ಜ್ಞಾನವಾಪಿ ಮಸೀದಿ ಪ್ರಕರಣ: ʼಶಾಂತಿ ರಹೇʼ ಎಂದು ವಾರಾಣಸಿ ನ್ಯಾಯಾಲಯ ಹೇಳಿದ್ದೇಕೆ?

ನ್ಯಾಯಾಲಯ ಕೊನೆಗೆ, ಹಿಂದೂ ಪಕ್ಷಕಾರರಿಗೆ ಜ್ಞಾನವಾಪಿ ಮಸೀದಿ ಸಮೀಕ್ಷೆಯ ಛಾಯಾಚಿತ್ರ, ವೀಡಿಯೊ ಹಾಗೂ ಇತರ ವಿವರಗಳನ್ನು ನೀಡಿತು.
ಜ್ಞಾನವಾಪಿ ಮಸೀದಿ ಪ್ರಕರಣ: ʼಶಾಂತಿ ರಹೇʼ ಎಂದು ವಾರಾಣಸಿ ನ್ಯಾಯಾಲಯ ಹೇಳಿದ್ದೇಕೆ?
A1
Published on

ಸೌಹಾರ್ದತೆ ಮತ್ತು ಭ್ರಾತೃತ್ವ ಕಾಪಾಡಿಕೊಳ್ಳಬೇಕು ಎಂದು ಜ್ಞಾನವಾಪಿ ಮಸೀದಿ ವ್ಯಾಜ್ಯದ ಕಕ್ಷಿದಾರರಿಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಸೋಮವಾರ ಒತ್ತಾಯಿಸಿದೆ.

ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಛಾಯಾಚಿತ್ರಗಳು, ವಿಡಿಯೋಗಳು ಮತ್ತು ಇತರ ವಿವರಗಳ ಪ್ರತಿಗಳನ್ನು ಹಿಂದೂ ವಾದಿಗಳಿಗೆ ಹಸ್ತಾಂತರಿಸುವ ಮೊದಲು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಾ. ಎ ಕೆ ವಿಶ್ವೇಶ ಅವರು ಶಾಂತಿ ಕದಡದಂತೆ ನೋಡಿಕೊಳ್ಳಲು ವರದಿಯನ್ನು ಗೌಪ್ಯವಾಗಿಡಲಾಗಿದೆ ಎಂದು ಹೇಳಿದರು.

"ರಿಪೋರ್ಟ್‌ ಸಿರ್ಫ್ ಭಾಯಿ ಚಾರಾ ಕೆ ಲಿಯೇ ಗುಪ್ತ್ ಹೈ. ಭಾಯಿ ಚಾರಾ ಬನಾ ರಹೇ, ಶಾಂತಿ ರಹೇ (ಸಹೋದರತ್ವ ಕಾಪಾಡಿಕೊಳ್ಳುವ ಸಲುವಾಗಿ ವರದಿಯನ್ನು ಗೌಪ್ಯವಾಗಿಡಲಾಗಿದೆ. ಅದನ್ನು ಉಳಿಸಿಕೊಳ್ಳೋಣ. ಶಾಂತಿಯಿಂದಿರಿ)" ಎಂದು ನ್ಯಾಯಾಧೀಶರು ಸಲಹೆ ನೀಡಿದರು. ಹಿಂದೂ ಪಕ್ಷಕಾರರು ವರದಿಯ ಪ್ರತಿ ಕೇಳಿದ ಸಂದರ್ಭದಲ್ಲಿ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

Also Read
ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಸಲ್ಲಿಸಿದ್ದ ಮನವಿ ವಿಚಾರಣೆ ಮೇ 30ಕ್ಕೆ ಮುಂದೂಡಿದ ವಾರಾಣಸಿ ನ್ಯಾಯಾಲಯ

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಹರಿಶಂಕರ್ ಜೈನ್, ವರದಿಯ ವಿವರಗಳನ್ನು ಮಾಧ್ಯಮ ಸಂಸ್ಥೆಗಳು ಈಗಾಗಲೇ ಪ್ರಕಟಿಸಿವೆ. ಯಾವುದೂ ರಹಸ್ಯವಾಗಿ ಉಳಿದಿಲ್ಲ ಎಂದರು.

ವೀಡಿಯೊವನ್ನು ಪ್ರತಿ ಮಾಡಿಕೊಳ್ಳುವುದಿಲ್ಲ ಮತ್ತು ವರದಿ ಸೋರಿಕೆಯಾಗದಂತೆ ನೋಡಿಕೊಳ್ಳುವುದಾಗಿ ಫಿರ್ಯಾದುದಾರರಾದ ಹಿಂದೂ ಪಕ್ಷಕಕಾರರು ಭರವಸೆ ನೀಡಿದ ಬಳಿಕ ಕೊನೆಗೆ ವರದಿಯನ್ನು ಹಸ್ತಾಂತರಿಸಲು ಒಪ್ಪಿತು.

Kannada Bar & Bench
kannada.barandbench.com