ಪದ್ಮ ಲಕ್ಷ್ಮಿ ಕೇರಳದ ಮೊದಲ ತೃತೀಯಲಿಂಗಿ ವಕೀಲರು

ಮಾರ್ಚ್ 19 ರ ಭಾನುವಾರದಂದು ಕೇರಳ ವಕೀಲರ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲವರ್ಗದ ದಾಖಲಾತಿ ಪ್ರಮಾಣಪತ್ರ ಪಡೆದ 1,500 ಕಾನೂನು ಪದವೀಧರರಲ್ಲಿ ಲಕ್ಷ್ಮಿ ಕೂಡ ಒಬ್ಬರು.
Advocate Padma Lakshmi
Advocate Padma Lakshmi

ಕೇರಳದ ತೃತೀಯಲಿಂಗಿ ವ್ಯಕ್ತಿಯೊಬ್ಬರು ಕೇರಳ ವಕೀಲ ಪರಿಷತ್ತಿನಲ್ಲಿ ವಕೀಲರಾಗಿ ದಾಖಲಾಗಿದ್ದಾರೆ. ಆ ಮೂಲಕ ಪದ್ಮ ಲಕ್ಷ್ಮಿ ಅವರು ಕಪ್ಪು ನಿಲುವಂಗಿ ಧರಿಸುತ್ತಿರುವ ರಾಜ್ಯದ ಮೊದಲ ತೃತೀಯಲಿಂಗಿ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಮಾರ್ಚ್ 19 ರ ಭಾನುವಾರದಂದು ಕೇರಳ ವಕೀಲರ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲವರ್ಗದ ದಾಖಲಾತಿ ಪ್ರಮಾಣಪತ್ರ ಪಡೆದ 1,500 ಕಾನೂನು ಪದವೀಧರರಲ್ಲಿ ಲಕ್ಷ್ಮಿ ಕೂಡ ಒಬ್ಬರು.

Also Read
ವಕೀಲಿಕೆ ಮಾಡಿದರೂ ತಾರತಮ್ಯ ಮುಂದುವರೆಯುತ್ತದೇನೋ ಎಂಬ ಅಳುಕಿದೆ: ತೃತೀಯ ಲಿಂಗಿ ಕಾನೂನು ವಿದ್ಯಾರ್ಥಿ ಶಶಿ

ಲಕ್ಷ್ಮಿ ಅವರ ಸಾಧನೆ ರಾಜ್ಯದ ಕಾನೂನು ಸಚಿವ ಪಿ ರಾಜೀವ್ ಅವರ ಗಮನವನ್ನು ಸೆಳೆದಿದೆ, ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅವರನ್ನು ಅಭಿನಂದಿಸಿದ್ದಾರೆ.

ಪದ್ಮ ಲಕ್ಷ್ಮಿ ಅವರಂತಹ ಮಂದಿಗೆ ಇರುವ ಅಡೆತಡೆಗಳನ್ನು ಒಪ್ಪಿಕೊಂಡಿರುವ ರಾಜೀವ್‌ ಅವರು, ಆಕೆಯ ತರಹದವರು ಎದುರಿಸಬೇಕಾದ ಕಷ್ಟದ ಬಗ್ಗೆ ಗಮನಸೆಳೆಯುತ್ತಾ ತಮ್ಮ ಬಗ್ಗೆ ಕರುಣೆ ತೋರದ ಅಥವಾ ತಮ್ಮಂತಹವರನ್ನು ಹೆಚ್ಚು ಪ್ರೋತ್ಸಾಹಿಸದ ಸಮಾಜದಲ್ಲಿ ಒಂದು ಸ್ಥಾನ ಕಂಡುಕೊಳ್ಳಲು ಅವರು ಶ್ರಮಿಸಿರುವ ಹಾದಿ ಸುಲಭಸಾಧ್ಯವಾದುದಲ್ಲ ಎಂದಿದ್ದಾರೆ. ಪದ್ಮ ಲಕ್ಷ್ಮಿ ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದಾರೆ.

Related Stories

No stories found.
Kannada Bar & Bench
kannada.barandbench.com