ವಿಚಾರಣೆ ವಿಳಂಬ: ಒಡಿಶಾದಲ್ಲಿ ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಕೆ

ದಾಳಿಕೋರ ಭಗಬನ್ ಸಾಹು ಎಂಬ ಸ್ಥಳೀಯ ನಿವಾಸಿಯನ್ನು ಪೊಲೀಸರು ನಂತರ ಬಂಧಿಸಿದ್ದಾರೆ.
ವಿಚಾರಣೆ ವಿಳಂಬ: ಒಡಿಶಾದಲ್ಲಿ ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಕೆ

ತನ್ನ ವಿರುದ್ಧದ ನಾಲ್ಕು ಕ್ರಿಮಿನಲ್ ಪ್ರಕರಣಗಳ ವಿಚಾರಣೆ  ನಿಧಾನಗತಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಯೊಬ್ಬ ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಘಟನೆ ಒಡಿಶಾದ ಬರ್ಹಾಂಪುರ ನ್ಯಾಯಾಲಯದಲ್ಲಿ ನಡೆದಿದೆ.

ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು ಮಧ್ಯಪ್ರವೇಶಿಸಿದ ನಂತರ ನ್ಯಾಯಾಧೀಶರಾದ ಸಬ್‌ ಡಿವಿಷನಲ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಪ್ರಂಗ್ಯಾ ಪರಮಿತ ಪರಿಹಾರಿ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Also Read
ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ: ಇಬ್ಬರು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದ ಜಾರ್ಖಂಡ್ ನ್ಯಾಯಾಲಯ

ನ್ಯಾಯಾಲಯದ ಒಳಗೆ ಇದ್ದ ಕೆಲವು ವಕೀಲರು  ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಯೂ ಆಗಿರುವ ಆರೋಪಿ  51 ವರ್ಷದ ಭಗಬನ್ ಸಾಹು ಅವರನ್ನು ಪೊಲೀಸರು ಬಂಧಿಸಿದರು.

ಸುಲಿಗೆ, ಹಲ್ಲೆ, ಕೊಲೆ ಯತ್ನ ಮತ್ತು ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳಲ್ಲಿ ಸಾಹು ಆರೋಪಿಯಾಗಿದ್ದಾನೆ.

Related Stories

No stories found.
Kannada Bar & Bench
kannada.barandbench.com