ಇತಿಹಾಸ ತಿರುಚಿ, ಅಕ್ಬರ್‌ನನ್ನು ನಿರಂಕುಶಾಧಿಕಾರಿಯಾಗಿಯಷ್ಟೇ ಚಿತ್ರಿಸಲಾಗಿದೆ: ನ್ಯಾ. ರೋಹಿಂಟನ್

ನಾಗರಿಕರು ಸಾಂವಿಧಾನಿಕ ನ್ಯಾಯಾಲಯಗಳನ್ನು ಸಂಪರ್ಕಿಸಿದರೆ ಇತಿಹಾಸ ತಿರುಚುವುದುನ್ನು ಒಂದು ಮಟ್ಟಿಗೆ ಪರಿಹರಿಸಲು ಸಾಧ್ಯ ಎಂದು ನ್ಯಾ. ರೋಹಿಂಟನ್‌ ನಾರಿಮನ್‌ ಸಲಹೆ ನೀಡಿದರು.
Red Fort
Red Fort
Published on

ಆಡಳಿತಾರೂಢರು ಇತಿಹಾಸ ಅಳಿಸುವ ಮತ್ತು ತಿರುಚುವ ಯತ್ನವನ್ನು  ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ಈಚೆಗೆ ಖಂಡಿಸಿದ್ದು ನಾಗರಿಕರು ಸಾಂವಿಧಾನಿಕ ನ್ಯಾಯಾಲಯಗಳನ್ನು ಸಂಪರ್ಕಿಸಿದರೆ ಇತಿಹಾಸ ತಿರುಚುವುದುನ್ನು ಒಂದು ಮಟ್ಟಿಗೆ ಪರಿಹರಿಸಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ.

ವಕ್ಕಂ ಮೌಲವಿ ಪ್ರತಿಷ್ಠಾನ ಟ್ರಸ್ಟ್‌ನ ಸಂಸ್ಥಾಪಕರಾದ ಕೆ ಎಂ ಬಶೀರ್ ಅವರ ಸ್ಮರಣಾರ್ಥ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಪ್ರೆಸ್‌ ಕ್ಲಬ್‌ ಸೆಪ್ಟೆಂಬರ್ 1ರಂದು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, "ಜಾತ್ಯತೀತ ದೇಶದಲ್ಲಿ ಭ್ರಾತೃತ್ವ: ಸಾಂಸ್ಕೃತಿಕ ಹಕ್ಕುಗಳು ಮತ್ತು ಕರ್ತವ್ಯಗಳ ರಕ್ಷಣೆ" ಎಂಬ ವಿಷಯವಾಗಿ ಅವರು ಮಾತನಾಡಿದರು.

Also Read
ಎಲ್ಲಾ ಧರ್ಮಗಳ ಧಾರ್ಮಿಕ ಆಚರಣೆಗಳ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ನ್ಯಾ. ರೋಹಿಂಟನ್ ನಾರಿಮನ್ ಕರೆ

ವಕ್ಕಂ ಮೌಲವಿ ಪ್ರತಿಷ್ಠಾನ ಟ್ರಸ್ಟ್‌ನ ಸಂಸ್ಥಾಪಕರಾದ ಕೆ ಎಂ ಬಶೀರ್ ಅವರ ಸ್ಮರಣಾರ್ಥ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಸೆಪ್ಟೆಂಬರ್ 1ರಂದು  ಪ್ರೆಸ್ ಕ್ಲಬ್  ಏರ್ಪಡಿಸಿದ್ದ ಕಾರ್ಯಕ್ರಮವದಲ್ಲಿ ಅವರು ಮಾತನಾಡಿದರು.

ಮಕ್ಕಳ ಪುಸ್ತಕವೊಂದರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್‌ನನ್ನು ಕೇವಲ ಒಬ್ಬ ಕ್ರೂರ ಮತ್ತು ಸಾಮೂಹಿಕ ಕೊಲೆಗಾರ ಎಂದು ಚಿತ್ರಿಸಿದ ಪುಸ್ತಕವನ್ನು ಮಗುವೊಂದು ಓದಿ ಹೇಳಿದಾಗ ಆಘಾತವಾಯಿತು ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು. ಚಕ್ರವರ್ತಿ ಮತ್ತು ಮೊಘಲ್ ರಾಜವಂಶದ ಕೊಡುಗೆಗಳನ್ನು ಸರಳವಾಗಿ ಕಡೆಗಣಿಸಲಾಗಿದ್ದು ಹಿಂದಿನ ಇತಿಹಾಸ ಪುಸ್ತಕಗಳಲ್ಲಿ ಹೀಗೆ ಇರಲಿಲ್ಲ ಎಂದರು.

ನ್ಯಾ. ರೋಹಿಂಟನ್‌ ಅವರ ಉಪನ್ಯಾಸದ ಪ್ರಮುಖ ಅಂಶಗಳು

  • ಅಕ್ಬರ್‌ ರೀತಿಯೇ ಉಳಿದ ಮೊಘಲರ ಬಗ್ಗೆಯೂ ಅನೇಕ ಸಂಗತಿಗಳನ್ನು ಹೇಳಿಲ್ಲ.

    ಆದ್ದರಿಂದ ಇದು ಸಂಪೂರ್ಣ ನಾಶ ಹಾಗೂ ಸಂಪೂರ್ಣ ವಿಕೃತಿ

  • ಈ ಸಮಸ್ಯೆಯನ್ನು ಪರಿಹರಿಸಬಹುದಾದ ಒಂದು ಮಾರ್ಗವೆಂದರೆ ನಾಗರಿಕರು ನ್ಯಾಯಾಲಯಗಳನ್ನು ಸಂಪರ್ಕಿಸುವುದು.

  • ಇತಿಹಾಸವನ್ನು ವಿರೂಪಗೊಳಿಸುವುದು ಸಂವಿಧಾನದ 51 ಎ ವಿಧಿಯಡಿ ಮೂಲಭೂತ ಕರ್ತವ್ಯಗಳ ಉಲ್ಲಂಘನೆ.

  • ಅದರಲ್ಲಿಯೂ ನಮ್ಮ ಸಮ್ಮಿಳಿತ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಗೌರವಿಸುವುದು ಮತ್ತು ಸಂರಕ್ಷಿಸುವುದು ನಮ್ಮ ಕರ್ತವ್ಯ.

  • ಮೂಲಭೂತ ಕರ್ತವ್ಯಗಳನ್ನು ನ್ಯಾಯಾಲಯದಲ್ಲಿ ನೇರವಾಗಿ ಜಾರಿಗೊಳಿಸಲು ಸಾಧ್ಯವಾಗದಿದ್ದರೂ, ಮೂಲಭೂತ ಕರ್ತವ್ಯದ ಉಲ್ಲಂಘನೆಯಾದಾಗ, ಸಂಬಂಧಿತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಆಗ ನ್ಯಾಯಾಲಯವನ್ನು ಎಡತಾಕಬಹುದು.

  • ಈ ತತ್ವ ಎಲ್ಲಾ ಮೂಲಭೂತ ಕರ್ತವ್ಯಗಳಿಗೆ ಅನ್ವಯಿಸುವುದಿಲ್ಲವಾದರೂ, ಭಾರತದ ಸಂಯೋಜಿತ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ವಿಫಲವಾದಾಗ ಭ್ರಾತೃತ್ವದ ಉಲ್ಲಂಘನೆಯಾದಾಗ ಇದನ್ನು ಅನ್ವಯಿಸಬಹುದು.

Kannada Bar & Bench
kannada.barandbench.com