ಕೋವಿಡ್‌: ಸಿಎಂ ಪರಿಹಾರ ನಿಧಿಗೆ ರೂ 3.38 ಕೋಟಿ ದೇಣಿಗೆ ನೀಡಿದ ಕರ್ನಾಟಕದ ನ್ಯಾಯಾಧೀಶರು, ನ್ಯಾಯಾಲಯ ಸಿಬ್ಬಂದಿ

ತಮ್ಮ ಒಂದು ದಿನದ ವೇತನದಲ್ಲಿ ಹೈಕೋರ್ಟ್‌ನ ಸಿಬ್ಬಂದಿ ವರ್ಗ ಒಟ್ಟು ರೂ. 44 ಲಕ್ಷ ಮತ್ತು ಜಿಲ್ಲಾ ನ್ಯಾಯಾಂಗ ಸಿಬ್ಬಂದಿ ರೂ. 1.66 ಕೋಟಿ ದೇಣಿಗೆ ನೀಡಿದ್ದಾರೆ.
ಕೋವಿಡ್‌: ಸಿಎಂ ಪರಿಹಾರ ನಿಧಿಗೆ ರೂ 3.38 ಕೋಟಿ ದೇಣಿಗೆ ನೀಡಿದ ಕರ್ನಾಟಕದ ನ್ಯಾಯಾಧೀಶರು, ನ್ಯಾಯಾಲಯ ಸಿಬ್ಬಂದಿ
Karnataka High Court

ಕೋವಿಡ್‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕರ್ನಾಟಕ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ರೂ 3.38 ಕೋಟಿ ದೇಣಿಗೆ ನೀಡಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು ರೂ. 11.6 ಲಕ್ಷ ಹಾಗೂ ರಾಜ್ಯದ ನ್ಯಾಯಾಂಗ ಅಧಿಕಾರಿಗಳು ತಮ್ಮ ಮೂರು ದಿನದ ವೇತನವನ್ನು ದೇಣಿಗೆಯಾಗಿ ನೀಡಿದ್ದು, ಇದರ ಒಟ್ಟು ಮೊತ್ತ ರೂ. 1.15 ಕೋಟಿ ಆಗುತ್ತದೆ.

Also Read
ಸಿಎಸ್‌ಆರ್‌ ನಿಧಿ ಮೂಲಕ ದೇಣಿಗೆ ನೀಡದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಬಾಂಬೆ ಹೈಕೋರ್ಟ್‌

ಅಲ್ಲದೆ, ಹೈಕೋರ್ಟ್‌ ಸಿಬ್ಬಂದಿ ವರ್ಗ ಮತ್ತು ಮತ್ತು ಜಿಲ್ಲಾ ನ್ಯಾಯಾಂಗ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಿದ್ದು ಇದರ ಒಟ್ಟು ಮೊತ್ತ ಕ್ರಮವಾಗಿ ರೂ. 44 ಲಕ್ಷ ಹಾಗೂ ರೂ. 1.66 ಕೋಟಿ ಆಗಿದೆ.

ರಾಜ್ಯ ನ್ಯಾಯಾಂಗ ಇಲಾಖೆ, ವಿವಿಧೋದ್ದೇಶ ಸಹಕಾರ ಸೊಸೈಟಿ ಲಿಮಿಟೆಡ್, ರೂ. 1,00,000ವನ್ನು ದೇಣಿಗೆಯಾಗಿ ನೀಡಿದೆ.

No stories found.
Kannada Bar & Bench
kannada.barandbench.com