ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ತನ್ನದು ಹಿಂದೂ ಪರಿಶಿಷ್ಟ ಜಾತಿ ಎಂದಿದ್ದ ಶಾಸಕನ ಆಯ್ಕೆ ರದ್ದುಪಡಿಸಿದ ಕೇರಳ ಹೈಕೋರ್ಟ್

ದೇವಿಕುಲಂ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ನಾಮಪತ್ರ ಸಲ್ಲಿಸಿದ ವೇಳೆ ರಾಜಾ ಕ್ರೈಸ್ತ ಧರ್ಮಕ್ಕೆ ಸೇರಿದ್ದರಿಂದ ಅವರು ಆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತಿರಲಿಲ್ಲ ಎಂದ ಪೀಠ.
CPM MLA A Raja and Kerala High Court
CPM MLA A Raja and Kerala High Court
Published on

ಕೇರಳದ ದೇವಿಕುಲಂ ಕ್ಷೇತ್ರದಿಂದ 2021ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಿಯಾಗಿದ್ದ ಸಿಪಿಎಂ ಅಭ್ಯರ್ಥಿ ಎ ರಾಜಾ ಅವರ ಶಾಸಕತ್ವವನ್ನು ಜನಪ್ರತಿನಿಧಿ ಕಾಯಿದೆ 1951ರ ಅಡಿಯಲ್ಲಿ ಕೇರಳ ಹೈಕೋರ್ಟ್‌ ಸೋಮವಾರ ರದ್ದುಗೊಳಿಸಿದೆ [ಡಿ ಕುಮಾರ್‌ ಮತ್ತು ಎ ರಾಜಾ ನಡುವಣ ಪ್ರಕರಣ].

ದೇವಿಕುಲಂ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ನಾಮಪತ್ರ ಸಲ್ಲಿಸಿದ ವೇಳೆ ರಾಜಾ ಕ್ರೈಸ್ತ ಧರ್ಮಕ್ಕೆ ಸೇರಿದ್ದರಿಂದ  ಅವರು ಆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತಿರಲಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ರಾಜಾ ಅವರು ಹಿಂದೂ ಧರ್ಮಕ್ಕೆ ಸೇರಿದ್ದಾಗಿ ಹೇಳಿಕೊಳ್ಳುವಂತಿಲ್ಲ ಎಂದು ನ್ಯಾ. ಪಿ ಸೋಮರಾಜನ್ ಹೇಳಿದರು.

Also Read
ಶಾಸಕ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಪಟ್ಟಿ ಮಾಡಿದ ಹೈಕೋರ್ಟ್‌ ನಡೆಗೆ ಎಎಬಿ ತೀವ್ರ ಆಕ್ಷೇಪ

ಪ್ರತಿವಾದಿ ನಾಮಪತ್ರ ಸಲ್ಲಿಸಿದ ವೇಳೆ ಮತ್ತು ಅದಕ್ಕೂ ಬಹಳ ಹಿಂದೆಯೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು ವಾಸ್ತವವಾಗಿ ಕ್ರೈಸ್ತ ಧರ್ಮವನ್ನು ಪ್ರತಿನಿಧಿಸುತ್ತಿದ್ದಾರೆ ಎನ್ನುವ ಸಾಕಷ್ಟು ಆಧಾರಗಳಿವೆ. ಹಾಗಾಗಿ, ಮತಾಂತರದ ನಂತರ ಅವರು ಹಿಂದೂ ಧರ್ಮದ ಸದಸ್ಯ ಎಂದು ಹೇಳಿಕೊಳ್ಳುವಂತಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಾಮಪತ್ರ ತಿರಸ್ಕರಿಸಬೇಕಿತ್ತು. ಪ್ರತಿವಾದಿ ಕೇರಳ ರಾಜ್ಯದಲ್ಲಿ ʼಹಿಂದೂ ಪಾರಾಯಣʼದ ಸದಸ್ಯರಲ್ಲ.  ಪರಿಶಿಷ್ಟರಿಗೆ ಮೀಸಲಾದ ಕೇರಳ ರಾಜ್ಯದ ವಿಧಾನಸಭೆಗೆ ಆಯ್ಕೆಯಾಗಲು ಅವರು ಅರ್ಹರಲ್ಲ. ಜನ ಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್‌ 98ರ ಅಡಿಯಲ್ಲಿ ಅವರ ಶಾಸಕತ್ವ ಅನೂರ್ಜಿತಗೊಂಡಿದೆ ಎಂದು ತೀರ್ಪು ಘೋಷಿಸಿದೆ.

ತಾವು ಸ್ಪರ್ಧಿಸಿದ್ದ ಕ್ಷೇತ್ರ ಎಸ್‌ಸಿ ಸಮುದಾಯದ ಅಭ್ಯರ್ಥಿಗಳಿಗೆ ಮೀಸಲಾಗಿದೆ ಎಂದು ಕ್ರೈಸ್ತ ಧರ್ಮಕ್ಕೆ ಸೇರಿದ ರಾಜಾ ಅವರ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ ಕುಮಾರ್ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.  

ಚುನಾವಣಾಧಿಕಾರಿಗಳಿಗೆ ಈ ಕುರಿತು ಆಕ್ಷೇಪಣೆ ಸಲ್ಲಿಸಿದ್ದರೂ ಕಾರಣ ನೀಡದೆ ತಿರಸ್ಕರಿಸಿದ್ದರು ಪರಿಣಾಮ ರಾಜಾ 7,848 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
_D_Kumar_v_A_Raja_.pdf
Preview
Kannada Bar & Bench
kannada.barandbench.com