ಧಾರ್ಮಿಕ ಉಡುಪು ಧರಿಸುವುದಕ್ಕೆ ನಿರ್ಬಂಧದ ಮಧ್ಯಂತರ ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ: ಹೈಕೋರ್ಟ್‌ ಸ್ಪಷ್ಟನೆ

ಶಿಕ್ಷಕಿಯರು ತಲೆಗೆ ಹಾಕಿಕೊಂಡಿರುವ ಶಿರವಸ್ತ್ರವನ್ನು ಬಲವಂತವಾಗಿ ತೆಗೆಸಲಾಗುತ್ತಿದೆ ಎಂದು ವಕೀಲರೊಬ್ಬರು ಪೀಠದ ಗಮನಸೆಳೆದಾಗ ಪೀಠವು ಅದನ್ನು ಸ್ಪಷ್ಟಪಡಿಸಿತು.
Hijab Row, Karnataka High Court

Hijab Row, Karnataka High Court

Published on

“ಯಾವುದೇ ಧರ್ಮ ಅಥವಾ ನಂಬಿಕೆಗೆ ಸೇರಿದ ವಿದ್ಯಾರ್ಥಿಗಳು ಕೇಸರಿ ಶಾಲು (ಭಾಗ್ವಾ), ಶಿರವಸ್ತ್ರ, ಹಿಜಾಬ್‌, ಧಾರ್ಮಿಕ ಬಾವುಟಗಳನ್ನು ಮುಂದಿನ ಆದೇಶದವರೆಗೆ ತರಗತಿಗೆ ಕೊಂಡೊಯ್ಯುವಂತಿಲ್ಲ” ಎಂಬ ಫೆಬ್ರವರಿ 10ರ ನಮ್ಮ ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಬುಧವಾರ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಸ್ಪಷ್ಟಪಡಿಸಿತು.

ಶಿಕ್ಷಕಿಯರು ತಲೆಗೆ ಹಾಕಿಕೊಂಡಿರುವ ಶಿರವಸ್ತ್ರವನ್ನು ಬಲವಂತವಾಗಿ ತೆಗೆಸಲಾಗುತ್ತಿದೆ ಎಂದು ವಿಚಾರಣೆಯ ಅಂತ್ಯದಲ್ಲಿ ವಕೀಲರೊಬ್ಬರು ಪೀಠದ ಗಮನಸೆಳೆದಾಗ “ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ” ಎಂದು ಸ್ಪಷ್ಟನೆ ನೀಡಿತು.

Also Read
[ಹಿಜಾಬ್‌ ವಿಚಾರಣೆ] ಶಾಸಕರು ಒಂದು ಪಕ್ಷಕ್ಕೆ ಸೀಮಿತವಾಗಿ ಅಭಿವೃದ್ದಿ ಸಮಿತಿಯಲ್ಲಿ ಕೂರುವುದಿಲ್ಲ: ಸಮಿತಿಯ ವಿವರಣೆ

ಸಮವಸ್ತ್ರ ಸೂಚಿಸಿರುವ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಿಗೂ ಮಧ್ಯಂತರ ಆದೇಶ ಅನ್ವಯಿಸುತ್ತದೆ. “ಸಮವಸ್ತ್ರವನ್ನು ಸೂಚಿಸಲಾಗಿದ್ದರೆ ಅದು ಪದವಿ ಕಾಲೇಜು ಅಥವಾ ಸರ್ಕಾರಿ ಕಾಲೇಜು ಅಥವಾ ಪದವಿ ಪೂರ್ವ ಕಾಲೇಜಾಗಿದ್ದರೂ ಪೀಠದ ಆದೇಶ ಪಾಲಿಸಬೇಕು” ಎಂದಿತು.

Kannada Bar & Bench
kannada.barandbench.com