[ದಿಲೀಪ್ ಪ್ರಕರಣ] ನಟಿ ಮೇಲಿನ ದೌರ್ಜನ್ಯ: ಹೆಚ್ಚಿನ ತನಿಖೆ ರದ್ದುಗೊಳಿಸಲು ನಿರಾಕರಿಸಿದ ಕೇರಳ ಹೈಕೋರ್ಟ್

ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ 2017ರ ಪ್ರಕರಣದ ಹೆಚ್ಚಿನ ತನಿಖೆ ರದ್ದುಗೊಳಿಸುವಂತೆ ಕೋರಿ ನಟ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾ. ಕೌಸರ್ ಎಡಪ್ಪಗತ್ ತೀರ್ಪು ನೀಡಿದರು.
[ದಿಲೀಪ್ ಪ್ರಕರಣ] ನಟಿ ಮೇಲಿನ ದೌರ್ಜನ್ಯ: ಹೆಚ್ಚಿನ ತನಿಖೆ ರದ್ದುಗೊಳಿಸಲು ನಿರಾಕರಿಸಿದ ಕೇರಳ ಹೈಕೋರ್ಟ್

Kerala HC with Dileep

ಮಲಯಾಳಂ ಸಿನಿ ನಟ ದಿಲೀಪ್ ಆರೋಪಿಯಾಗಿರುವ 2017ರ ಬಹುಭಾಷಾ ನಟಿ ಲೈಂಗಿಕ ದೌರ್ಜನ್ಯ ಪ್ರಕರಣದ ಹೆಚ್ಚಿನ ತನಿಖೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ [ಪಿ ಗೋಪಾಲಕೃಷ್ಣನ್ ಅಲಿಯಾಸ್ ದಿಲೀಪ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರು ನಟ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡಿದರು.

Also Read
ತನಿಖಾಧಿಕಾರಿ ಕೊಲೆ ಸಂಚು ಪ್ರಕರಣ: ನಟ ದಿಲೀಪ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್

ನಟಿ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆಯನ್ನು ಅಪಹರಿಸಿದ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ (ಸಿಬಿಐ ವಿಶೇಷ ಸಂಖ್ಯೆ III) ದಿಲೀಪ್‌ ಮತ್ತು ಅವರ ಸಹಚರರು ವಿಚಾರಣೆ ಎದುರಿಸುತ್ತಿದ್ದಾರೆ.

Also Read
ಹಲ್ಲೆ ಪ್ರಕರಣದ ತನಿಖೆ ರದ್ದತಿಗೆ ನಟ ದಿಲೀಪ್ ಮನವಿ: ಸಂತ್ರಸ್ತ ನಟಿ ಪಕ್ಷಕಾರಳಾಗಲು ಕೇರಳ ಹೈಕೋರ್ಟ್ ಅಸ್ತು [ಚುಟುಕು]

ಮುಂದಿನ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಹಲವು ದೀರ್ಘ ವಿಚಾರಣೆಗಳನ್ನು ನಡೆಸಿದ್ದ ಹೈಕೋರ್ಟ್ ತನ್ನ ತೀರ್ಪನ್ನು ಫೆಬ್ರವರಿ 24, 2022ರಂದು ಕಾಯ್ದಿರಿಸಿತ್ತು.

Related Stories

No stories found.
Kannada Bar & Bench
kannada.barandbench.com