ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದ 29 ಸದಸ್ಯರ ಮಾಹಿತಿ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಒಟ್ಟು 32 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು.
Vakeelara Bhavana, AAB
Vakeelara Bhavana, AAB

ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) 2021-24ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಿಂದ ಒಟ್ಟಾರೆಯಾಗಿ 29 ಮಂದಿ ಸದಸ್ಯರು ಆಡಳಿತ ಮಂಡಳಿಗೆ ಚುನಾಯಿತರಾಗಿದ್ದಾರೆ.

ಬೆಂಗಳೂರು ವಕೀಲ ಸಂಘದ ಆಡಳಿತ ಮಂಡಳಿಗೆ ಹೈಕೋರ್ಟ್‌ ಘಟಕದಿಂದ ಏಳು ಸ್ಥಾನಗಳಿಗೆ 27 ಮಂದಿ ಕಣದಲ್ಲಿದ್ದರು. ಸಿಟಿ ಸಿವಿಲ್‌ ಕೋರ್ಟ್‌ನ 12 ಸ್ಥಾನಗಳಿಗೆ 54 ಮಂದಿ, ಮ್ಯಾಜಿಸ್ಟ್ರೇಟ್‌ ಮತ್ತು ಮೆಯೊ ಹಾಲ್‌ ಕೋರ್ಟ್‌ನಿಂದ ತಲಾ 5 ಸ್ಥಾನಗಳಿಗೆ ಕ್ರಮವಾಗಿ 16 ಮತ್ತು 15 ಮಂದಿ ಕಣದಲ್ಲಿದ್ದರು.

ಎಎಬಿ ಅಧ್ಯಕ್ಷರಾಗಿ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಟಿ ಜಿ, ಖಜಾಂಚಿಯಾಗಿ ಹರೀಶ್‌ ಎಂ ಟಿ ಆಯ್ಕೆಯಾಗಿರುವುದು ವರದಿಯಾಗಿದೆ. ನಾಲ್ಕು ಘಟಕಗಳಿಂದ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವವರ ವಿವರ ಇಲ್ಲಿದೆ.

Also Read
ಬೆಂಗಳೂರು ವಕೀಲರ ಸಂಘದ ಚುನಾವಣೆ: ಹಿರಿಯ ವಕೀಲ ವಿವೇಕ್ ರೆಡ್ಡಿ ನೂತನ ಅಧ್ಯಕ್ಷ

ಹೈಕೋರ್ಟ್‌ ಘಟಕದಿಂದ ಆಯ್ಕೆಯಾದ 7 ಮಂದಿಯ ವಿವರ:

  1. ಹೇಮಲತಾ ವಿ

  2. ಅಮೃತೇಶ್‌ ಎನ್‌ ಪಿ

  3. ಬಾಲಕೃಷ್ಣ ಬಿ

  4. ಚಂದ್ರಕಾಂತ್‌ ಪಾಟೀಲ್‌ ಕೆ

  5. ಹರೀಶ್‌ ಎ ಎಸ್‌

  6. ಚಾಮರಾಜ್‌ ಎಂ

  7. ರಾಜು ಎಸ್‌

ಸಿಟಿ ಸಿವಿಲ್‌ ಕೋರ್ಟ್‌ ಘಟಕದಿಂದ ಆಯ್ಕೆಯಾದ 12 ಮಂದಿ ಸದಸ್ಯರ ವಿವರ:

  1. ಅಕ್ಕಿ ಮಂಜುನಾಥ್‌ ಗೌಡ ಕೆ

  2. ಮುನಿಯಪ್ಪ ಸಿ ಆರ್‌ ಗೌಡ

  3. ಶಶಿಕುಮಾರ್‌ ಆರ್‌ ಗೌಡ

  4. ನಾರಾಯಣಸ್ವಾಮಿ ಜಿ

  5. ಹರೀಶ್‌ ಎನ್‌ ವಿ

  6. ಆಶಾ ಎಂ

  7. ಶ್ರೀನಿವಾಸ್‌ ಗೌಡ ಆರ್‌ ವಿ

  8. ದೇವರಾಜ ಕೆ

  9. ಕುಮಾರ್‌ ಆರ್‌ ಎಸ್‌ ಗೌಡ

  10. ಪುಟ್ಟರಾಜು ಎಚ್‌ ಬಿ

  11. ನಾಗರಾಜ ಜಿ

  12. ಅಂಬರೀಷ್‌ ಕೆ ಎನ್‌

Also Read
ಚುರುಕುಗೊಂಡ ಬೆಂಗಳೂರು ವಕೀಲರ ಸಂಘದ ಚುನಾವಣಾ ಪ್ರಚಾರ; 32 ಸ್ಥಾನಗಳಿಗೆ 134 ಆಕಾಂಕ್ಷಿಗಳು

ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಿಂದ ಆಯ್ಕೆಯಾದ 5 ಮಂದಿಯ ವಿವರ:

  1. ಪ್ರಭು ಕೆ ಎಚ್‌

  2. ಸತೀಶ

  3. ಗಜೇಂದ್ರ ಸಿ

  4. ರಘುನಾಥ್‌ ಗೌಡ ಎಸ್‌

  5. ಲಿಂಗೇಗೌಡ ಡಿ ಎಂ

ಮೆಯೊ ಹಾಲ್‌ ಕೋರ್ಟ್‌ನಿಂದ ಆಯ್ಕೆಯಾದ 5 ಮಂದಿಯ ವಿವರ:

  1. ಬ್ರಹ್ಮಾನಂದ ರೆಡ್ಡಿ ಬಿ ಎ

  2. ಭಕ್ತವತ್ಸಲ

  3. ಗುಣಶೇಖರ್‌ ಡಿ

  4. ಮುನಿರಾಜ್‌ ಎಸ್‌ ಎಂ

  5. ಹರಿಹರ ವಿ

Related Stories

No stories found.
Kannada Bar & Bench
kannada.barandbench.com