ಖಾಸಗಿತನದ ಹಕ್ಕು: ಅಮೂಲ್ಯ ತೀರ್ಪಿನ ಅರ್ಜಿದಾರ, ಕರ್ನಾಟಕದ ಹೆಮ್ಮೆ ನ್ಯಾ. ಕೆ ಎಸ್ ಪುಟ್ಟಸ್ವಾಮಿ ಇನ್ನಿಲ್ಲ

ಆಧಾರ್ ಯೋಜನೆಯ ಸಿಂಧುತ್ವ ಪ್ರಶ್ನಿಸಿ 2012ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ರಕ್ಷಿಸಿರುವ ಮೂಲಭೂತ ಹಕ್ಕು ಎಂದು ಪೀಠ ಹೇಳಿದರೂ ಆಧಾರ್ ಯೋಜನೆಯನ್ನು ಎತ್ತಿ ಹಿಡಿಯಿತು.
ಖಾಸಗಿತನದ ಹಕ್ಕು: ಅಮೂಲ್ಯ ತೀರ್ಪಿನ ಅರ್ಜಿದಾರ, ಕರ್ನಾಟಕದ ಹೆಮ್ಮೆ ನ್ಯಾ. ಕೆ ಎಸ್ ಪುಟ್ಟಸ್ವಾಮಿ ಇನ್ನಿಲ್ಲ
Published on

ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ ಎಸ್ ಪುಟ್ಟಸ್ವಾಮಿ ಸೋಮವಾರ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ವಕೀಲರಾಗಿ 1952 ರಲ್ಲಿ ನೋಂದಾಯಿಸಿಕೊಂಡ ಅವರು ನವೆಂಬರ್ 1977ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

Also Read
ವೈವಾಹಿಕ ಅತ್ಯಾಚಾರ ಎಂಬುದು ಜನತೆ ಮತ್ತು ಪುರುಷ ಪ್ರಧಾನತೆಯ ನಡುವಿನ ಸಂಘರ್ಷ: ಸುಪ್ರೀಂನಲ್ಲಿ ಕರುಣಾ ನಂದಿ ವಾದ

ಹೈಕೋರ್ಟ್‌ನಲ್ಲಿ1986ರವರೆಗೆ ಸೇವೆ ಸಲ್ಲಿಸಿದ ಅವರು ನಿವೃತ್ತಿ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಪೀಠದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.

ನ್ಯಾಯಮೂರ್ತಿ ಪುಟ್ಟಸ್ವಾಮಿ ಅವರು ಆಧಾರ್ ಯೋಜನೆಯನ್ನು ಪ್ರಶ್ನಿಸಿದ ಮೊದಲ ವ್ಯಕ್ತಿ ಎಂದೇ ಪ್ರಸಿದ್ಧರು. ಆಧಾರ್‌ ಯೋಜನೆಯ ಸಿಂಧುತ್ವ ಪ್ರಶ್ನಿಸಿ 2012ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ರಕ್ಷಿಸಿರುವ ಮೂಲಭೂತ ಹಕ್ಕು ಎಂದು ಪೀಠ ಹೇಳಿತು. ಆದರೆ ಆಧಾರ್‌ ಯೋಜನೆಯನ್ನು ಅದು ಎತ್ತಿ ಹಿಡಿಯಿತು.

Also Read
ಸಲಿಂಗ ವಿವಾಹ ಕುರಿತು ಕಾಯಿದೆ ರೂಪಿಸುವುದು ಸರ್ಕಾರಕ್ಕೆ ಭವಿಷ್ಯದಲ್ಲಿ ಸಾಧ್ಯವಾಗಬಹುದು: ನ್ಯಾ. ಸಂಜಯ್ ಕಿಶನ್ ಕೌಲ್

ತೀರ್ಪು ಚಾರಿತ್ರಿಕ ಎಂದೇ ಬಣ್ಣಿತವಾಗಿದೆ. ಖಾಸಗಿತನದ ಹಕ್ಕು ಮೂಲಭೂತ ಹಕ್ಕಲ್ಲ ಸಂವಿಧಾನ ಖಾಸಗಿತನದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿಲ್ಲ ಎಂದು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಾದವನ್ನು ಬದಿಗೆ ಸರಿಸಿ 9 ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ತೀರ್ಪು ನೀಡಿತು. ವೈಯಕ್ತಿಕ ನೆಲೆಯಲ್ಲಿ ಹೆಚ್ಚಿನ ಮಾಹಿತಿ ಅಗೆಯುವುದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿತು. ಸಂತಾನೋತ್ಪತ್ತಿ ಹಕ್ಕು, ದಯಾಮರಣ, ಬಹುತ್ವ ಹೀಗೆ ಹಲವು ಅಂಶಗಳಿಗೆ ಸಂಬಂಧಿಸಿದಂತೆ ಈ ತೀರ್ಪು ಮಹತ್ವದ್ದಾಗಿದೆ.  

Kannada Bar & Bench
kannada.barandbench.com