ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನಲ್ಲಿ ವಸತಿ ಮತ್ತು ಮೂಲಭೂತ ಜೀವನ ಸೌಲಭ್ಯಕ್ಕೆ ಸಂಬಂಧಿಸಿದಂತೆ ಜನ ಎದುರಿಸುತ್ತಿರುವ ಕಷ್ಟ ಮತ್ತು ತೊಂದರೆಗಳ ಬಗ್ಗೆ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ದೀಪಂಕರ್ ದತ್ತಾ ಅವರು ಹೇಳಿದ್ದು ಅನೇಕ ಮುಂಬೈಯಿಗರ ಮನ ಸೆಳೆದಿರಬಹುದು. ಕಟ್ಟಡ ಕುಸಿತಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಮುಂಬೈ ನಗರದಲ್ಲಿ ಶ್ರೀಮಂತರು ಮತ್ತು ಬಡವರ ಬದುಕಿನ ವ್ಯತಿರಿಕ್ತತೆಯ ಪರಿಣಾಮವಾಗಿ ಉಂಟಾಗಿರುವ ಅಸಮಾನತೆಯನ್ನು ಚರ್ಚಿಸಿದರು. ನಗರದಲ್ಲಿ 'ಉಳ್ಳವರು' ಮತ್ತು 'ಇಲ್ಲದವರ' ನಡುವೆ ದೊಡ್ಡ ಅಂತರವಿದ್ದು, ಮುಂದಿನ ದಿನಗಳಲ್ಲಿ ಕನಿಷ್ಠಮಟ್ಟದ ಸಮಾನತೆಯನ್ನು ತರಲು ಸಹ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.