ಕಂಗನಾ ರನೌತ್‌ ಆಯ್ಕೆ ಪ್ರಶ್ನಿಸಿದ್ದ ಅರ್ಜಿ: ಸಂಸದೆಯ ಪ್ರತಿಕ್ರಿಯೆ ಕೇಳಿದ ಹಿಮಾಚಲ ಪ್ರದೇಶ ಹೈಕೋರ್ಟ್

ತಮ್ಮ ನಾಮಪತ್ರಗಳನ್ನು ತಪ್ಪಾಗಿ ತಿರಸ್ಕರಿಸಲಾಗಿರುವುದರಿಂದ ಮಂಡಿ ಕ್ಷೇತ್ರದಿಂದ ರನೌತ್ ಆಯ್ಕೆ ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದರು.
Himachal Pradesh High Court and Kangana Ranaut
Himachal Pradesh High Court and Kangana Ranaut
Published on

ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ನಟಿ ಹಾಗೂ ಸಂಸದೆ ಕಂಗನಾ ರನೌತ್‌ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಂಸತ್‌ ಸದಸ್ಯೆಗೆ  ಹಿಮಾಚಲ ಪ್ರದೇಶ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.

ಪ್ರಕರಣವನ್ನು ನ್ಯಾ. ಜ್ಯೋತ್ಸ್ನಾ ರೆವಾಲ್‌ ದುವಾ ಅವರು  ಆಗಸ್ಟ್ 21ಕ್ಕೆ ಮುಂದೂಡಿದ್ದಾರೆ.

Also Read
ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ವರದಿಗಳ ಪ್ರಕಾರ ತಮ್ಮ ನಾಮಪತ್ರಗಳನ್ನು ತಪ್ಪಾಗಿ ತಿರಸ್ಕರಿಸಲಾಗಿದೆ ಎಂದು ಕಿನ್ನೌರ್‌ ನಿವಾಸಿ ಲಾಯಿಕ್ ರಾಮ್ ನೇಗಿ ಅವರು ಅರ್ಜಿ ಸಲ್ಲಿಸಿದ್ದರು.

ಅರಣ್ಯ ಇಲಾಖೆಯಿಂದ ನಿವೃತ್ತಿ ಪಡೆದಿದ್ದ ನೇಗಿ ಅವರು ಚುನಾವಣಾಧಿಕಾರಿಗೆ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರವನ್ನೂ (ಎನ್‌ಒಸಿ) ಸಲ್ಲಿಸಿದ್ದರು.  ಆದರೆ, ವಿದ್ಯುತ್, ನೀರು ಮತ್ತು ದೂರವಾಣಿ ಇಲಾಖೆಗಳಿಂದ ಎನ್‌ಒಸಿ ಸಲ್ಲಿಸಲು ಒಂದು ದಿನದ ಗಡುವು ನೀಡಲಾಗಿತ್ತು. ಇವುಗಳನ್ನು ಸಲ್ಲಿಸಿದಾಗಲೂ ಚುನಾವಣಾಧಿಕಾರಿ ತಮ್ಮ ನಾಮಪತ್ರ ಸ್ವೀಕರಿಸಲಿಲ್ಲ ಎಂದು ಅವರು ದೂರಿದ್ದರು.

Also Read
ನವದೆಹಲಿ ಸಂಸದೆ ಬಾನ್ಸುರಿ ಸ್ವರಾಜ್ ಆಯ್ಕೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಎಎಪಿ ನಾಯಕ ಅರ್ಜಿ

ಒಂದು ವೇಳೆ ನಾಮಪತ್ರ ಅಂಗೀಕಾರವಾಗಿದ್ದರೆ ತಾನು ಗೆಲ್ಲುವ ಸಾಧ್ಯತೆಗಳಿದ್ದವು ಎಂದಿರುವ ನೇಗಿ ಹೀಗಾಗಿ ಚುನಾವಣೆ ರದ್ದುಗೊಳಿಸುವಂತೆ ಪ್ರಾರ್ಥಿಸಿದ್ದರು.

ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ಅವರು ತಮ್ಮ‌ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ಅವರನ್ನು 74,755 ಮತಗಳ ಅಂತರದಿಂದ ಮಣಿಸಿದ್ದರು.

Kannada Bar & Bench
kannada.barandbench.com