ಆನ್‌‌ಲೈನ್ ಮೂಲಕ ಹೊಸ ಕೇಸು, ಆಕ್ಷೇಪಣಾ ಅರ್ಜಿ ಸಲ್ಲಿಕೆಗೆ ವೇಳೆ ನಿಗದಿ: ಆಪ್ ಬಿಡುಗಡೆ ಮಾಡಿದ ಕರ್ನಾಟಕ ಹೈಕೋರ್ಟ್

ಹೊಸ ಆಪ್ ಬಂದಿರುವುದರಿಂದ ಇನ್ನು ಮುಂದೆ ಭೇಟಿಯ ಕಾಲಾವಕಾಶ ಕೋರಿ ಹೈಕೋರ್ಟ್ ರೆಜಿಸ್ಟ್ರಿಗೆ ಇಮೇಲ್ ಕಳಿಸುವ ಅಗತ್ಯ ಇರುವುದಿಲ್ಲ. ಆಪ್‌ ಮೂಲಕವೇ ಸಂದರ್ಶನದ ಸಮಯವನ್ನು ನಿಗದಿಗೊಳಿಸಿಕೊಳ್ಳಬಹುದು.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Published on

ಹೊಸ ಪ್ರಕರಣ, ಆಕ್ಷೇಪಣಾ ಅರ್ಜಿ ಇತ್ಯಾದಿಗಳನ್ನು ಭೌತಿಕವಾಗಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಭೇಟಿಯ ಅವಕಾಶ ಕೋರಿ ವೇಳೆ ನಿಗದಿಪಡಿಸಿಕೊಳ್ಳಲು ಅನುವಾಗುವಂತೆ ಟೈಂಸ್ಲಾಟ್ ಬುಕಿಂಗ್ ಮಾಡುವ ಅಪ್ಲಿಕೇಷನ್ (ಆಪ್‌) ಸೌಲಭ್ಯ ಆರಂಭಿಸಿದೆ.

ನ್ಯಾಯಾಲಯದ ಶುಲ್ಕ ಪಾವತಿಸಲು ಮತ್ತು ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಲು ಸಹ ಈ ಆಪ್‌ನ ಬುಕಿಂಗ್ ಸೌಲಭ್ಯವನ್ನು ಬಳಸಬಹುದಾಗಿದೆ.

Also Read
ಸ್ವಯಂ ಕ್ವಾರಂಟೈನ್‌ ನಿಂದ ಮರಳಿದ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಓಕಾ

‘ಫಿಸಿಕಲ್ ಫೈಲಿಂಗ್ - ಆನ್‌ಲೈನ್ ಅಪಾಯಿಂಟ್ಮೆಂಟ್’ ಎಂಬುದು ಈ ನೂತನ ಆಪ್‌ನ ಹೆಸರು. ಇದರ ಲಿಂಕ್ ಇಲ್ಲಿದೆ.

ನ್ಯಾಯಾಂಗ ರೆಜಿಸ್ಟ್ರಾರ್ ಕೆ ಎಸ್ ಭರತ್ ಕುಮಾರ್ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ನೂತನ ಸೌಲಭ್ಯ ಬೆಂಗಳೂರು ಹೈಕೋರ್ಟಿನ ಪ್ರಧಾನ ಪೀಠದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

Also Read
ಕೋರ್ಟ್‌ ಸಿಬ್ಬಂದಿಗಳು ಕ್ವಾರಂಟೈನ್‌ ಗೆ ಒಳಗಾದ ಅವಧಿಯನ್ನು ‘ಕರ್ತವ್ಯದ ಮೇಲೆ’ ಎಂದು ಪರಿಗಣಿಸಿ: ಕರ್ನಾಟಕ ಹೈಕೋರ್ಟ್‌

ಈಗ, ಭೌತಿಕ ಫೈಲಿಂಗ್‌ಗಾಗಿ ವೇಳೆ ನಿಗದಿಪಡಿಸಿಕೊಳ್ಳಲು ಸುಲಭವಾದ ಸೌಲಭ್ಯ ಒದಗಿಸಲಾಗಿರುವುದರಿಂದ, ಇನ್ನು ಮುಂದೆ ಸಂದರ್ಶನಕ್ಕೆ ಸಮಯಾವಕಾಶ ಕೋರಿ hck-filing@hck.gov.in ಗೆ ಇಮೇಲ್ ಕಳುಹಿಸುವ ಅಗತ್ಯವಿಲ್ಲ. ನೂತನ ಸೌಲಭ್ಯದ ಉಪಯೋಗವನ್ನು ವಕೀಲರು ಮತ್ತು ದಾವೆದಾರರು ಬಳಸಿಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸಲು ಹೈಕೋರ್ಟಿನ ತಾಂತ್ರಿಕ ತಂಡವೊಂದು ಈ ಆಪ್ ಅಭಿವೃದ್ಧಿಪಡಿಸಿದೆ ಎಂದು ಮೂಲಗಳು ‘ಬಾರ್ ಅಂಡ್ ಬೆಂಚ್’ಗೆ ತಿಳಿಸಿವೆ.

ಅಧಿಸೂಚನೆಯ ಪ್ರತಿ ಇಲ್ಲಿ ಲಭ್ಯ:

Kannada Bar & Bench
kannada.barandbench.com