ಜಹಾಂಗೀರ್‌ಪುರಿ, ರಾಮನವಮಿ ಹಿಂಸಾಚಾರ: ಎನ್ಐಎ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಸರಣಿ ಘಟನೆಗಳನ್ನು ಗಮನಿಸಿದರೆ ಹಿಂದೂಗಳನ್ನು ಗುರಿಯಾಗಿಸಿ ಐಸಿಸ್‌ ರೀತಿಯ ಭಯೋತ್ಪಾದಕ ಸಂಘಟನೆಗಳು ಕೃತ್ಯಕ್ಕೆ ಹಣ ನೀಡಿದಂತೆ ತೋರುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಜಹಾಂಗೀರ್‌ಪುರಿ, ರಾಮನವಮಿ ಹಿಂಸಾಚಾರ: ಎನ್ಐಎ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
ramesh sogemane

ದೆಹಲಿಯ ಜಹಾಂಗೀರ್‌ಪುರಿ ಹಾಗೂ ಇತರ ಏಳು ರಾಜ್ಯಗಳಲ್ಲಿ ರಾಮ ನವಮಿ ಸಂದರ್ಭದಲ್ಲಿ ನಡೆದ ಕೋಮು ಹಿಂಸಾಚಾರದ ಬಗ್ಗೆ ಎನ್‌ಐಎ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಹಿಂಸಾಚಾರದ ಹಿಂದೆ ರಾಷ್ಟ್ರ ವಿರೋಧಿ ಸಂಘಟನೆಗಳು ಹಾಗೂ ವಿದೇಶಿ ಶಕ್ತಿಗಳ ಕೈವಾಡವಿದೆಯೇ ಎಂದು ಅರಿಯಲು ತನಿಖೆಯ ಅಗತ್ಯವಿದೆ ಎಂದು ವಕೀಲ ವಿನೀತ್ ಜಿಂದಾಲ್ ಅವರು ಸಲ್ಲಿಸಿರುವ ಪಿಐಎಲ್‌ನಲ್ಲಿ ಹೇಳಲಾಗಿದೆ. ಸರಣಿ ಘಟನೆಗಳನ್ನು ಗಮನಿಸಿದರೆ ಹಿಂದೂಗಳನ್ನು ಗುರಿಯಾಗಿಸಿ ಐಸಿಸ್‌ ರೀತಿಯ ಭಯೋತ್ಪಾದಕ ಸಂಘಟನೆಗಳು ಕೃತ್ಯಕ್ಕೆ ಹಣ ನೀಡಿದಂತೆ ತೋರುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಜಹಾಂಗೀರ್‌ಪುರಿ ಗಲಭೆ ಕುರಿತು ಸಿಜೆಐಗೆ ಪತ್ರ ಮನವಿ: ಸ್ವಯಂಪ್ರೇರಿತ ಮೊಕದ್ದಮೆ, ನ್ಯಾಯಾಂಗ ತನಿಖೆಗೆ ಕೋರಿಕೆ

ಜಹಾಂಗೀರ್‌ಪುರಿ ಗಲಭೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮತ್ತೊಬ್ಬ ವಕೀಲ ಅಮೃತ್‌ಪಾಲ್‌ ಸಿಂಗ್‌ ಖಾಸ್ಲಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಪತ್ರ ಮನವಿ ಸಲ್ಲಿಸಿದ್ದರು.

ದಂಗೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ತನ್ನ ಎಪಿಸ್ಟೊಲರಿ ಅಧಿಕಾರ ವ್ಯಾಪ್ತಿ (ಸಂತ್ರಸ್ತರ ಪರವಾಗಿ ಬರೆಯಲಾದ ಮನವಿ ಪತ್ರವನ್ನು ಆಧರಿಸಿ ನ್ಯಾಯಿಕ ಕ್ರಮಕ್ಕೆ ಮುಂದಾಗಲು ನ್ಯಾಯಾಲಯಕ್ಕೆ ಇರುವ ಅಧಿಕಾರ) ಚಲಾಯಿಸಿ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಅವರು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com