ಐಬಿ ನಿರ್ದೇಶಕರು, ರಕ್ಷಣೆ, ರಾ ಹಾಗೂ ಗೃಹ ಕಾರ್ಯದರ್ಶಿ ಅಧಿಕಾರಾವಧಿಯನ್ನು 2 ವರ್ಷಗಳವರೆಗೆ ವಿಸ್ತರಿಸಬಹುದು: ಅಧಿಸೂಚನೆ

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಿ ರಾಷ್ಟ್ರಪತಿಗಳು ಸುಗ್ರೀವಾಜ್ಞೆ ಹೊರಡಿಸಿದ ಒಂದು ದಿನದ ನಂತರ ಈ ಅಧಿಸೂಚನೆ ಪ್ರಕಟಿಸಲಾಗಿದೆ.
ಐಬಿ ನಿರ್ದೇಶಕರು, ರಕ್ಷಣೆ, ರಾ ಹಾಗೂ ಗೃಹ ಕಾರ್ಯದರ್ಶಿ ಅಧಿಕಾರಾವಧಿಯನ್ನು 2 ವರ್ಷಗಳವರೆಗೆ ವಿಸ್ತರಿಸಬಹುದು: ಅಧಿಸೂಚನೆ

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಸೋಮವಾರ ತನ್ನ ನಿಯಮಗಳಿಗೆ ತಿದ್ದುಪಡಿ ತಂದಿದ್ದು ಗುಪ್ತಚರ ದಳ ನಿರ್ದೇಶಕರು, ರಕ್ಷಣೆ, ಗೃಹ ಮತ್ತು ರಕ್ಷಣಾ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ಆರ್‌ಎಡಬ್ಲ್ಯೂ- ರಾ) ಕಾರ್ಯದರ್ಶಿಗಳ ಸೇವಾವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಹೇಳಿದೆ.

ಸಂವಿಧಾನದ 309ನೇ ವಿಧಿ ಅಡಿಯಲ್ಲಿ ಅಧಿಕಾರ ಚಲಾಯಿಸಿ ರಾಷ್ಟ್ರಪತಿಗಳು ಮೂಲಭೂತ ನಿಯಮಗಳು 1922ರ ಐದನೇ ನಿಬಂಧನೆಗಾಗಿ ನಿಯಮ 56ರ ಡಿ ಷರತ್ತಿನ ತಿದ್ದುಪಡಿಗೆ ಅನುಮೋದನೆ ನೀಡಿದ್ದಾರೆ.

Also Read
ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಯಿಂದ ಹಿಂದೆ ಸರಿದ ಕೇರಳ ಸರ್ಕಾರ

ಮುಖ್ಯವಾಗಿ ಸಾರ್ವಜನಿಕ ಹಿತಾಸಕ್ತಿಗೆ ಅಗತ್ಯವಿದ್ದರೆ ಮಾತ್ರ ಕೇಂದ್ರ ಸರ್ಕಾರದ ವಿವೇಚನೆಗೆ ಒಳಪಟ್ಟು ಅಧಿಕಾರಾವಧಿ ವಿಸ್ತರಿಸಬೇಕು ಎಂದು ಅಧಿಸೂಚನೆ ತಿಳಿಸಿದ್ದು ಅಧಿಕಾರಾವಧಿ ಎರಡು ವರ್ಷ ಮೀರುವಂತಿಲ್ಲ ಎಂದು ವಿವರಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಿ ರಾಷ್ಟ್ರಪತಿಗಳು ಸುಗ್ರೀವಾಜ್ಞೆ ಹೊರಡಿಸಿದ ಒಂದು ದಿನದ ನಂತರ ಈ ಅಧಿಸೂಚನೆ ಪ್ರಕಟಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com