ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಿರುವ ಗುಜರಾತ್ ಸರ್ಕಾರ

ಈ ನಿಟ್ಟಿನಲ್ಲಿ ಸಂಹಿತೆ ಜಾರಿಗೆ ತರುವ ಸಮಿತಿ ರಚನೆಗೆ ಗುಜರಾತ್ ಸಚಿವ ಸಂಪುಟ ಅನುಮೋದನೆ ನೀಡಿದೆ.
Gujarat, Uniform Civil Code
Gujarat, Uniform Civil Code

ಗುಜರಾತ್ ಸರ್ಕಾರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಸಿದ್ಧವಾಗಿದೆ ಎಂದು ಗೃಹ ಸಚಿವ ಹರ್ಷ್‌ ಸಾಂಘ್ವಿ ಶನಿವಾರ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಸಂಹಿತೆ ಜಾರಿಗೆ ತರುವ ಸಮಿತಿ ರಚನೆಗೆ ಗುಜರಾತ್ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಸಂಹಿತೆ ಅನುಷ್ಠಾನ ಸಮಿತಿಯಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂರರಿಂದ ನಾಲ್ವರು ಸದಸ್ಯರು ಇರಲಿದ್ದಾರೆ ಎಂದು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಹೇಳಿದ್ದಾರೆ.

Also Read
ಏಕರೂಪ ನಾಗರಿಕ ಸಂಹಿತೆಗೆ ಆಳವಾದ ಅಧ್ಯಯನ ಬೇಕು ಎಂದ ಕೇಂದ್ರ; ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪಿಐಎಲ್‌ಗೆ ವಿರೋಧ

ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಸಾಂಘ್ವಿ ಮಾತನಾಡಿ, “ಏಕರೂಪ ನಾಗರಿಕ ಸಂಹಿತೆಗೆ ದೇಶದೆಲ್ಲೆಡೆಯ ಜನರು ಬೇಡಿಕೆ ಇಟ್ಟಿದ್ದು ಮುಖ್ಯಮಂತ್ರಿ ನೇತೃತ್ವದಲ್ಲಿ ಗುಜರಾತ್ ಸರ್ಕಾರ ಇಂದು ಈ ಮಹತ್ವದ ವಿಷಯದ ಬಗ್ಗೆ ನಿರ್ಣಯ ಕೈಗೊಂಡಿದೆ” ಎಂದು ಸಾಂಘ್ವಿ ಹೇಳಿದ್ದಾರೆ.

Also Read
ಏಕರೂಪ ನಾಗರಿಕ ಸಂಹಿತೆ ಜಾರಿ: ನ್ಯಾ. ರಂಜನಾ ಪ್ರಕಾಶ್ ನೇತೃತ್ವದ ಸಮಿತಿ ರಚಿಸಿದ ಉತ್ತರಾಖಂಡ ಸರ್ಕಾರ

ರಾಜ್ಯದಲ್ಲಿ ಸಿವಿಲ್‌ ವ್ಯಾಜ್ಯಗಳಿಂದ ತೊಂದರೆ ಎದುರಿಸುತ್ತಿರುವ ಎಲ್ಲರಿಗೂ ಸಂಹಿತೆ ಜಾರಿಯಿಂದ ಪರಿಹಾರ ದೊರೆಯಲಿದೆ ಎಂದು ಬಿಜೆಪಿಯ ಹಿರಿಯ ನಾಯಕರಾದ ರೂಪಾಲಾ ಹೇಳಿದ್ದಾರೆ.

ಈ ಹಿಂದೆ, ಉತ್ತರಾಖಂಡ ಸರ್ಕಾರ ರಾಜ್ಯದಲ್ಲಿ ವೈಯಕ್ತಿಕ ಕಾನೂನುಗಳನ್ನು ಪರಿಶೀಲಿಸಲು ಮತ್ತು ಸಂಹಿತೆ ಜಾರಿಗೆ ತರಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು.

Kannada Bar & Bench
kannada.barandbench.com