ಕೋವಿಡ್ ಹಿನ್ನೆಲೆ: 2020-21ನೇ ಸಾಲಿನ ಎಲ್ಎಲ್‌ಬಿ ವಿದ್ಯಾರ್ಥಿಗಳ ತೇರ್ಗಡೆಗೆ ಧಾರವಾಡ ವಿವಿ ಸುತ್ತೋಲೆ

ಎಲ್ಎಲ್‌ಬಿ ಕೋರ್ಸ್‌ನ ಮೂರು ವರ್ಷದ ಪದವಿಯ 2 ಮತ್ತು 4ನೇ ಸೆಮಿಸ್ಟರ್ ಹಾಗೂ ಐದು ವರ್ಷದ ಪದವಿಯ 2, 4, 6 ಹಾಗೂ 8ನೇ ಸೆಮಿಸ್ಟರ್ (ನಿಯಮಿತ) ವಿದ್ಯಾರ್ಥಿಗಳನ್ನು ಮುಂದಿನ ವರ್ಗಕ್ಕೆ ಉತ್ತೀರ್ಣಗೊಳಿಸಲು ವಿವಿ ನಿರ್ಧರಿಸಿದೆ.
Karnataka University, Dharwad
Karnataka University, Dharwad
Published on

ಪದವಿ, ಸ್ನಾತಕೋತ್ತರ ಹಾಗೂ ಎಲ್‌ಎಲ್‌ಬಿ ಕೋರ್ಸ್‌ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ವಿವಿ ಈ ನಿರ್ಣಯ ಕೈಗೊಂಡಿದೆ.

Also Read
ಕೋವಿಡ್ ಪೀಡಿತ ಕುಟುಂಬಗಳ ಪುನರ್ವಸತಿಗಾಗಿ ರಾಷ್ಟ್ರೀಯ ಯೋಜನೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

2020-21ನೇ ಸಾಲಿಗೆ ಅನ್ವಯಿಸುವಂತೆ ಪದವಿ ವಿಭಾಗದ 2 ಮತ್ತು 4ನೇ ಸೆಮಿಸ್ಟರ್‌ ಹಾಗೂ ಸ್ನಾತಕೋತ್ತರ ವಿಭಾಗದ 2ನೇ ಸೆಮಿಸ್ಟರ್‌ ವಿದ್ಯಾರ್ಥಿಗಳನ್ನು ಮುಂದಿನ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ.

ಅಲ್ಲದೆ ಕರ್ನಾಟಕ ಹೈಕೋರ್ಟ್‌ ಆದೇಶದಂತೆ ಹಾಗೂ ಡೀನ್‌ ಅವರ ನಿರ್ಣಯದಂತೆ ಎಲ್‌ಎಲ್‌ಬಿ ಕೋರ್ಸ್‌ನ ಮೂರು ವರ್ಷದ ಪದವಿಯ 2 ಮತ್ತು 4ನೇ ಸೆಮಿಸ್ಟರ್‌ ಹಾಗೂ ಐದು ವರ್ಷದ ಪದವಿಯ 2, 4, 6 ಹಾಗೂ 8ನೇ ಸೆಮಿಸ್ಟರ್‌ (ನಿಯಮಿತ) ವಿದ್ಯಾರ್ಥಿಗಳನ್ನು ಮುಂದಿನ ವರ್ಗಕ್ಕೆ ಉತ್ತೀರ್ಣಗೊಳಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

Kannada Bar & Bench
kannada.barandbench.com