ಕೇರಳ ನರಬಲಿ: ಮೂವರು ಆರೋಪಿಗಳನ್ನು 12 ದಿನ ಪೊಲೀಸ್ ವಶಕ್ಕೆ ನೀಡಿದ ಎರ್ನಾಕುಲಂ ನ್ಯಾಯಾಲಯ

ಇಬ್ಬರು ಮಹಿಳೆಯರ ಛಿದ್ರಗೊಂಡ ಶವಗಳು ಮಂಗಳವಾರ ಪತ್ತೆಯಾಗಿ ನರಬಲಿ ಪ್ರಕರಣ ಬೆಳಕಿಗೆ ಬಂದಿತ್ತು.
Ernakulam JFCM 8
Ernakulam JFCM 8

ಕೇರಳ ನರಬಲಿ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಎರ್ನಾಕುಲಂನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ನಿನ್ನೆ ಪ್ರಥಮ ದರ್ಜೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಎಲ್ಡೋಸ್ ಮ್ಯಾಥ್ಯೂ ಅವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪುರುಷ ಆರೋಪಿಗಳನ್ನು ಕಾಕ್ಕನಾಡು ಉಪಜೈಲಿಗೆ ಮತ್ತು ಲೈಲಾಳನ್ನು ಮಹಿಳಾ ಜೈಲಿಗೆ ಕರೆದೊಯ್ಯಲಾಗಿತ್ತು. ನ್ಯಾಯಾಲಯ ವಿಚಾರಣೆ ನಡೆಸಿದ ವೇಳೆ ಪೊಲೀಸರು ಇತಮ್ಮ ವಶಕ್ಕೆ ಒಪ್ಪಿಸುವಂತೆ ಇನ್ನೂ ಕೋರಿರಲಿಲ್ಲ.

Also Read
[ಕೇರಳ ನರಬಲಿ] ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ಎರ್ನಾಕುಲಂ ನ್ಯಾಯಾಲಯ

ಇಬ್ಬರು ಮಹಿಳೆಯರ ಛಿದ್ರಗೊಂಡ ಶವಗಳು ಮಂಗಳವಾರ ಪತ್ತೆಯಾಗಿ ನರಬಲಿ ಪ್ರಕರಣ ಬೆಳಕಿಗೆ ಬಂದಿತ್ತು. ಅಪರಾಧಕ್ಕೆ ಸಂಬಂಧಿಸಿದಂತೆ ಮುಹಮ್ಮದ್ ಶಾಫಿ (ಅಲಿಯಾಸ್ ರಶೀದ್), ಭಗವಲ್ ಸಿಂಗ್ ಮತ್ತು ಲೈಲಾ ಭಗವಾಲ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.

ಎರ್ನಾಕುಲಂನಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರೂ ಮಹಿಳೆಯರಿಗೆ ಯಾವುದೇ ಕುಟುಂಬ ಇರಲಿಲ್ಲ. ಇವರು ಜೂನ್‌ ಮತ್ತು ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ನರಬಲಿ ಘಟನೆ ಕುರಿತಂತೆ ಕೇರಳ ಹೈಕೋರ್ಟ್‌ ಕೂಡ ಆಘಾತ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com