ಮಹಿಳಾ ನ್ಯಾಯಾಂಗ ಅಧಿಕಾರಿಗಳ ವಸ್ತ್ರ ಸಂಹಿತೆಯನ್ನು ಕೇರಳ ಹೈಕೋರ್ಟ್ ಪರಿಷ್ಕರಿಸಿದೆ.
ಈವರೆಗೆ ಕೇರಳದಲ್ಲಿ ಕಡ್ಡಾಯವಾಗಿದ್ದ ಸೀರೆ ಮತ್ತು ಕುಪ್ಪಸದ ಜೊತೆಗೆ, ನ್ಯಾಯಾಂಗ ಅಧಿಕಾರಿಗಳು ಸಲ್ವಾರ್ ಕಮೀಜ್ ಅಥವಾ ಕುಪ್ಪಸ/ಶರ್ಟ್ ಜೊತೆಗೆ ಪೂರ್ಣ ಉದ್ದದ ಪ್ಯಾಂಟ್/ಸ್ಕರ್ಟ್‌ಗಳನ್ನು ಧರಿಸಬಹುದಾಗಿದೆ.
ಆದರೆ ಬಟ್ಟೆ ಈಗಲೂ ಕಪ್ಪು ಬಿಳಿ ಬಣ್ಣದ್ದಾಗಿರಬೇಕು ಜೊತೆಗೆ "ಸಾಧಾರಣ ಮತ್ತು ಸರಳ ಮತ್ತು ನ್ಯಾಯಾಂಗ ಅಧಿಕಾರಿಯ ಘನತೆಗೆ ಸರಿಹೊಂದವಂತಿರಬೇಕು” ಎಂದು ತಿಳಿಸಲಾಗಿದೆ.
ಈ ಸಂಬಂಧ ಅಕ್ಟೋಬರ್ 7 ರಂದು ಹೈಕೋರ್ಟ್ ಸುತ್ತೋಲೆ ಹೊರಡಿಸಲಾಗಿದ್ದು ಬದಲಾಗುತ್ತಿರುವ ಹವಾಮಾನ ಮತ್ತು ನ್ಯಾಯಾಲಯಗಳಲ್ಲಿನ ಮೂಲಸೌಕರ್ಯ ಕೊರತೆಯಿಂದಾಗಿ ಮಹಿಳಾ ನ್ಯಾಯಾಂಗ ಅಧಿಕಾರಿಗಳಿಗೆ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುವ ಸಲುವಾಗಿ ವಸ್ತ್ರ ಸಂಹಿತೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
[ಸುತ್ತೋಲೆಯನ್ನು ಇಲ್ಲಿ ಓದಿ]