ಸುಪ್ರೀಂ ಕೋರ್ಟ್‌ 'ಜಮಾದಾರ್' ಹುದ್ದೆ 'ಮೇಲ್ವಿಚಾರಕ' ಎಂದು ಬದಲು: ನಿಯಮಾವಳಿಗೆ ಸಿಜೆಐ ಚಂದ್ರಚೂಡ್ ತಿದ್ದುಪಡಿ

ಜಮಾದಾರ್ ಪದ ವಸಾಹತುಶಾಹಿ ಯುಗಕ್ಕೆ ಸೇರಿದ್ದು, ಸಾಮಾನ್ಯವಾಗಿ ಕಚೇರಿ ಆವರಣವನ್ನು ಗುಡಿಸುವ ಕ್ರಿಯೆಯ ಮೇಲ್ವಿಚಾರಣೆ ನಡೆಸುವ ಕಿರಿಯ ಅಧಿಕಾರಿಯನ್ನು ಉಲ್ಲೇಖಿಸಲು ಬಳಸಲಾಗುತ್ತದೆ.
Supreme Court
Supreme Court
Published on

ಸುಪ್ರೀಂ ಕೋರ್ಟ್ ನ್ಯಾಯಾಲಯದ ಜಮಾದಾರ್‌ ಹುದ್ದೆಯ ಹೆಸರನ್ನು 'ಮೇಲ್ವಿಚಾರಕ' ಎಂದು ಮರುನಾಮಕರಣ ಮಾಡಲಾಗಿದೆ.

ಸಂವಿಧಾನದ 146ನೇ ವಿಧಿ ಅಡಿಯಲ್ಲಿ ತಮ್ಮ ಅಧಿಕಾರ ಚಲಾಯಿಸುವ ಮೂಲಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳು ಮತ್ತು ಸೇವಕರ (ಸೇವಾ ಮತ್ತು ನಡಾವಳಿ) ನಿಯಮಾವಳಿ- 1961ಕ್ಕೆ ತಿದ್ದುಪಡಿ ಮಾಡಿದ್ದಾರೆ. ಶನಿವಾರ ಹೊರಡಿಸಿದ ಗೆಜೆಟೆಡ್ ಅಧಿಸೂಚನೆ ಮೂಲಕ ಮರು ನಾಮಕರಣ ಮಾಡಲಾಗಿದೆ.

Also Read
ವಕೀಲ ಗುಮಾಸ್ತ ಹುದ್ದೆಗೆ ಪರೀಕ್ಷೆ: ಸಿಜೆಐ ಚಂದ್ರಚೂಡ್ ಮಾಹಿತಿ

ಜಮಾದಾರ್ ಪದ ವಸಾಹತುಶಾಹಿ ಯುಗಕ್ಕೆ ಸೇರಿದ್ದು, ಸಾಮಾನ್ಯವಾಗಿ ಕಚೇರಿ ಆವರಣವನ್ನು ಗುಡಿಸುವವರ ಮೇಲ್ವಿಚಾರಣೆ ನಡೆಸುವ ಕಿರಿಯ ಅಧಿಕಾರಿಯನ್ನು ಉಲ್ಲೇಖಿಸಲು ಬಳಸಲಾಗುತ್ತದೆ.

ಫರಾಶ್ (ಮಹಡಿ) ಮತ್ತು ಸಫಾಯಿವಾಲಾ (ಶುಚಿಗಾರ) ವರ್ಗಗಳ ಜಮಾದಾರ್ ಹುದ್ದೆಗಳಿಗೆ ಅನ್ವಯವಾಗುವಂತೆ ಪ್ರಸ್ತುತ ಬದಲಾವಣೆ ಮಾಡಲಾಗಿದೆ.

Kannada Bar & Bench
kannada.barandbench.com