ಜಾಲತಾಣಗಳಲ್ಲಿ ತೀರ್ಪಿನ ಪ್ರತಿ ಪ್ರಕಟಿಸಲು ಹೈಕೋರ್ಟ್‌ಗಳ ವಿಳಂಬ: ಸುಪ್ರೀಂ ಕೋರ್ಟ್‌ ತೀವ್ರ ಕಳವಳ

ಈ ಧೋರಣೆ ತೀವ್ರ ಆತಂಕಕಾರಿ ಸಂಗತಿಯಾಗಿದ್ದು, ಇಂತಹ ವಿಳಂಬಗಳು ದಾವೆದಾರರು ಸಕಾಲಿಕ ನ್ಯಾಯಾಂಗ ಪರಿಹಾರ ಪಡೆಯುವ ಹಕ್ಕನ್ನು ಕಸಿದುಕೊಳ್ಳುತ್ತವೆ ಎಂದಿದೆ ಪೀಠ.
Supreme Court
Supreme Court
Published on

ಹೈಕೋರ್ಟ್‌ಗಳು ತಮ್ಮ ತೀರ್ಪುಗಳ ಆಪರೇಟಿವ್‌ (ಪರಿಣಾಮಕಾರಿ) ಭಾಗಗಳನ್ನು ಉಚ್ಚರಿಸಿದ ಬಳಿಕ ತಿಂಗಳು, ವರ್ಷ ಕಳೆದರೂ ವಿವರವಾದ ತೀರ್ಪಿನ ಪ್ರತಿಗಳನ್ನು ತಮ್ಮ ಜಾಲತಾಣಗಳಲ್ಲಿ ಪ್ರಕಟಿಸದೆ ಇರುವ ಧೋರಣೆ ಹೆಚ್ಚುತ್ತಿರುವುದನ್ನು ಸುಪ್ರೀಂ ಕೋರ್ಟ್‌ ಈಚೆಗೆ ಖಂಡಿಸಿದೆ [ರಾಜನ್ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಪದ್ಧತಿ ತೀವ್ರ ಕಳವಳಕಾರಿ ಸಂಗತಿಯಾಗಿದ್ದು, ಇಂತಹ ವಿಳಂಬಗಳು ದಾವೆದಾರರು ಸಕಾಲಿಕ ನ್ಯಾಯಾಂಗ ಪರಿಹಾರವನ್ನು ಪಡೆಯುವ ಹಕ್ಕನ್ನು ಕಸಿದುಕೊಳ್ಳುತ್ತವೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.

Also Read
ಹೈಕೋರ್ಟ್‌ಗಳ ತೀರ್ಪು ವಿಳಂಬ ಖಂಡಿಸಿದ ಸುಪ್ರೀಂ: ಮಾಸಿಕ ವರದಿ ಸಿದ್ಧಪಡಿಸುವಂತೆ ಆದೇಶ

ಭವಿಷ್ಯದಲ್ಲಿ ಯಾವುದೇ ಪ್ರಕರಣದಲ್ಲಿ ತೀರ್ಪಿನ ಆಪರೇಟಿವ್‌ ಭಾಗವನ್ನು ಘೋಷಿಸಿದ ಬಳಿಕ ಹೈಕೋರ್ಟ್‌ಗಳು ತಮ್ಮ ಆದೇಶಗಳ ಪ್ರತಿಯನ್ನು ಜಾಲತಾಣಗಳಲ್ಲಿ ಪ್ರಕಟ ಮಾಡುವುದರಲ್ಲಿ ವಿಳಂಬ ಧೋರಣೆ ಅನುಸರಿಸಬಾರದು ಎಂದು ಆಶಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಅನಿಲ್ ರಾಯ್ ಮತ್ತು ಬಿಹಾರ ಸರ್ಕಾರ ಪ್ರಕರಣದಲ್ಲಿ ಈಗಾಗಲೇ ನೀಡಲಾದ ನಿರ್ದೇಶನಗಳನ್ನು ಪುನರುಚ್ಚರಿಸಿದ ಅದು ಹೈಕೋರ್ಟ್‌ ತನ್ನ ತೀರ್ಪುಗಳನ್ನು ತಡವಿಲ್ಲದೆ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಬೇಕು ಎಂದು ತಿಳಿಸಿತು.

1998ರ ಕೊಲೆ ಪ್ರಕರಣದಲ್ಲಿ ತನ್ನ ಶಿಕ್ಷೆಯನ್ನು ಎತ್ತಿಹಿಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಆರೋಪಿ ರಾಜನ್‌ ಅರ್ಜಿ ಸಲ್ಲಿಸಿದ್ದ. ಹೈಕೋರ್ಟ್‌ ತೀರ್ಪನ್ನು ಘೋಷಿಸಿತಾದರೂ ಅದನ್ನು ಜಾಲತಾಣದಲ್ಲಿ ಪ್ರಕಟಿಸಲು ಎರಡು ವರ್ಷ ಐದು ತಿಂಗಳಷ್ಟು ವಿಳಂಬ ಮಾಡಿದ್ದರಿಂದ ತೀವ್ರ ಅನ್ಯಾಯವಾಗಿದೆ. ತನ್ನಿಂದ ಬಂದೂಕು ವಶಪಡಿಸಿಕೊಂಡಿಲ್ಲ ಎಂದು ಆತ ದೂರಿದ್ದ.

Also Read
ನಟ ದಿಲೀಪ್ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರಣೆ ವಿಳಂಬ: ಸೆಷನ್ಸ್ ನ್ಯಾಯಾಲಯದ ವರದಿ ಕೇಳಿದ ಕೇರಳ ಹೈಕೋರ್ಟ್

ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಕೃತ್ಯವನ್ನು ದೃಢವಾಗಿ ಹೇಳಿರುವಾಗ ಆಯುಧ ವಶಪಡಿಸಿಕೊಳ್ಳದೇ ಇರುವುದು ಮುಖ್ಯವಲ್ಲ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ಆತನ ವಾದ ತಿರಸ್ಕರಿಸಿತು. ಆದರೆ ಪ್ರಕರಣದ ತೀರ್ಪುಗಳನ್ನು ಜಾಲತಾಣಗಳಲ್ಲಿ ಪ್ರಕಟಿಸುವಲ್ಲಿ ಹೈಕೋರ್ಟ್‌ಗಳು ಅನುಸರಿಸುತ್ತಿರುವ ವಿಳಂಬ ಧೋರಣೆ ಬಗ್ಗೆ ಅದು ಇದೇ ವೇಳೆ ಕಳವಳ ವ್ಯಕ್ತಪಡಿಸಿತು.

"ಸುಮಾರು 2 ವರ್ಷ 5 ತಿಂಗಳ ಅವಧಿ ಕಳೆದರೂ ಹೈಕೋರ್ಟ್ ತೀರ್ಪನ್ನು ಅಪ್‌ಲೋಡ್ ಮಾಡುವಲ್ಲಿ ವಿಳಂಬ ಮಾಡಿರುವುದು ತೀವ್ರ ಕಳವಳಕಾರಿ ವಿಚಾರ. ಈ ಸಂಗತಿಯನ್ನು ಕಡೆಗಣಿಸಲಾಗದು. ಹೈಕೋರ್ಟ್‌ನ ಈ ವಿಳಂಬವನ್ನು ಗಂಭೀರವಾಗಿ ಪರಿಗಣಿಸಲಾಗಿದೆ" ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಅಂತೆಯೇ ರಾಜನ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಅದು ಎಲ್ಲಾ ಹೈಕೋರ್ಟ್‌ಗಳಿಗೆ ತನ್ನ ತೀರ್ಪಿನ ಪ್ರತಿಗಳನ್ನು ಒದಗಿಸುವಂತೆ ನಿರ್ದೇಶನ ನೀಡಿತು.

[ತೀರ್ಪಿನ ಪ್ರತಿ]

Attachment
PDF
Rajan_v__State_of_Haryana
Preview
Kannada Bar & Bench
kannada.barandbench.com