ಮಹಿಳೆಯ ಕೈ ಎಳೆದು, ಕಾಮೋದ್ದೇಶವಿಲ್ಲದೆ ಬೆದರಿಕೆ ಹಾಕಿದರೆ ಆಕೆಯ ಘನತೆಗೆ ಧಕ್ಕೆ ತಂದಂತೆ ಆಗದು: ಕೇರಳ ನ್ಯಾಯಾಲಯ

ಐಪಿಸಿಯ ಸೆಕ್ಷನ್ 354ರ ಅಡಿಯಲ್ಲಿ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಆರೋಪಿಗೆ ಶಿಕ್ಷೆಯಾಗದಿದ್ದರೂ, ಆತ ಕ್ರಿಮಿನಲ್ ಬೆದರಿಕೆಯೊಡ್ಡಿದ್ದಕ್ಕಾಗಿ ತಪ್ಪಿತಸ್ಥ ಎಂದು ತಿಳಿಸಿದ ನ್ಯಾಯಾಲಯ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿತು.
Twitter
Twitter
Published on

ಮಹಿಳೆಯ ಕೈ ಎಳೆದು, ಕಾಮೋದ್ದೇಶವಿಲ್ಲದೆ ಬೆದರಿಕೆ ಹಾಕಿದ್ದರೆ ಅದು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಆಕೆಯ ಘನತೆಗೆ ಧಕ್ಕೆ ತರುವಂತಹ ಅಪರಾಧವಾಗುವುದಿಲ್ಲ ಎಂದು ಕೇರಳದ ನ್ಯಾಯಾಲಯ ಇತ್ತೀಚೆಗೆ ಹೇಳಿದೆ.

ಕೇವಲ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗವು ಐಪಿಸಿ ಸೆಕ್ಷನ್ 354ರ ಅಡಿ ಅಪರಾಧವಾಗದು ಎಂದು ಆಲುವಾದಲ್ಲಿನ ಜುಡಿಷಿಯಲ್‌ ಫಸ್ಟ್‌ ಕ್ಲಾಸ್‌ ಮ್ಯಾಜಿಸ್ಟ್ರೇಟ್-II ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಟಿ ಕೆ ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 354ರ ಅಡಿ ಆರೋಪಿಗೆ ಶಿಕ್ಷೆ ವಿಧಿಸಲು ಸಂತ್ರಸ್ತ ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದ ಅಪರಾಧ ಎಸಗಿರಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

"ಕೇವಲ ದಾಳಿ ಅಥವಾ ಕ್ರಿಮಿನಲ್ ಬಲಪ್ರಯೋಗ (ಐಪಿಸಿ ಸೆಕ್ಷನ್ 354ರ ಅಡಿ) ಅಪರಾಧವಾಗದು. ಸಂತ್ರಸ್ತೆಯ ಘನತೆಗೆ ಧಕ್ಕೆ ತರುವ ದಂಡನೀಯ ಉದ್ದೇಶ ಅಪರಾಧಕ್ಕಿತ್ತು ಎಂಬುದು ಸಾಬೀತಾಗಬೇಕು. ಕೇವಲ ಸಂತ್ರಸ್ತೆಯ ಕೈ ಹಿಡಿದು ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವುದು ಐಪಿಸಿ ಸೆಕ್ಷನ್ 354ರ ಅಡಿ ಅಪರಾಧವಾಗದು" ಎಂದು ತೀರ್ಪು ಹೇಳಿದೆ.

Also Read
ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಮಹಿಳೆಯರ ಘನತೆಗೆ ಧಕ್ಕೆ ತಂದ ಆರೋಪ; ದೆಹಲಿ ಪೊಲೀಸರಿಂದ ಆರೋಪಪಟ್ಟಿ ದಾಖಲು

ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಆರೋಪಿಗೆ ಶಿಕ್ಷೆಯಾಗದಿದ್ದರೂ, ಆತ ಕ್ರಿಮಿನಲ್ ಬೆದರಿಕೆಯೊಡ್ಡಿದ್ದಕ್ಕಾಗಿ ತಪ್ಪಿತಸ್ಥ ಎಂದು ತಿಳಿಸಿದ ನ್ಯಾಯಾಲಯ ಆರೋಪಿಗೆ ಎರಡು ತಿಂಗಳ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಿತು.

ಪ್ರಕರಣ 2013ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ಪ್ರಾಸಿಕ್ಯೂಷನ್ ಪ್ರಕಾರ, ಮಹಿಳೆಯೊಬ್ಬರು ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದಾಗ ಆರೋಪಿಗಳು ಆಕೆಯ ಕೈಯನ್ನು ಹಿಡಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.

Kannada Bar & Bench
kannada.barandbench.com