ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ: ಒಂಬತ್ತು ಮಂದಿಯನ್ನು ದೋಷಮುಕ್ತಗೊಳಿಸಿದ ಮಡಿಕೇರಿ ನ್ಯಾಯಾಲಯ

ತುಫೈಲ್, ನಯಾಜ್, ಅಫ್ರಿನ್, ಮೊಹಮ್ಮದ್, ಮುಸ್ತಫಾ, ಇಲಿಯಾಸ್, ಇರ್ಫಾನ್, ಮಜೀದ್‌ ಹಾಗೂ ಹ್ಯಾರಿಸ್ ಖುಲಾಸೆಯಾದವರು.
Court complex, Madikeri.
Court complex, Madikeri.
Published on

ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಪ್ರವೀಣ್‌ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದ್ದು ಒಂಬತ್ತು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ತುಫೈಲ್, ನಯಾಜ್, ಅಫ್ರಿನ್, ಮೊಹಮ್ಮದ್, ಮುಸ್ತಫಾ, ಇಲಿಯಾಸ್, ಇರ್ಫಾನ್, ಮಜೀದ್‌ ಹಾಗೂ ಹ್ಯಾರಿಸ್ ಖುಲಾಸೆಯಾದವರು.

Also Read
[ಎಸ್‌ಸಿ/ಎಸ್‌ಟಿ ಕಾಯಿದೆ] ಪ್ರಮಾಣಿತ ದಾಖಲೆಗಳಿಗೆ ಕಾಯುವುದರಿಂದ ಖುಲಾಸೆ ಪ್ರಶ್ನಿಸಲು ವಿಳಂಬ: ಹೈಕೋರ್ಟ್‌

ಕೊಡಗಿನ ಕುಶಾಲನಗರ ಸಮೀಪದ ಗುಡ್ಡೇಹೊಸೂರಿನಲ್ಲಿ ಘಟನೆ ನಡೆದಿತ್ತು. ವೃತ್ತಿಯಿಂದ ಆಟೊ ಚಾಲಕನಾಗಿದ್ದ ಪ್ರವೀಣ್‌ ಪೂಜಾರಿಯನ್ನು 2016ರ ಆ. 14ರಂದು ಕೊಲೆ ಮಾಡಲಾಗಿತ್ತು. ಸಂಘ ಪರಿವಾರ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರವೀಣ್‌ನನ್ನು ರಿಕ್ಷಾ ಬಾಡಿಗೆ ಪಡೆಯುವ ನೆಪದಲ್ಲಿ ಕರೆದೊಯ್ದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

Kannada Bar & Bench
kannada.barandbench.com