ಡೋರಂಡಾ ಖಜಾನೆ ಹಗರಣ: ಲಾಲುಗೆ 5 ವರ್ಷ ಜೈಲು ಶಿಕ್ಷೆ, ₹ 60 ಲಕ್ಷ ದಂಡ ವಿಧಿಸಿದ ರಾಂಚಿ ನ್ಯಾಯಾಲಯ [ಚುಟುಕು]

Lalu Prasad YadavFacebook

Lalu Prasad YadavFacebook

₹139 ಕೋಟಿ ಮೊತ್ತದ ಡೋರಂಡಾ ಖಜಾನೆ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ, ₹ 60 ಲಕ್ಷ ದಂಡ ವಿಧಿಸಿದೆ.

ಪ್ರಕರಣದಲ್ಲಿ ಲಾಲೂ ದೋಷಿ ಎಂದು ಕಳೆದ ವಾರ ನ್ಯಾಯಾಲಯ ಘೋಷಿಸಿತ್ತು. ನ್ಯಾಯಾಧೀಶ ಸಿ ಕೆ ಶಶಿ ಅವರು ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದರು. ದಶಕಗಳ ಹಿಂದೆ ನಡೆದಿದ್ದ ₹ 950 ಕೋಟಿ ಮೊತ್ತದ ಮೇವು ಹಗರಣದಲ್ಲಿ ರಾಜ್ಯದ ವಿವಿಧ ಸರ್ಕಾರಿ ಖಜಾನೆಗಳಿಂದ ಅಕ್ರಮವಾಗಿ ಹಣ ಪಡೆದುಕೊಳ್ಳಲಾಗಿತ್ತು. ಡೋರಾಂಡಾ ಖಜಾನೆಯಿಂದ ಹೀಗೆ ₹139 ಕೋಟಿ ಸ್ವೀಕರಿಸಲಾಗಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com