ಜಿಯಾಗೆ ಆತ್ಮಹತ್ಯಾ ಪ್ರವೃತ್ತಿ ಇತ್ತು; ಸೂರಜ್ ಪಾಂಚೋಲಿ ಒಮ್ಮೆ ಆಕೆಯನ್ನು ರಕ್ಷಿಸಿದ್ದರು: ಸಿಬಿಐ ವಿಶೇಷ ನ್ಯಾಯಾಲಯ

ಜಿಯಾ ಅವರ ತಾಯಿ ರಬಿಯಾ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿ, ಇಡೀ ಪ್ರಾಸಿಕ್ಯೂಷನ್ ವಾದವನ್ನು ಹಾಳುಗೆಡವಿದರು ಎಂದಿದೆ ನ್ಯಾಯಾಲಯ.
Jiah Khan and Sooraj Pancholi
Jiah Khan and Sooraj Pancholi
Published on

ಬಾಲಿವುಡ್ ನಟಿ ಜಿಯಾ ಖಾನ್ ಅವರಿಗೆ ಆತ್ಮಹತ್ಯಾ ಪ್ರವೃತ್ತಿ ಇತ್ತು, ಅಂತಹ ಒಂದು ಪ್ರಯತ್ನದಲ್ಲಿದ್ದಾಗ ಆಕೆಯ ಗೆಳೆಯ ಸೂರಜ್‌ ಪಾಂಚೋಲಿ ಆಕೆಯನ್ನು ರಕ್ಷಿಸಿದ್ದರು ಎಂದು ಪಾಂಚೋಲಿ ಅವರನ್ನು ಜಿಯಾ ಸಾವಿಗೆ ಸಂಬಂಧಿಸಿದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸುವ ವೇಳೆ ಸಿಬಿಐ ವಿಶೇಷ ನ್ಯಾಯಾಲಯ ತಿಳಿಸಿದೆ [ಸಿಬಿಐ ಮತ್ತು ಸೂರಜ್‌ ಪಾಂಚೋಲಿ ನಡುವಣ ಪ್ರಕರಣ].

ಸೂರಜ್‌ ಅವರನ್ನು ಜಿಯಾ ಆಳವಾಗಿ ಪ್ರೀತಿಸುತ್ತಿದ್ದರು. ಆದರೆ ಸೂರಜ್‌ ಅವರು ತಮ್ಮ ನಟನಾ ವೃತ್ತಿ  ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ಅವರಿಗೆ ಸಮಯ ಮೀಸಲಿಡಲು ಸಾಧ್ಯವಾಗಲಿಲ್ಲ. ನಟಿ ತನ್ನದೇ ಭಾವನೆಗಳ ಬಲಿಪಶುವಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

Also Read
ಜಿಯಾ ಖಾನ್ ಆತ್ಮಹತ್ಯೆ: ನಟ ಸೂರಜ್ ಪಾಂಚೋಲಿಯನ್ನು ಖುಲಾಸೆಗೊಳಿಸಿದ ಮುಂಬೈ ನ್ಯಾಯಾಲಯ

“ಪ್ರಸ್ತುತ ಪ್ರಕರಣದಲ್ಲಿ ಮೃತರಿಗೆ ಆತ್ಮಹತ್ಯೆಯ ಪ್ರವೃತ್ತಿ ಇತ್ತು ಎಂಬುದನ್ನು ನಿರ್ಲಕ್ಷಿಸಲಾಗದು. ಈ ಹಿಂದೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಸಮಯದಲ್ಲಿ ಆರೋಪಿ ಸೂರಜ್‌, ವೈದ್ಯರನ್ನು ಕರೆಸಿದ್ದರು. ಅಲ್ಲದೆ ಆಕೆಗೆ ಚಿಕಿತ್ಸೆ ನೀಡಿ ಖಿನ್ನತೆಯಿಂದ ಹೊರತರಲು ಯತ್ನಿಸಿದ್ದರು. ಸೂರಜ್‌ ನಟನೆಯ ವೃತ್ತಿಜೀವನದಲ್ಲಿ ಹೆಚ್ಚು ಗಮನ ಹರಿಸಿದ್ದರಿಂದ ಮೃತ ಜಿಯಾ ಅವರಿಗಾಗಿ ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾಗಲಿಲ್ಲ. ಆದರೆ ಹಿಂದಿನ ಸಂದರ್ಭದಲ್ಲಿ ಆಕಕೆ ಆತ್ಮಹತ್ಯೆಗೆ ಮುಂದಾದಾಗ ಆರೋಪಿ ಆಕೆಯನ್ನು ರಕ್ಷಿಸಿ ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದ್ದರು” ಎಂದು ನ್ಯಾಯಾಲಯ ನುಡಿದಿದೆ.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಪ್ರಾಸಿಕ್ಯೂಷನ್ ಸಾಕಷ್ಟು ಪುರಾವೆಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

  • ಜಿಯಾ ಖಿನ್ನತೆಯಿಂದ ಬಳಲುತ್ತಿದ್ದರು.

  • ಜಿಯಾ ತಾಯಿ ರಬಿಯಾ ಅವರು ಇಡೀ ಪ್ರಾಸಿಕ್ಯೂಷನ್‌ ವಾದವನ್ನು ಹಾಳುಗೆಡವಿದರು. ರಬಿಯಾ ಅವರು ಪ್ರಾಸಿಕ್ಯೂಷನ್‌ನ ಪ್ರಮುಖ ಮತ್ತು ನಿರ್ಣಾಯಕ ಸಾಕ್ಷಿಯಾಗಿದ್ದರು, ಆಕೆಯ ದೂರಿನ ಆಧಾರದ ಮೇಲೆ ಕಾನೂನು ಜಾರಿಗೆ ಬಂದಿತ್ತು. ಆಕೆ ಬಹಿರಂಗವಾಗಿ ಪ್ರಾಸಿಕ್ಯೂಷನ್ ಮೇಲೆ ಅಪನಂಬಿಕೆ  ವ್ಯಕ್ತಪಡಿಸಿದರು. ಪ್ರಾಸಿಕ್ಯೂಷನ್  ಇದೊಂದು ಆತ್ಮಹತ್ಯೆ ಎಂದು ಹೇಳಿದಾಗ, ರಬಿಯಾ ಅದನ್ನು ಕೊಲೆ ಎಂದು ಹೇಳಿದ್ದರು.. ಆದರೆ ಪ್ರಕರಣದಲ್ಲಿ ಯಾವುದೇ ಕೊಲೆಯ ಆರೋಪವಿಲ್ಲ, ವಾಸ್ತವವಾಗಿ, ಆಕೆ ಸ್ವತಃ ಪ್ರಾಸಿಕ್ಯೂಷನ್ ವಾದವನ್ನು ನಿರಾಕರಿಸುವ ಜೊತೆಗೆ ತನ್ನ ಹಿಂದಿನ ಹೇಳಿಕೆಯನ್ನು ಅಲ್ಲಗಳೆದಿದ್ದರು, ವಾಸ್ತವ ಸಂಗತಿಗಳ ಹೊರತಾಗಿಯೂ, ಪ್ರಾಸಿಕ್ಯೂಷನ್ ಆಕೆಯನ್ನು ಪ್ರತಿಕೂಲ ಸಾಕ್ಷಿ ಎಂದು ಘೋಷಿಸಲಿಲ್ಲ, ಅಂತಹ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ, ಆಕೆ ಖುದ್ದು ಪ್ರಾಸಿಕ್ಯೂಷನ್ ವಾದವನ್ನು ಹಾಳುಗೆಡವಿದರು.

  • ತನ್ನ ವಿನಾ ಉಳಿದ ಎಲ್ಲರ ಮೇಲೆ ರಬಿಯಾ ಅನುಮಾನ ಹುಟ್ಟುಹಾಕಿದರು. ದೂರುದಾರರು ನೀಡಿದ ಶೇಕಡಾ 80 ರಷ್ಟು ಸಾಕ್ಷ್ಯ ವಿರೋಧಾಭಾಸಗಳಿಂದ ಕೂಡಿದೆ.

  • ನೇಣು ಬಿಗಿದುಕೊಂಡಿದ್ದರಿಂದ ಜಿಯಾ ಅವರ ಸಾವು ಸಂಭವಿಸಿದೆ. ಹಂತಕ ನೇಣು ಹಾಕಿದ್ದನ್ನು ಸೂಚಿಸುವ ಯಾವುದೇ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿಲ್ಲ. ವಿವಿಧ ಪರೀಕ್ಷೆಗಳು ಆಕೆಯ ಆತ್ಮಹತ್ಯೆ ಪ್ರವೃತ್ತಿಯನ್ನು ಸೂಚಿಸುತ್ತವೆ. ವೈದ್ಯಕೀಯ ಪುರಾವೆಗಳು ಆಕೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎನ್ನುತ್ತವೆಯೇ ವಿನಾ ದೂರುದಾರೆ ರಬಿಯಾ ಸಾಕ್ಷ್ಯದಲ್ಲಿ ತಿಳಿಸಿರುವಂತೆ ಅಲ್ಲ.  

Kannada Bar & Bench
kannada.barandbench.com