

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) 23 ಸದಸ್ಯ ಸ್ಥಾನಗಳಿಗೆ ಬುಧವಾರ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು. ಬೆಂಗಳೂರಿನಲ್ಲಿ ಸುಮಾರು ಶೇ 60ರಷ್ಟು ಮತದಾನವಾಗಿದ್ದು, ರಾಜ್ಯದಾದ್ಯಂತ ಶೇ. ೮೦ರಷ್ಟು ಮತದಾನವಾಗಿದೆ ಎನ್ನಲಾಗಿದೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮತದಾನ ನಡೆಯಿತು. ಮೆಯೋ ಹಾಲ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಸಿಟಿ ಸಿವಿಲ್ ಮತ್ತು ಸತ್ರ ಕೋರ್ಟ್ ಮತ್ತು ಹೈಕೋರ್ಟ್ ವಕೀಲರು ಶಾಂತಿಯುತವಾಗಿ ತಮ್ಮ ಮತ ಚಲಾಯಿಸಿದರು.
ಕೆಎಸ್‌ಬಿಸಿಯಲ್ಲಿ ಒಟ್ಟು 26 ಸದಸ್ಯ ಸ್ಥಾನಗಳಿದ್ದು 23 ಸ್ಥಾನಕ್ಕೆ ಮತ ಚಲಾವಣೆ ನಡೆಯಿತು. ಮತದಾನದ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕರು ಹಾಗೂ ಮತದಾರ ವಕೀಲರು ಕಿಕ್ಕಿರಿದು ನೆರೆದಿದ್ದರು.