡಿಸಿದ್ದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಪೀಠದ ಮುಂದೆ ನಾಳೆ ವಿಚಾರಣೆಯನ್ನು ಸಿಜೆಐ ಪಟ್ಟಿ ಮಾಡಿದರು.

ನವೆಂಬರ್ 10 ರಂದು, ಕೆಲವು ಷರತ್ತುಗಳಿಗೆ ಒಳಪಟ್ಟು ನವಲಾಖಾ ಅವರನ್ನು ಒಂದು ತಿಂಗಳ ಕಾಲ ಜೈಲಿನಿಂದ ಗೃಹಬಂಧನಕ್ಕೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

Related Stories

No stories found.
Kannada Bar & Bench
kannada.barandbench.com